ಗಡಿ ರಕ್ಷಣೆಯಲ್ಲಿ ಇನ್ನಷ್ಟು ಬಲ : PSLV C46 ಉಪಗ್ರಹ ಯಶಸ್ವಿ ಉಡಾವಣೆ

ಇಸ್ರೋದಿಂದ ಮಹತ್ವದ ಮೈಲಿಗಲ್ಲು

Team Udayavani, May 22, 2019, 9:06 AM IST

ನೆಲ್ಲೂರು: ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಪಿಎಸ್‌ಎಲ್‌ವಿ ಸಿ 46 ಉಪಗ್ರಹ ಉಡಾವಣೆಯನ್ನು ಇಂದು ಬುಧವಾರ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಯಶಸ್ವಿಯಾಗಿ ನಡೆಸಿದೆ.

ನಸುಕಿನ 5.30ರ ವೇಳೆಗೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್‌ ಧವನ್‌ ಬಾಹ್ಯಾಕೇಶ ಕೇಂದ್ರದಿಂದ ಉಡಾವಣೆಯನ್ನು ನಡೆಸಲಾಗಿದೆ.

ಭೂ ಪರಿವೀಕ್ಷಣೆಯ ರೇಡಾರ್‌ ಇಮೇಜಿಂಗ್‌ ಉಪಗ್ರಹ ಆರ್‌ಐಸ್ಯಾಟ್‌ 2ಬಿ ಯನ್ನು ಪಿಎಸ್‌ಎಲ್‌ವಿ ಸಿ46 ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.

615 ಕೆಜಿ ತೂಕದ ರಿಸ್ಯಾಟ್‌ 2 ಬಿ ಉಪಗ್ರಹ ಭೂಮಿಯಿಂದ 557 ಕಿ.ಮೀ ಎತ್ತರದಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ.

ಮಿಷನ್ ಅತ್ಯುತ್ತಮ ಯಶಸ್ಸು ಪಡೆದಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ. ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ ಎಂದು ಟ್ವೀಟ್‌ ಮಾಡಿದೆ.

ಗಡಿ ಭದ್ರತೆಯ ವಿಚಾರವಾಗಿ ಉಪಗ್ರಹ ಮಹತ್ವದ ಕೆಲಸ ನಿರ್ವಹಿಸಲಿದ್ದು, ದಟ್ಟ ಮೋಡಗಳು ಕವಿದಿದ್ದರೂ ಗಡಿಯಲ್ಲಿನ ಚಿತ್ರಗಳನ್ನು ಸೇರೆ ಹಿಡಿಯುವ ಸಾಮರ್ಥ್ಯವನ್ನು ಉಪಗ್ರಹ ಹೊಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ