ಶಾಲಾ ಮಕ್ಕಳೊಂದಿಗೆ 68ನೇ ಹುಟ್ಟುಹಬ್ಬ: ಮೋದಿ ಇಂದು ವಾರಾಣಸಿಗೆ
Team Udayavani, Sep 17, 2018, 11:37 AM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 68ನೇ ಹುಟ್ಟುಹಬ್ಬವನ್ನು ತಮ್ಮ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಯಲ್ಲಿ ಆಚರಿಸಿಕೊಳ್ಳಲು ಅಲ್ಲಿಗೆ ಹೋಗಲಿದ್ದಾರೆ.
ಪ್ರಧಾನಿ ಮೋದಿ ತಮ್ಮ ಹುಟ್ಟು ಹಬ್ಬವನ್ನು ವಾರಾಣಸಿ ಜಿಲ್ಲೆಯ ಶಾಲಾ ಮಕ್ಕಳೊಂದಿಗೆ ಆಚರಿಸುವರೆಂದು ಮೂಲಗಳು ತಿಳಿಸಿವೆ.
ಇಂದು ಸೋಮವಾರ ಮಧ್ಯಾಹ್ನದ ವೇಳೆಗೆ ಪ್ರಧಾನಿ ಮೋದಿ ಅವರು ವಾರಾಣಸಿ ತಲುಪಲಿದ್ದಾರೆ. ಬಿಜೆಪಿಯ ಅತ್ಯಂತ ಬಲಿಷ್ಠ ನಾಯಕ ಎನಿಸಿಕೊಂಡರುವ ಪ್ರಧಾನಿ ಮೋದಿ ಅವರಗೆ ಅದ್ದೂರಿಯ ಸ್ವಾಗತ ನೀಡಲು ವಾರಾಣಸಿಯಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.
ಈ ಸಂದರ್ಭದಲ್ಲಿ ಮೋದಿ ಅವರು ತಾವು ದತ್ತು ಪಡೆದಿರುವ ವಾರಾಣಸಿ ಕ್ಷೇತ್ರದ ಜಯಪುರ, ನಾಗೇಪುರ ಮತ್ತು ಕಕ್ರಾಹಿಯಾ ಗ್ರಾಮಗಳಿಗೂ ಭೇಟಿ ಕೊಡುತ್ತಾರೆ.
ಈ ಸಂದರ್ಭದಲ್ಲಿ ಮೋದಿ ಜೀವನ ಗಾಥೆಯನ್ನು ಆಧರಿಸಿ ತಯಾರಿಸಲಾಗಿರುವ ಚಲೋ ಜೀತೇಂ ಹೈಂ ಎಂಬ ಚಿತ್ರವನ್ನೂ ಪ್ರದರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್