ಚೆನ್ನೈ : 12 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ವಶ; 8 ಮಂದಿ ಸೆರೆ
Team Udayavani, Aug 1, 2018, 5:11 PM IST
ಚೆನ್ನೈ : ನಗರದಲ್ಲಿನ ವಿವಿಧ ಭೂ ಕಬಳಿಕೆ ಪ್ರಕರಣಗಳಲ್ಲಿ ಪೊಲೀಸರು ಎಂಟು ಮಂದಿಯನ್ನು ಬಂಧಿಸಿ 12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಇದರಲ್ಲಿ ಶೋಲಿಂಗನಲ್ಲೂರ ಸಮೀಪದಲ್ಲಿನ 12,000 ಚದರಡಿ ಸ್ಥಳದ ಆಸ್ತಿ ಕೂಡ ಸೇರಿದೆ. ಇದನ್ನು ಆರೋಪಿಯು ತಾನೇ ಈ ಸ್ವತ್ತಿನ ಮೂಲ ಮಾಲಕನೆಂದು ಬಿಂಬಿಸಿಕೊಂಡು ಖೋಟಾ ದಾಖಲೆ ಪತ್ರಗಳನ್ನು ಸೃಷ್ಟಿಸಿ ಭೂಕಬಳಿಕೆ ಮಾಡಿದ್ದ; ಇದರ ಮೌಲ್ಯ ಐದು ಕೋಟಿ ರೂ. ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಪಳ್ಳಿಕರಣೈ ಆಸ್ತಿಯನ್ನು ಕಬಳಿಸಿಕೊಂಡು ಟಿ ನಗರ ಪಿಎಸ್ಯು ಬ್ಯಾಂಕಿಗೆ 3.5 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ಬಂಧಿತ ಎಂಟು ಮಂದಿ ಆರೋಪಿಗಳನ್ನು ವಿಶೇಷ ಕೋರ್ಟಿಗೆ ಹಾಜರುಪಡಿಸಲಾಗಿದ್ದು ಅನಂತರ ಜೈಲಿಗೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.