ಪಬ್ ಜಿ ಹೊಸ ಆವೃತ್ತಿ ಭಾರತದಲ್ಲಿ ಈ ವರ್ಷಾಂತ್ಯ ಬಿಡುಗಡೆ ?: ಸಂಸ್ಥೆ ಹೇಳುವುದೇನು ?
Team Udayavani, Nov 27, 2020, 8:48 PM IST
ನವದೆಹಲಿ: ಕಳೆದ ಸೆಪ್ಟೆಂಬರ್ ನಲ್ಲಿ ಭಾರತದಿಂದ ಭದ್ರತಾ ಕಾರಣಗಳಿಂದ ನಿಷೇಧಿಸಲ್ಪಟ್ಟ ಪಬ್-ಜಿ ಮೊಬೈಲ್ ಗೇಮ್ ಇದೀಗ ಹೊಸ ಆವೃತ್ತಿಯ ಮೂಲಕ ಮಾರುಕಟ್ಟೆಗೆ ಲಗ್ಗೆಯಿಡಲು ತಯಾರಾಗಿದೆ. ಮಾತ್ರವಲ್ಲದೆ ಭಾರತವನ್ನೂ ಒಳಗೊಂಡಂತೆ ವಿಶ್ವದಾದ್ಯಂತ ತನ್ನ ಅಸ್ಥಿತ್ವವನ್ನು ಮರು ಸ್ಥಾಪಿಸಲು ಸಿದ್ದತೆ ಆರಂಭಿಸಿದೆ.
ಭಾರತೀಯ ಮಾರುಕಟ್ಟೆಗೆ ಹೊಸ ಅಂಗಸಂಸ್ಥೆಯೊಂದಿಗೆ ಹಾಗೂ ಹೊಸ ರೂಪದಲ್ಲಿ ಪಬ್-ಜಿ ಗೇಮ್ ಮತ್ತೊಮ್ಮೆ ದಾಂಗುಡಿಯಿಡಲಿದ್ದು, ಗ್ರಾಹಕರನ್ನು ಖಂಡಿತವಾಗಿಯೂ ಸೆಳೆಯಲಿದೆ ಎಂದು ಕಳೆದ ನವೆಂಬರ್ 12 ರಂದು ಪಬ್ ಜಿ ಕಾರ್ಪೊರೇಶನ್ ಹೇಳಿಕೆ ನೀಡಿತ್ತು. ಆದರೆ ಹೊಸ ಆವೃತ್ತಿಯ ಗೇಮ್ ನ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿರಲಿಲ್ಲ.
ಲಕ್ಷಾಂತರ ಭಾರತೀಯ ಗೇಮಿಂಗ್ ಉತ್ಸಾಹಿಗಳು PUBG INDIA ಆವೃತ್ತಿಗಾಗಿ ಕಾತರದಿಂದ ಕಾಯುತ್ತಿರುವ ಈ ಸಂದರ್ಭದಲ್ಲಿ, ವಿಶ್ವದಾದ್ಯಂತ ಯಾವೆಲ್ಲಾ ಪಬ್ ಅಂಗಸಂಸ್ಥೆಗಳು ಪಬ್-ಜಿ ಗೇಮ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ
ಜಾಗತಿಕ ಆವೃತ್ತಿ- ಟೆನ್ಸೆಂಟ್ ಗೇಮ್ಸ್ ಆಫ್ ಚೀನಾ
ಪಬ್ ಜಿ ಮೊಬೈಲ್ KRJP (ಕೊರಿಯಾ ಮತ್ತು ಜಪಾನ್) – ಪಬ್ ಜಿ ಕಾರ್ಪೋರೇಶನ್
ಪಬ್ ಜಿ ಮೊಬೈಲ್ ವಿಎನ್ (ವಿಯೆಟ್ನಾಂ) – ವಿಎನ್‌ಜಿ ಗೇಮ್ ಪಬ್ಲಿಷಿಂಗ್
ಪಬ್ ಜಿ ಮೊಬೈಲ್ TW (ತೈವಾನ್) -ಹಾಟ್‌ಕೂಲ್ ಗೇಮ್ಸ್
ಭಾರತದಲ್ಲಿ 2020ರ ಡಿಸೆಂಬರ್ ನಲ್ಲಿ ಪಬ್ ಜಿ ಯ ಹೊಸ ಆವೃತ್ತಿ ಬಿಡುಗಡೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಅದಾಗ್ಯೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಪಬ್ ಜಿ ಕಾರ್ಪೋರೇಶನ್ ಗೆ ಯಾವುದೇ ರೀತಿಯ ಗೇಮಿಂಗ್ ಉದ್ಯಮವನ್ನು ಆರಂಭಿಸಲು ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ.
ಈಗಾಗಲೇ ಪಬ್ ಜಿ ಕಾರ್ಪೋರೇಶನ್ ತನ್ನ ಹೊಸ ಗೇಮ್ ಗಾಗಿ 100 ಮಿಲಿಯನ್ ಡಾಲರ್ (740 ಕೋಟಿ) ಹೂಡಿಕೆ ಮಾಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿಸ್ವಾಸ್ ಮೇಲೆ ಹಲ್ಲೆ; 12 ಗಂಟೆ ಕಾಲ ತ್ರಿಪುರಾ ಬಂದ್ ಗೆ ಕರೆ
ಅಧಿಕಾರಿಗೆ ಸಡ್ಡು; ನಂದಿಗ್ರಾಮ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧೆ: ಮಮತಾ ಬ್ಯಾನರ್ಜಿ ಸವಾಲು
ಅಹಮದಾಬಾದ್, ಸೂರತ್ ನಗರಕ್ಕೆ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಜ.26ರ ರೈತರ ಟ್ರ್ಯಾಕ್ಟರ್ Rally ಅನುಮತಿ ಬಗ್ಗೆ ದೆಹಲಿ ಪೊಲೀಸರು ನಿರ್ಧರಿಸಲಿ: ಸುಪ್ರೀಂ
2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ