ಬುಡಕಟ್ಟು ಸಂಘಟನೆಗಳಿಂದ 12 ತಾಸುಗಳ ಅಸ್ಸಾಂ ಬಂದ್, ರಸ್ತೆ ತಡೆ
Team Udayavani, Jan 11, 2019, 6:19 AM IST
ಗುವಾಹಟಿ : ಬುಡಕಟ್ಟು ಸಂಘಟನೆಗಳ ಸಮೂಹ ಇಂದು ಶುಕ್ರವಾರ 12 ತಾಸುಗಳ ಅಸ್ಸಾಂ ಬಂದ್ ಕರೆ ನೀಡಿದ್ದು ಪ್ರತಿಭಟನಕಾರರು ಮೋಟಾರು ವಾಹನಗಳು ಬೋಡೋಲ್ಯಾಂಡ್ ಪ್ರವೇಶಿಸುವುದನ್ನು ತಡೆಯಲು ರಸ್ತೆಯಲ್ಲಿ ಟೈರ್ಗಳನ್ನು ಸುಡುತ್ತಿದ್ದಾರೆ; ಅನೇಕ ಕಡೆಗಳಲ್ಲಿ ಮರದ ದಿಮ್ಮಿಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟಿದ್ದಾರೆ.
ರಾಜ್ಯದಲ್ಲಿನ ಆರು ಜನಾಂಗೀಯ ಸಮುದಾಯಗಳಿಗೆ ಎಸ್ಟಿ ಸ್ಥಾನಮಾನ ನೀಡುವ ಮಸೂದೆಯನ್ನು ಪ್ರತಿಭಟಿಸುವ ಸಲುವಾಗಿ ಅಸ್ಸಾಂ ಬುಡಕಟ್ಟು ಸಂಘಟನೆಗಳ ಸಂಚಾಲನಾ ಸಮಿತಿಯು ಹನ್ನೆರಡು ತಾಸುಗಳ ಅಸ್ಸಾಂ ಬಂದ್ ಗೆ ಕರೆ ನೀಡಿದೆ.
ಬೋಡೋಲ್ಯಾಂಡ್ ಪ್ರದೇಶದಲ್ಲಿ ಬಂದ್ ಬಹುತೇಕ ಸಂಪೂರ್ಣವಾಗಿದೆ. ಕೊಕ್ರಝಾರ್, ಉದಾಲ್ಗುರಿ, ಬಾಕ್ಸಾ ಮತ್ತು ಚಿರಾಂಗ್, ಬೊಂಗೈಗಾಂವ್ ಮಾತ್ರವಲ್ಲದೆ ಬುಡಕಟ್ಟು ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಾದ ಮೋರಿಗಾಂವ್, ನಗಾಂವ್, ಹೊಜಾಯ್, ದೀಮಾ ಹಸಾವೋ ಮತ್ತು ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ಬಂದ್ ಜೋರಾಗಿ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!