ಈಶಾನ್ಯ ರಾಜ್ಯಗಳ ಜನಾದೇಶ ಗೌರವಿಸುತ್ತೇವೆ : ರಾಹುಲ್ ಗಾಂಧಿ
Team Udayavani, Mar 5, 2018, 3:55 PM IST
ಹೊಸದಿಲ್ಲಿ : ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್ ಅನುಭವಿಸಿರುವ ದಯನೀಯ ಸೋಲಿನ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೊನೆಗೂ ತನ್ನ ಮೌನ ಮುರಿದಿದ್ದಾರೆ.
ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಜನಾದೇಶವನ್ನು ಕಾಂಗ್ರೆಸ್ ಪಕ್ಷ ಗೌರವಿಸುತ್ತದೆ ಎಂದು ರಾಹುಲ್ ಟ್ವಿಟರ್‌ನಲ್ಲಿ ಇದೇ ಮೊದಲ ಬಾರಿಗೆ ಪಕ್ಷದ ಸೋಲಿಗೆ ಪ್ರತಿಕ್ರಿಯಿಸಿದ್ದಾರೆ.
“ಈಶಾನ್ಯ ರಾಜ್ಯಗಳಲ್ಲಿನ ನಮ್ಮ ಪಕ್ಷದ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ; ಜನಾದೇಶವನ್ನು ಗೌರವಿಸುತ್ತೇವೆ; ಹಾಗೆಯೇ ಈಶಾನ್ಯ ರಾಜ್ಯಗಳ ಆದ್ಯಂತ ಪಕ್ಷವನ್ನು ಬಲಪಡಿಸುವ ಪ್ರಯತ್ನವನ್ನು ಮುಂದುವರಿಸುತ್ತೇವೆ ಮತ್ತು ಜನರ ವಿಶ್ವಾಸವನ್ನು ಪುನರ್ ಸಂಪಾದಿಸುತ್ತೇವೆ. ಪಕ್ಷದ ಹೋರಾಟಕ್ಕಾಗಿ ಹಗಲಿರುಳು ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ’ ಎಂದು ರಾಹುಲ್ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ ಉದಯ ಚೌಟ ಇನ್ನಿಲ್ಲ
ಇಂದಿನ ಗ್ರಹಬಲ: ಈ ರಾಶಿಯವರಿಂದು ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡಬೇಡಿ
ಧಾರವಾಡದಲ್ಲಿ ಭೀಕರ ಅಪಘಾತ: ಮರಕ್ಕೆ ಕ್ರೂಸರ್ ಢಿಕ್ಕಿ; ಮಕ್ಕಳು ಸೇರಿ ಸ್ಥಳದಲ್ಲೇ 7 ಜನ ಸಾವು
ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ
ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ