ನಿಷೇಧಿತ ದ್ರವ್ಯ ಸೇವನೆ: ಅಂಶುಲಾಗೆ 4 ವರ್ಷ ನಿಷೇಧ
Team Udayavani, Jun 28, 2021, 11:38 PM IST
ಹೊಸದಿಲ್ಲಿ : ಭಾರತದ ಮಹಿಳಾ ಕ್ರಿಕೆಟರ್ ಅಂಶುಲಾ ರಾವ್ ನಿಷೇಧಿತ ದ್ರವ್ಯ ಸೇವನೆ ಪ್ರಕರಣಕ್ಕೆ ಸಂಬಂಧಿಸಿ 4 ವರ್ಷ ಕ್ರಿಕೆಟ್ನಿಂದ ನಿಷೇಧಿಸಲ್ಪಟ್ಟಿದ್ದಾರೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಉದ್ದೀಪನ ಮದ್ದು ಸೇವನೆಗಾಗಿ ನಿಷೇಧಕ್ಕೆ ಒಳಗಾದ ಮೊದಲ ಮಹಿಳೆಯೆಂಬ ಅಪವಾದಕ್ಕೆ ಕಾರಣರಾಗಿದ್ದಾರೆ.
ರಾಷ್ಟ್ರೀಯ ದ್ರವ್ಯ ವಿರೋಧಿ ದಳ (ನಾಡಾ) ನಡೆಸಿದ ದ್ರವ್ಯ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ಆಲ್ರೌಂಡರ್ ಅಂಶುಲಾ ರಾವ್ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಕ್ರಿಕೆಟ್ನಿಂದ ನಾಲ್ಕು ವರ್ಷಗಳ ಕಾಲ ನಿಷೇಧಿಸಲಾಗಿದೆ.
ಬಿಸಿಸಿಐಯ ಅಂಗಸಂಸ್ಥೆ ಆಗಿರುವ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್ನಲ್ಲಿ ನೋಂದಾಯಿಸಿಕೊಂಡಿರುವ ಅಂಶುಲಾ, 2019-20ರಲ್ಲಿ ಬಿಸಿಸಿಐಯ ಅಂಡರ್-23 ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.
ಕಳೆದ ವರ್ಷದ ಮಾರ್ಚ್ 14ರಂದು ಬರೋಡಾದಲ್ಲಿ ನಡೆ ಸಲಾದ ಪರೀಕ್ಷೆಯ ವೇಳೆಯೂ ಅಂಶುಲಾ ಅವರು ನಿಷೇಧಿತ ಅನಾಬೊಲಿಕ್ ಸ್ಟೀರಾಯx… ಸೇವಿಸಿದ್ದು ಕಂಡು ಬಂದಿತ್ತು. ತನಗೆ ಗೊತ್ತಿಲ್ಲದೆ ಈ ಮದ್ದು ದೇಹದೊಳಕ್ಕೆ ಹೋಗಿದೆಯೆಂದು ಅಂಶುಲಾ ವಾದಿಸಿದ್ದರಾದರೂ, ಉದ್ದೇಶಪೂರ್ವಕವಾಗಿ ದ್ರವ್ಯ ಸೇವನೆ ಮಾಡಲಾಗಿದೆ ಎಂದು ನಾಡಾ ಹೇಳಿದೆ.