ಪುಣೆ ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ: ಬಿಗಿ ಭದ್ರತೆ
Team Udayavani, Nov 2, 2019, 7:49 AM IST
ಪುಣೆ: ಹ್ಯಾಂಡ್ ಗ್ರೆನೇಡ್ ಮಾದರಿಯ ಅನುಮಾನಾಸ್ಪದ ವಸ್ತುವೊಂದು ಪುಣೆಯ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಅನುಮಾನಸ್ಪದ ವಸ್ತು ಪತ್ತೆಯಾದ ಕೂಡಲೇ ರೈಲ್ವೇ ಪೊಲೀಸರು ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳ ಗ್ರೆನೇಡ್ ಮಾದರಿಯ ವಸ್ತುವನ್ನು ನಾಶಪಡಿಸಿದೆ ಮತ್ತು ಅದರ ಭಾಗಗಳನ್ನು ವಿಧಿ ವಿಜ್ಞಾನ ಇಲಾಖೆಗೆ ರವಾನಿಸಿದೆ.
ಶುಕ್ರವಾರ ಮುಂಜಾನೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ಕೂಡ ಇದೇ ಮಾದರಿಯ ಅನುಮಾನಾಸಸ್ಪದ ವಸ್ತು ಪತ್ತೆಯಾಗಿತ್ತು. ಆ ವೇಳೆ ಬಾಂಬ್ ನಿಷ್ಕ್ರೀಯ ದಳ ಮತ್ತು ಶ್ವಾನ ದಳ ಆಗಮಿಸಿ ತೀವ್ರ ಶೋಧ ಕಾರ್ಯ ನಡೆಸುವುದರ ಜೊತೆಗೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ತನಿಖೆಯೆ ನಂತರ ಬ್ಯಾಗ್ ನಲ್ಲಿದ್ದ ಅನುಮಾನಸ್ಪದ ವಸ್ತು ಆರ್ ಡಿ ಎಕ್ಸ್ ಎಂದು ಪತ್ತೆ ಹಚ್ಚಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ