ಪಂಜಾಬ್‌: ಸಚಿವ ಸಿಧು ಖಾತೆ ಬದಲು

Team Udayavani, Jun 7, 2019, 6:10 AM IST

ಚಂಡೀಗಢ: ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್‌ ಸಿಂಗ್‌ ಜತೆಗೆ ಮುನಿಸಿಕೊಂಡಿರುವ ಸ್ಥಳೀಯಾಡಳಿತ ಖಾತೆ ಸಚಿವ ನವ್‌ಜೋತ್‌ ಸಿಂಗ್‌ ಸಿಧು ಅವರ ಖಾತೆ ಬದಲು ಮಾಡಲಾಗಿದೆ. ಅವರಿಗೆ ಈಗ ಇಂಧನ, ಹೊಸ ಮಾದರಿಯ ಇಂಧನ ಖಾತೆ ಸಚಿವಾಲ ಯವನ್ನು ನೀಡಲಾಗಿದೆ. ಅದಕ್ಕೆ ಪೂರಕವಾಗಿ ಸಿಧು ಗುರು ವಾರ ನಡೆದಿದ್ದ ಸಂಪುಟ ಸಭೆಗೆ ಗೈರು ಹಾಜರಾಗಿ ದ್ದರು. ಮುಖ್ಯಮಂತ್ರಿ ಮತ್ತು ಸಚಿವ ಸಿಧು ನಡುವೆ ಲೋಕಸಭೆ ಚುನಾವಣೆ ಪ್ರಚಾರ ಮತ್ತು ಫ‌ಲಿತಾಂಶದ ಬಳಿಕ ಟೀಕಾ ಪ್ರಹಾರಗಳು ನಡೆದಿತ್ತು. ಈ ಸಂದರ್ಭದಲ್ಲಿಯೇ ನವ್‌ಜೋತ್‌ ಸಿಧು ಖಾತೆ ಬದಲಿಸುವ ಮಾತುಗಳನ್ನಾಡಿದ್ದರು.

ನನಗೆ ಗುಂಡು ಹಾರಿಸಿ: ಹರ್ಯಾಣದಲ್ಲಿಯೂ ಕೂಡ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಚುನಾವಣೆಯಲ್ಲಿ ಸೋಲಿನ ಹಿನ್ನೆಲೆಯಲ್ಲಿ ನನಗೆ ಗುಂಡು ಹಾರಿಸಿ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ್‌ ತನ್ವರ್‌ ಹೇಳಿದ್ದಾರೆ. ಮಂಗಳವಾರ ನಡೆದಿದ್ದ ಸೋಲಿನ ಪುನರ್‌ ವಿಮರ್ಶೆ ಸಭೆಯಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇದರ ಜತೆಗೆ ಹರ್ಯಾಣದಲ್ಲಿ ಕಾಂಗ್ರೆಸ್‌ ನಾಯಕತ್ವ ಬದಲಿಗೂ ಶಾಸಕರು ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ