
ಎರಡು ವರ್ಷ ಜೈಲು ಶಿಕ್ಷೆ ಪ್ರಕಟ: ಲೋಕಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿ
Team Udayavani, Mar 24, 2023, 2:28 PM IST

ಹೊಸದಿಲ್ಲಿ: 2019ರ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಿಂದ ಅನರ್ಹರಾಗಿದ್ದಾರೆ.
ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿರುವ ಕಾರಣ ನಿಯಮದಂತೆ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಆದೇಶಿಸಲಾಗಿದೆ. ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ.
Rahul Gandhi – Congress MP from Wayanad, Kerala – disqualified as a Member of Lok Sabha following his conviction in the criminal defamation case over his ‘Modi surname’ remark. pic.twitter.com/SQ1xzRZAot
— ANI (@ANI) March 24, 2023
ಏನಿದು ನಿಯಮ?: ನಿಗದಿತ ಪ್ರಕರಣದಲ್ಲಿ ಎರಡು ವರ್ಷವರೆಗೆ ಶಿಕ್ಷೆಗೆ ಗುರಿಯಾದ ಸಂಸತ್ ಸದಸ್ಯರು (ಲೋಕಸಭೆ ಮತ್ತು ರಾಜ್ಯಸಭೆ) ಶಾಸಕರು (ವಿಧಾನಸಭೆ ಮತ್ತು ವಿಧಾನ ಪರಿಷತ್) ಕೂಡಲೇ ತಾವು ಹೊಂದಿರುವ ಸದನದ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.
ಇದನ್ನೂ ಓದಿ:ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ
ಜತೆಗೆ 2013ರ ಜು.10ರಂದು ಸುಪ್ರೀಂ ಕೂಡ ಇದೇ ಅಂಶವನ್ನು ಪುಷ್ಟೀಕರಿಸಿತ್ತು. ಜತೆಗೆ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 (4)ರ ಅನ್ವಯ ಅವರಿಗೆ ಆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ 3 ತಿಂಗಳ ಅವಕಾಶವನ್ನು ತೆಗೆದು ಹಾಕಿ ದೂರಗಾಮಿ ಪರಿಣಾಮ ಬೀರುವ ತೀರ್ಪು ನೀಡಿತ್ತು.
ಏನಿದು ಪ್ರಕರಣ? 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್, “ನೀರವ್ ಮೋದಿಯಾಗಿರಲಿ, ಲಲಿತ್ ಮೋದಿಯಾಗಿರಲಿ ಅಥವಾ ನರೇಂದ್ರ ಮೋದಿಯಾಗಿರಲಿ, ಎಲ್ಲ ಕಳ್ಳರ ಸರ್ ನೇಮ್ ಕೂಡ ಮೋದಿಯೇ ಆಗಿರುವುದೇಕೆ?’ ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಮಾಜಿ ಸಚಿವ, ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಎಂಬವರು ರಾಹುಲ್ ವಿರುದ್ಧ ಮಾನಹಾನಿ ಕೇಸು ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಮುಂದೇನು? ಚುನಾವಣಾ ಆಯೋಗವು ವಯನಾಡ್‌ಗೆ ಹೊಸದಾಗಿ ಚುನಾವಣೆ ಘೋಷಣೆ ಮಾಡಬಹುದು. ಅಲ್ಲದೇ, ಈ ತೀರ್ಪನ್ನು ಉನ್ನತ ನ್ಯಾಯಾಲಯವು ವಜಾ ಮಾಡದಿದ್ದರೆ, ರಾಹುಲ್‌ಗೆ ಮುಂದಿನ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲೂ ಸಾಧ್ಯವಾಗುವುದಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

KSOU ಶೀಘ್ರದಲ್ಲಿ ಮುಕ್ತ ವಿವಿಯಿಂದ ಆನ್ ಲೈನ್ ಕೋಸ್೯ : ಕುಲಪತಿ ಪ್ರೊ ಹಲ್ಸೆ

Perfect 35 % ಪಡೆದು ಪಾಸಾಗಿ ಸುದ್ದಿಯಾದ ವಿದ್ಯಾರ್ಥಿ; ಹೆತ್ತವರ ಸಂಭ್ರಮ!

ಮಹಿಳೆಯ ನಗ್ನ ದೇಹದ ಚಿತ್ರಣವು ಅಶ್ಲೀಲವೆಂದು ಪರಿಗಣಿಸಲಾಗದು: ಕೇರಳ ಹೈಕೋರ್ಟ್ ಹೇಳಿದ್ದೇನು?

Snake: ಆಟ ಆಡುತ್ತಿದ್ದಾಗ ಹಾವನ್ನೇ ಜಗಿದು ತಿಂದ 3 ವರ್ಷದ ಮಗು; ಸತ್ತು ಹೋದದ್ದು ಹಾವು.!
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
