ಎಸ್‌ಬಿಐನಿಂದ ಶೀಘ್ರ ರುಪೇ ಕ್ರೆಡಿಟ್ ಕಾರ್ಡ್‌ ಬಿಡುಗಡೆ

Team Udayavani, Sep 2, 2019, 5:12 AM IST

ನವದೆಹಲಿ: ಸದ್ಯ ಡೆಬಿಟ್ ಕಾರ್ಡ್‌ಗೆ ಮಾತ್ರ ಸೀಮಿತವಾಗಿದ್ದ ರುಪೇ ಕಾರ್ಡ್‌ ನೆಟ್ವರ್ಕ್‌ ಅಡಿಯಲ್ಲಿ ಇನ್ನು ಕ್ರೆಡಿಟ್ ಕಾರ್ಡ್‌ಗಳನ್ನೂ ಬಿಡುಗಡೆ ಮಾಡಲು ಎಸ್‌ಬಿಐ ನಿರ್ಧರಿಸಿದೆ. ಸದ್ಯ ಅಮೆರಿಕ ಮೂಲದ ವೀಸಾ ಹಾಗೂ ಮಾಸ್ಟರ್‌ ಕಾರ್ಡ್‌ಗಳು ಕ್ರೆಡಿಟ್ ಕಾರ್ಡ್‌ ಮಾರುಕಟ್ಟೆಯನ್ನು ಆಳುತ್ತಿವೆ. ರುಪೇ ಅನ್ನು ಸರ್ಕಾರದ ಸ್ವಾಯತ್ತ ಸಂಸ್ಥೆ ಎನ್‌ಪಿಸಿಐ ನಿರ್ವಹಿಸುತ್ತಿದೆ. ಎಸ್‌ಬಿಐ ವಿತರಿಸುತ್ತಿರುವ ಮೂರನೇ ಒಂದರಷ್ಟು ಕಾರ್ಡ್‌ಗಳು ರುಪೇ ಆಗಿದ್ದು, ರುಪೇ ಕಾರ್ಡ್‌ಗೆ ದೇಶ ಭಕ್ತಿಯ ಅಂಶವೂ ಸೇರಿಕೊಂಡಿದೆ. ಹೀಗಾಗಿ ಜನರು ಇದಕ್ಕೆ ಆದ್ಯತೆ ನೀಡುತ್ತಾರೆ. ಮುಂದಿನ ದಿನಗಳಲ್ಲಿ ರುಪೇ ಕಾರ್ಡ್‌ ಅತ್ಯಂತ ಜನಪ್ರಿಯವಾಗಿ ಮಾರುಕಟ್ಟೆಯನ್ನು ಆಳುವ ಸಾಧ್ಯತೆ ದಟ್ಟವಾಗಿದೆ. ಎನ್‌ಪಿಸಿಐ ಜೊತೆಗೆ ಅಂತಿಮ ಹಂತದ ಒಪ್ಪಂದ ಬಾಕಿ ಇದೆ. ಎನ್‌ಪಿಸಿಐ ಅಂಕಿತ ಬೀಳುತ್ತಿದ್ದಂತೆಯೇ, ಇದೇ ತ್ತೈಮಾಸಿಕದಲ್ಲೇ ರುಪೇ ಕ್ರೆಡಿಟ್ ಕಾರ್ಡ್‌ ಬಿಡುಗಡೆ ಮಾಡಲಿದ್ದೇವೆ ಎಂದು ಎಸ್‌ಬಿಐ ಕಾರ್ಡ್‌ನ ಎಂಡಿ ಹಾಗೂ ಸಿಇಒ ಹರ್ದಯಾಲ್ ಪ್ರಸಾದ್‌ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ