ಸೆ. 10: ರಫೇಲ್ ಸೇರ್ಪಡೆ ಫ್ರಾನ್ಸ್ ರಕ್ಷಣ ಸಚಿವೆ ಭಾಗಿ
Team Udayavani, Sep 8, 2020, 1:25 AM IST
ಸಾಂದರ್ಭಿಕ ಚಿತ್ರ
ಚಂಡೀಗಢ: ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಸೆ. 10ರಂದು 5 ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಭಾರತದ ವಾಯು
ಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿವೆ. ಈ ಕಾರ್ಯಕ್ರಮದಲ್ಲಿ ಫ್ರಾನ್ಸ್ ರಕ್ಷಣ ಸಚಿವೆ ಫ್ಲೋರೆನ್ಸ್ ಪಾರ್ಲೆ ಭಾಗವಹಿಸಲಿದ್ದಾರೆ.
ಗಡಿ ಭಾಗದಲ್ಲಿ ಚೀನ- ಭಾರತದ ನಡುವೆ ಬಿಕ್ಕಟ್ಟು ಮುಂದುವರಿದಿರುವ ವೇಳೆಯಲ್ಲೇ ಫ್ರಾನ್ಸ್ನ ರಕ್ಷಣ ಸಚಿವರು ಭಾರತಕ್ಕೆ ಆಗಮಿಸುತ್ತಿರುವುದು ಚೀನಕ್ಕೆ ಪ್ರಬಲ ಸಂದೇಶ ರವಾನಿಸಲಿದೆ. ಗಡಿ ಬಿಕ್ಕಟ್ಟು ಆರಂಭವಾದ ಅನಂತರ ಭಾರತಕ್ಕೆ ಬರಲಿರುವ ಮೊದಲ ಪ್ರಮುಖ ವಿದೇಶಿ ಗಣ್ಯರು ಫ್ಲೋರೆನ್ಸ್ ಪಾರ್ಲೆ. ಈ ಹಿಂದೆಯೂ ಚೀನ ಸೈನಿಕರ ಭಾರತ ವಿರೋಧಿ ಕುಕೃತ್ಯಗಳನ್ನು ಫ್ಲೋರೆನ್ಸ್ ಕಟು ಶಬ್ದಗಳಲ್ಲಿ ಖಂಡಿಸಿದ್ದರು.