2018ರ ಮೊದಲ ಮನ್ ಕೀ ಬಾತ್: ಮೋದಿಗೆ ರಾಹುಲ್ ಸಲಹೆ
Team Udayavani, Jan 19, 2018, 7:39 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ವರ್ಷದ ತಮ್ಮ ಮೊದಲ ತಮ್ಮ ಮನ್ ಕೀ ಬಾತ್ ನಲ್ಲಿ ಡೋಕ್ಲಾಂ, ಹರಿಯಾಣ ಅತ್ಯಾಚಾರಗಳು ಮತ್ತು ದೇಶದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳ ಬಗ್ಗೆ ಮಾತನಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಇದೇ ಜನವರಿ 28ರಂದು ನಡೆಸಿಕೊಡುವ ಮನ್ ಕೀ ಬಾತ್ 2018ರ ಮೊದಲ ಕಾರ್ಯಕ್ರಮವಾಗಿದ್ದು ಜನರು ತಮಗೆ ಹೊಸ ಹೊಸ ಆಲೋಚನೆಗಳ ಬಗ್ಗೆ ತಿಳಿಸಬೇಕು ಎಂದು ಕರೆ ನೀಡಿದ್ದರು.
ಇದಕ್ಕೆ ಉತ್ತರ ಎಂಬಂತೆ ರಾಹುಲ್ ತಮ್ಮ ಆಲೋಚನೆಗಳನ್ನು ಸಲಹೆಯ ರೂಪದಲ್ಲಿ ನೀಡಿದ್ದಾರೆ ಎಂದು ಹೇಳಲಾಗಿದೆ.