ಮೊಬೈಲ್ App ಮೂಲಕ ಸೆಕ್ಸ್ ರಾಕೆಟ್ : ನಾಲ್ಕು ಜೋಡಿ ಸೆರೆ
Team Udayavani, Jul 22, 2018, 4:41 PM IST
ರಾಂಚಿ : ಹಲವು ವಿಚಾರಗಳಿಗಾಗಿ ಮೊಬೈಲ್ App ಬಳಸುವುದು ಈಗ ಸಾಮಾನ್ಯ ಆದರೆ ರಾಂಚಿಯಲ್ಲಿ ಸೆಕ್ಸ್ ದಂಧೆಗಾಗಿಯೂ ಬಳಸಲಾಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದ್ದು ನಾಲ್ಕು ಜೋಡಿಯನ್ನು ಬಂಧಿಸಿದ್ದಾರೆ.
ಜನವಸತಿ ಪ್ರದೇಶದಲ್ಲಿ ದಂಧೆ ನಡೆಯುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ದಾಳಿ ಮಾಡಿದ ಪೊಲೀಸರು ನಾಲ್ಕು ಜೋಡಿ ಮತ್ತು ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರೆಲ್ಲರೂ 20 ರಿಂದ 25 ವರ್ಷ ವಯಸ್ಸಿನ ಒಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಹೊಟೇಲ್ ರೂಮ್ ಹೆಸರಿನಲ್ಲಿ ಈ ದಂಧೆ ನಡೆಸಲಾಗುತ್ತಿತ್ತು ಮೊಬೈಲ್ App ಮೂಲಕವೇ ಹೈ ಪ್ರೊಫೈಲ್ ದಂಧೆ ನಡೆಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.