Udayavni Special

ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದ ಇಸ್ರೋ ರಾಕೆಟ್..!   

PSLVಯ 53ನೇ ಮಿಷನ್ ಯಶಸ್ವಿ ಉಡಾವಣೆ

Team Udayavani, Feb 28, 2021, 1:04 PM IST

PSLV-C51/Amazonia-1 mission successful, Isro places 19 satel

ಚೆನ್ನೈ : ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಈ ಬಾರಿ ಉಪಗ್ರಹದ ಜೊತೆಗೆ ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದಿದೆ.

ಇದರ ಒಂದು ನ್ಯಾನೋ ಉಪಗ್ರಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವೂ ಇದೆ. ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಅನ್ನು ಬೆಳಿಗ್ಗೆ 10.24 ಕ್ಕೆ ಶ್ರೀಹರಿಕೋಟದಿಂದ ಯಶಸ್ವಿ ಉಡಾವಣೆ ಮಾಡಲಾಗಿದೆ. ಇದು 2021 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೊದಲ ಉಡಾವಣೆಯಾಗಿದೆ.


PSLVಯ 53ನೇ ಮಿಷನ್ ಯಶಸ್ವಿ ಉಡಾವಣೆ :

ಇದು ಪಿ ಎಸ್‌ ಎಲ್‌ ವಿ-ಸಿ 51 ಪಿ ಎಸ್‌ ಎಲ್‌ ವಿಯ 53 ನೇ ಮಿಷನ್ ಆಗಿದ್ದು,  ಈ ರಾಕೆಟ್‌ ನೊಂದಿಗೆ ಬ್ರೆಜಿಲ್‌ ನ ಅಮೆಜೋನಿಯಾ -1 ಉಪಗ್ರಹದೊಂದಿಗೆ ಇತರ 18 ಉಪಗ್ರಹಗಳನ್ನು ಸಹ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಚೆನ್ನೈನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಶ್ರೀಹರಿಕೋಟದ, ಡಾ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ಅನ್ನು ಉಡಾವಣೆ ಮಾಡಲಾಗಿದೆ.

ಈ ರಾಕೆಟ್ ನ  ಉಪಗ್ರಹಗಳಲ್ಲಿ ಚೆನ್ನೈನ ಸ್ಪೇಸ್ ಕಿಡ್ಸ್ ಇಂಡಿಯಾದ (SKI) ಸತೀಶ್ ಧವನ್ ಎಸ್‌ ಎ ಟಿ (SDSAT) ಶಾಮೀಲಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದ ಕೆಳಗಡೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಡಾ.ಕೆ.ಶಿವನ್ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾ ಮಹೇಶ್ವರನ್ ಅವರ ಹೆಸರನ್ನು ಫಲಕದಲ್ಲಿ ಬರೆಯಲಾಗಿದೆ.

ಇದನ್ನು ‘ಪ್ರಧಾನಿ ಆತ್ಮನಿರ್ಭರ್ ಭಾರತ್ ಉಪಕ್ರಮ ಮತ್ತು ಬಾಹ್ಯಾಕಾಶ ಖಾಸಗೀಕರಣಕ್ಕೆ ಒಗ್ಗಟ್ಟು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕೇತವಾಗಿದೆ ‘  ಎಂದು ಎಸ್ ಕೆ ಐ ಹೇಳಿದೆ.

ಈ ಮಿಷನ್ ಮೂಲಕ ಎಸ್ ಕೆ ಐ ಡಿಜಿಟಲ್ ಭಗವದ್ಗೀತೆಯನ್ನು ಎಸ್‌ ಡಿ ಕಾರ್ಡ್‌ನಲ್ಲಿ ಹಾಕಿ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಹಾಗೆಯೇ ಈ ಉಪಗ್ರಹವು 25 ಸಾವಿರ ಭಾರತೀಯ ಜನರ ಹೆಸರುಗಳನ್ನು ಕೂಡ ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ.

ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಪಿ ಎಸ್‌ ಎಲ್‌ ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಸಿ 51 / ಅಮೆಜೋನಿಯಾ -1 ಯು ಎಸ್‌ ನಲ್ಲಿ ಸಿಯಾಟಲ್‌ ನ ಸ್ಯಾಟಲೈಟ್ ರೈಡ್‌ ಶೇರ್ ಮತ್ತು ಮಿಷನ್ ಮ್ಯಾನೇಜ್‌ ಮೆಂಟ್ ಪ್ರೊವೈಡರ್ ಸ್ಪೇಸ್‌ ಪ್ಲೈಟ್ ಇಂಕ್‌ ನ ವಾಣಿಜ್ಯ ನಿರ್ವಹಣೆಯಡಿಯಲ್ಲಿ ಪ್ರಾರಂಭಿಸಲಾಗುವ ಎನ್‌ ಎಸ್‌ ಐ ಎಲ್‌ ನ ಮೊದಲ ಮೀಸಲಾದ ಕಮರ್ಷಿಯಲ್ ಮಿಷನ್ ಇದಾಗಿದೆ.

ಬ್ರೆಜಿಲ್‌ನಲ್ಲಿ ನಿರ್ಮಿಸಲಾದ ಮೊದಲ ಉಪಗ್ರಹವನ್ನು ಉಡಾಯಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಎನ್‌ ಎಸ್‌ ಐ ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ ನಾರಾಯಣ್ ಹೇಳಿದ್ದಾರೆ.

ಇನ್ನು, 637 ಕೆಜಿ ತೂಕದ ಅಮೆಜೋನಿಯಾ -1 ಭಾರತದಿಂದ ಉಡಾಯಿಸಲ್ಪಡುವ ಬ್ರೆಜಿಲ್‌ ನ ಮೊದಲ ಉಪಗ್ರಹವಾಗಿದೆ. ಇದು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (INPI) ಆಪ್ಟಿಕಲ್ ಭೂ ವೀಕ್ಷಣಾ ಉಪಗ್ರಹವಾಗಿದೆ. ಅಮೆಜೋನಿಯಾ -1  ಮೂಲಕ ಅಮೆಜಾನ್ ಪ್ರದೇಶದಲ್ಲಿನ ಅರಣ್ಯನಾಶದ ಮೇಲ್ವಿಚಾರಣೆ ಮತ್ತು ಬ್ರೆಜಿಲ್ ಭಾಗದ ವೈವಿಧ್ಯಮಯ ಕೃಷಿಯ ವಿಶ್ಲೇಷಣೆ ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ಉಪಗ್ರಹವು ಬಳಕೆದಾರರಿಗೆ ರಿಮೋಟ್ ಸೆನ್ಸಿಂಗ್ ಡೇಟಾ ಒದಗಿಸಲಿದೆ ಎಂದು ಇಸ್ರೋ ಹೇಳಿಕೆ ನೀಡಿದೆ.

ಟಾಪ್ ನ್ಯೂಸ್

nhfh

ಆಕ್ಸಿಜನ್ ಕೊರತೆಯಿಂದ 6 ಜನ ಕೋವಿಡ್ ಸೋಂಕಿತರ ದುರ್ಮರಣ

dr.rajkumar

ಅಣ್ಣಾವ್ರ ಚಿತ್ರಗಳಲ್ಲಿ ಕನ್ನಡ ಸಾಹಿತ್ಯದ ಕಂಪು

ಲಕಜಹಗ್ರೆಡ

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ: ಆರ್ ಅಶೋಕ್

COVID-19 crisis: Kapil Sibal asks PM Narendra Modi to declare National Health Emergency

ಕೋವಿಡ್ 19 : ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ : ಕಪಿಲ್ ಸಿಬಲ್

ghfgfg

24 ಗಂಟೆಯಲ್ಲಿ 25,000 ಕೋವಿಡ್ ಪ್ರಕರಣ : ದೆಹಲಿಯಲ್ಲಿ ಬೆಡ್‍,ಆಕ್ಸಿಜನ್ ಅಭಾವ ಮುಂದುವರಿಕೆ

ಗದಸಸದದ್

ಮೊಬೈಲ್ ಖರೀದಿಸಲು ಹಣ ಕೊಡದಿದ್ದಕ್ಕೆ ಅಜ್ಜಿಯ ಕುತ್ತಿಗೆ ಹಿಸುಕಿ ಕೊಂದ ಮೊಮ್ಮಗ!

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nhfh

ಆಕ್ಸಿಜನ್ ಕೊರತೆಯಿಂದ 6 ಜನ ಕೋವಿಡ್ ಸೋಂಕಿತರ ದುರ್ಮರಣ

COVID-19 crisis: Kapil Sibal asks PM Narendra Modi to declare National Health Emergency

ಕೋವಿಡ್ 19 : ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ : ಕಪಿಲ್ ಸಿಬಲ್

ghfgfg

24 ಗಂಟೆಯಲ್ಲಿ 25,000 ಕೋವಿಡ್ ಪ್ರಕರಣ : ದೆಹಲಿಯಲ್ಲಿ ಬೆಡ್‍,ಆಕ್ಸಿಜನ್ ಅಭಾವ ಮುಂದುವರಿಕೆ

ghjgfhfg

ಕಂದಕಕ್ಕೆ ಉರುಳಿದ ಕಾರು : ತಂದೆ-ಮಗ ಸೇರಿ ಐವರ ದುರ್ಮರಣ

Rahul appeals to state govt to provide all help to bereaved families

ರಾಯ್ ಪುರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ : ಮೃತರ ಕುಟುಂಬಗಳಿಗೆ ರಾಹುಲ್ ಸಂತಾಪ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

nhfh

ಆಕ್ಸಿಜನ್ ಕೊರತೆಯಿಂದ 6 ಜನ ಕೋವಿಡ್ ಸೋಂಕಿತರ ದುರ್ಮರಣ

dr.rajkumar

ಅಣ್ಣಾವ್ರ ಚಿತ್ರಗಳಲ್ಲಿ ಕನ್ನಡ ಸಾಹಿತ್ಯದ ಕಂಪು

The Isaac Library Burning Secret CC Camera

ಇಸಾಕ್‌ ಲೈಬ್ರರಿ ಭಸ್ಮ ರಹಸ್ಯ ಬಿಚ್ಚಿಟ್ಟ ಸಿಸಿ ಕ್ಯಾಮರಾ

ಲಕಜಹಗ್ರೆಡ

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ: ಆರ್ ಅಶೋಕ್

Widespread respect for Indian astrology

ಭಾರತೀಯ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶ್ಯಾದ್ಯಂತ ಗೌರವ, ಮಾನ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.