ಅಕ್ರಮ ಸಂಬಂಧವಿದ್ದರೆ ಕೆಟ್ಟ ತಾಯಿ ಆಗಲ್ಲ: ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಪ್ರತಿಪಾದನೆ
Team Udayavani, Jun 3, 2021, 11:15 PM IST
ಚಂಡೀಗಡ: ಮಹಿಳೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಆಕೆ ಕೆಟ್ಟ ತಾಯಿ ಆಗಬೇಕೆಂದಿಲ್ಲ. ಹೀಗೆಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪುತ್ರಿಯನ್ನು ಹುಡುಕಿಕೊಡಿ ಎಂದು ಸದ್ಯ ಆಸ್ಟ್ರೇಲಿಯಾ ನಿವಾಸಿಯಾಗಿರುವ ಪಂಜಾಬ್ ಮೂಲದ ಮಹಿಳೆ ಹೈಕೋರ್ಟ್ಗೆ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ನ್ಯಾ.ಅನುಪೀಂದರ್ ಸಿಂಗ್ ಗೆರ್ವಾಲ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆಸ್ಟ್ರೇಲಿಯಾದಲ್ಲಿರುವ ತಾನು ಆರ್ಥಿಕವಾಗಿ ಸಬಲೆ ಮತ್ತು ಪುತ್ರಿಯನ್ನು ನೋಡಿಕೊಳ್ಳುವ ಸಾಮರ್ಥ್ಯ ಇದೆ. ಪತಿಗೆ ಆರ್ಥಿಕವಾಗಿ ಸಬಲನಲ್ಲ. ಪುತ್ರಿಯನ್ನು ತನ್ನ ವಶಕ್ಕೊಪ್ಪಿಸಬೇಕು ಎಂದು ಮಹಿಳೆ ವಾದಿಸಿದ್ದರು. ಅರ್ಜಿಯನ್ನು ಪರಿಶೀಲಿಸಿ ಇತ್ಯರ್ಥ ಪಡಿಸಿದ ಹೈಕೋರ್ಟ್ “ಪುರುಷ ಪ್ರಧಾನವಾಗಿರುವ ವ್ಯವಸ್ಥೆಯಲ್ಲಿ ಮಹಿಳೆಯ ಮೇಲೆ ಅನುಮಾನ ಪಡುವುದು ಸಾಮಾನ್ಯ. ಆದರೆ, ಈ ಆರೋಪಗಳಿಗೆ ಯಾವುದೇ ಆಧಾರ ಇರುವುದಿಲ್ಲ. ಒಂದು ವೇಳೆ ಅಕ್ರಮ ಸಂಬಂಧ ಹೊಂದಿದ್ದರೂ, ಇಲ್ಲದಿದ್ದರೂ ಮಹಿಳೆ ಕೆಟ್ಟ ತಾಯಿ ಆಗಿರಲು ಸಾಧ್ಯವಿಲ್ಲ’ ಎಂದು ಆದೇಶಿಸಿತು ಮತ್ತು ನಾಲ್ಕು ವರ್ಷದ ಪುತ್ರಿಯನ್ನು ಮಹಿಳೆ ವಶಕ್ಕೊಪ್ಪಿಸುವಂತೆ ನ್ಯಾಯಪೀಠ ಆದೇಶಿಸಿದೆ.
ಲುಧಿಯಾನ ಮೂಲದ ಸದ್ಯ ಆಸೀಸ್ ನಿವಾಸಿಯಾಗಿರುವ ವ್ಯಕ್ತಿಯ ಜತೆಗೆ ದೂರುದಾರ ಮಹಿಳೆಗೆ 2013ರಲ್ಲಿ ವಿವಾಹವಾಗಿತ್ತು. 2017ರಲ್ಲಿ ಪುತ್ರಿ ಜನಿಸಿದ್ದಳು. 2020ರ ಫೆಬ್ರವರಿಯಲ್ಲಿ ತವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಪತಿಯ ಮನೆಯವರು ಬಲವಂತವಾಗಿ ಪುತ್ರಿಯನ್ನು ವಶಪಡಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಪತಿಯ ಮನೆಯವರು ಮಹಿಳೆಗೆ ಅಕ್ರಮ ಸಂಬಂಧ ಇತ್ತು ಎಂದು ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ