ಹಸ್ತ ಗಾದಿಗೆ ರಾಹುಲ್‌ ಗಾಂಧಿ


Team Udayavani, Dec 17, 2017, 6:25 AM IST

rahul.jpg

ಹೊಸದಿಲ್ಲಿ: ಸುಮಾರು ಎರಡು ದಶಕಗಳ ಸೋನಿಯಾ ಗಾಂಧಿ ಅಧ್ಯಕ್ಷೀಯ ಶಕೆ ಮುಕ್ತಾಯಗೊಂಡಿದೆ. 1998ರಲ್ಲಿ ಅಧಿಕಾರ ಸ್ವೀಕರಿಸುವಾಗ ಪಕ್ಷ ಗೊಂದಲದ ಗೂಡಾಗಿತ್ತು. ಆಗ ಮಧ್ಯ ಪ್ರದೇಶ, ಒಡಿಶಾ, ಮಿಜೋರಾಂ , ನಾಗಾಲ್ಯಾಂಡ್‌ನ‌ಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್‌ನ 141 ಸಂಸದರಿದ್ದರು. ಪಕ್ಷದ ದುಸ್ಥಿತಿಯೇ ಸೋನಿಯಾ ಪಕ್ಷದ ಚುಕ್ಕಾಣಿ ಹಿಡಿಯಲು ಒಪ್ಪುವಂತೆ ಮಾಡಿತ್ತು. ನಂತರದ ಆರೇ ವರ್ಷಗಳಲ್ಲಿ ಪಕ್ಷ ತನ್ನ ಮೊದಲಿನ ಸ್ಥಿತಿಗೆ ಬಂದಿತ್ತು. ಆದರೆ ಕಳೆದ 5 ವರ್ಷಗಳಿಂದಲೇ ಪುತ್ರ ರಾಹುಲ್‌ ಗಾಂಧಿಗೆ ಬಹುತೇಕ ಅಧಿಕಾರಗಳನ್ನು ಹಂತ ಹಂತವಾಗಿ ನೀಡುತ್ತಾ¤ ಬಂದಿದ್ದು, ಅಧಿಕಾರ ತೊರೆವ ಈ ಹೊತ್ತಿನಲ್ಲಿ ಅಧಿಕಾರ ಹಿಡಿಯುವಾಗ ಪಕ್ಷದ ದುಸ್ಥಿತಿಗಿಂತಲೂ ಕೆಳಕ್ಕೆ ಕುಸಿದಿರುವುದು ದುರಂತ.

ಆರಂಭ… 1991ರಲ್ಲಿ ರಾಜೀವ್‌ ಗಾಂಧಿ ಹತ್ಯೆಗೀಡಾದ ನಂತರ ಪಕ್ಷದ ನೇತೃತ್ವ ವಹಿಸಲು ಸೋನಿಯಾ ನಿರಾಕರಿಸಿದ್ದರು. ಆದರೆ ಕಾಂಗ್ರೆಸ್‌ ಮುಖಂಡರ ಒತ್ತಡಕ್ಕೆ ಮಣಿದ ಸೋನಿಯಾ, 1997ರಲ್ಲಿ ಪಕ್ಷದ ಪ್ರಾಥಮಿಕ ಸದಸ್ಯರಾದರು. ನಂತರ ಕೆಲವೇ ತಿಂಗಳುಗಳ ಬಳಿಕ 1998 ಮಾ.14 ರಂದು ಮೊದಲ ಬಾರಿಗೆ ಕಾಂಗ್ರೆಸ್‌ ಅಧ್ಯಕ್ಷೆ ಹುದ್ದೆಗೇರಿದರು. ಆದರೆ ಸೋನಿ ಯಾರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದರ ವಿರುದ್ಧ ಶರದ್‌ ಪವಾರ್‌, ಪಿ.ಎ.ಸಂಗ್ಮಾ, ತಾರಿಕ್‌ ಅನ್ವರ್‌ ಪ್ರತಿಭಟಿಸಿದ್ದರಿಂದ 1999 ಮೇ 15ರಂದು ರಾಜೀನಾಮೆ ನೀಡಿದರು. ನಂತರ ನಡೆದಿದ್ದೊಂದು ಬೃಹತ್‌ ಅಧ್ಯಾಯ.

ಕೊನೆಗೂ ಈ ಮೂವರನ್ನು ಪಕ್ಷದಿಂದ ಹೊರಹಾಕಿ ಕಾಂಗ್ರೆಸ್‌ ಅಧ್ಯಕ್ಷೆಯನ್ನಾಗಿ ಸೋನಿಯಾರನ್ನೇ ಕರೆತರಲಾ ಯಿತು. ಈ ಒಟ್ಟೂ ಬೆಳವಣಿಗೆ ಗಳಿಗೆ ಸೋನಿಯಾ ವಿದೇಶಿ ಮೂಲದವರು ಎಂಬುದೇ ಕಾರಣವಾಗಿತ್ತು. 1999ರಲ್ಲಿ ಚುನಾವಣೆ ವಿಷಯವೇ ಸೋನಿಯಾ ವಿದೇಶಿ ಮೂಲದವರು ಎಂಬುದಾಗಿತ್ತು.

ಮೊದಲ ಬಾರಿ ಯಶಸ್ಸು: 1999ರಲ್ಲಿ ಬಿಜೆಪಿ ಬಹುಮತ ಕಳೆದುಕೊಂಡಾಗ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಬೆಂಬಲದ ವಿಶ್ವಾಸದ ಮೇಲೆ ಸರಕಾರ ರಚಿಸಲು ನಿರ್ಧರಿಸಿ ದ್ದರು. ಆದರೆ ಕೊನೆ ಕ್ಷಣದಲ್ಲಿ ಮುಲಾಯಂ ಕೈಕೊಟ್ಟಿದ್ದರು. ಹೀಗಾಗಿ ಮೊದಲ ಬಾರಿ ಸರಕಾರ ರಚನೆ ಮಾಡುವ ಅವಕಾಶ ಕೈತಪ್ಪಿತ್ತು. ಆದರೆ 2004ರಲ್ಲಿ ಬಿಜೆಪಿ ಗೆಲುವು ಅಬಾಧಿತ ಎಂದೇ ಹೇಳಲಾಗುತ್ತಿದ್ದರೂ, ಕಾಂಗ್ರೆಸ್‌ ಬೇರು ಮಟ್ಟದಲ್ಲಿ ಕೆಲಸ ಮಾಡಿದ್ದರಿಂದಾಗಿ ಅಧಿಕಾರಕ್ಕೇರುವ ಹಂತಕ್ಕೆ ಬಂದಿತ್ತು. ಇದು ಸೋನಿಯಾ ಪ್ರಥಮ ಯಶಸ್ಸು. ಈವರೆಗೂ ಬಹುಮತ ದಿಂದಲೇ ಅಧಿಕಾರಕ್ಕೇರುತ್ತಿದ್ದ ಕಾಂಗ್ರೆ ಸ್‌, ಈ ಬಾರಿ ಇತರ ಪಕ್ಷಗಳ ಸಹಭಾಗಿತ್ವ ಪಡೆದು ಅಧಿಕಾರಕ್ಕೇರಿತು. ಸೋನಿಯಾ ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಪ್ರಧಾನಿ ಹುದ್ದೆ ತಿರಸ್ಕಾರ: 2004ರಲ್ಲಿ ಅಧಿಕಾರಕ್ಕೆ ಬಂದಾಗ ಸಹಜವಾಗಿಯೇ ಸೋನಿಯಾ ಪ್ರಧಾನಿ ಪಟ್ಟಕ್ಕೇರುವುದು ಖಚಿತವಾಗಿತ್ತು. ಆದರೆ ಈ ಹುದ್ದೆ ತಿರಸ್ಕರಿಸಿ ಸೋನಿಯಾ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಎಂದಿಗೂ ಅಧಿಕಾರ ನನ್ನನ್ನು ಆಕರ್ಷಿಸಿರಲಿಲ್ಲ. ಅದು ನನ್ನ ಗುರಿಯೂ ಅಲ್ಲ ಎಂದು ಬಿಟ್ಟರು. ಈ ವೇಳೆ ಅವರ ವಿದೇಶಿ ಮೂಲ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬಳ್ಳಾರಿಯಲ್ಲಿ ಸೋನಿಯಾ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌, ಸೋನಿಯಾ ಪ್ರಧಾನಿ ಯಾದರೆ ನಾನು ಜೀವನಪೂರ್ತಿ ವಿಧವೆಯಂತೆ ಬಾಳುತ್ತೇನೆ ಎಂದು ಶಪಥ ಮಾಡಿದ್ದರು.

2009ರಲ್ಲಿ ಮತ್ತೆ ಅಧಿಕಾರ: 206 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದು ಸತತ 2ನೇ ಬಾರಿಗೆ ಪಕ್ಷ ಅಧಿಕಾರಕ್ಕೇರಿತು. ಒಂದು ಸಂದರ್ಭ ದಲ್ಲಂತೂ ಕಾಂಗ್ರೆಸ್‌ 15 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೆ, ಹಗರಣಗಳ ಸರಣಿ ಪಕ್ಷವನ್ನು 2014ರ ಲೋಕಸಭೆ ಚುನಾವಣೆ ಯಲ್ಲಿ  ಹೀನಾಯವಾಗಿ ಸೋಲಿಸಿತು. 

ವಿವಾದ
ಸೋನಿಯಾ ಗಾಂಧಿ ಅಧಿಕಾರಕ್ಕೆ ಆಗಮಿಸಿದಾಗ ಇದ್ದುದಕ್ಕಿಂತಲೂ ಹೀನಾಯ ಸ್ಥಿತಿಗೆ ಕಾಂಗ್ರೆಸ್‌ ಈಗ ತಲುಪಿರುವುದು ಸೋನಿಯಾ ಗಾಂಧಿಯ ಒಟ್ಟು ಅಧಿಕಾರಾವಧಿಯ ಮೇಲಿರುವ ಕಪ್ಪುಚುಕ್ಕೆ. ಆದರೆ ಕಳೆದ ಐದು ವರ್ಷಗಳಲ್ಲೇ ರಾಹುಲ್‌ಗೆ ಬಹುತೇಕ ಅಧಿಕಾರಗಳನ್ನು ಹಂತಹಂತವಾಗಿ ಸೋನಿಯಾ ಬಿಟ್ಟುಕೊಟ್ಟಿ ದ್ದರು. ಇನ್ನೊಂದೆಡೆ 2015ರಲ್ಲೇ ನಡೆಯಬೇಕಿದ್ದ ಕಾಂಗ್ರೆಸ್‌ ಆಡಳಿತಾತ್ಮಕ ಚುನಾವಣೆಯನ್ನು ಮುಂದೂಡಿದ್ದು ಕೂಡ ಪಕ್ಷದಲ್ಲಿ ಟೀಕೆಗೆ ಗುರಿಯಾಗಿತ್ತು.

ಮುಂದಿರುವ ಸವಾಲುಗಳು
ಸಂಘಟನಾ ತಂಡ ಕಟ್ಟುವಿಕೆ: ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿ ಇದು ಕಷ್ಟ ಸಾಧ್ಯ. ಇದಕ್ಕೆ ಕಾರಣ ಇಂದು ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗಿಂತ ನಾಯಕರ ಸಂಖ್ಯೆಯೇ ಹೆಚ್ಚಾಗಿದೆ. ಪಕ್ಷದಲ್ಲಿರುವ ಹಿರಿಯರ ಕಡೆಗಣನೆ ಕೂಡ ಕಷ್ಟ. 

ನಾಯಕರ ಸೃಷ್ಟಿ: 2019ರ ಲೋಕಸಭೆ ಚುನಾವಣೆಗಾಗಿ ರಾಜ್ಯಮಟ್ಟದಲ್ಲಿ ತಳಮಟ್ಟದಿಂದ ಕಾರ್ಯಕರ್ತರನ್ನು ಪ್ರೇರೇಪಿಸುವಂಥ ನಾಯಕರ ಸೃಷ್ಟಿ. ಇದಕ್ಕಾಗಿ ಆಂತರಿಕವಾಗಿ ಇರುವ ಹೋರಾಟಗಳಿಗೆ ತಡೆ ಹಾಕಬೇಕು: ಆದರೆ ಈ ಪರಿಸ್ಥಿತಿಯಲ್ಲಿ ಇದು ತೀರಾ ದೊಡ್ಡ ಮಟ್ಟದ ಸವಾಲು. ಏಕೆಂದರೆ, 2019ರ ಚುನಾವಣೆಗೆ ಸಿದ್ಧವಾಗಲು ಇರುವ ಸಮಯ ತುಂಬಾ ಕಡಿಮೆ. ಅಂದರೆ ಇನ್ನು 18 ತಿಂಗಳಲ್ಲಿ ಈ ಕೆಲಸ ಮಾಡಬೇಕು. 

2018ರ ವಿಧಾನಸಭೆ ಚುನಾವಣೆಗಳು: ಮುಂದಿನ ವರ್ಷ ಮಹತ್ವದ ರಾಜ್ಯಗಳು ಎನಿಸಿಕೊಂಡಿರುವ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ‌ದಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕ ಹೊರತುಪಡಿಸಿ ಉಳಿದ ಮೂರರಲ್ಲೂ ಬಿಜೆಪಿಯದ್ದೇ ಆಳ್ವಿಕೆ. ಈ ರಾಜ್ಯಗಳಲ್ಲಿ ಸದರಿ ಮುಖ್ಯಮಂತ್ರಿಗಳ ಪ್ರತಿಯಾಗಿ ನಾಯಕತ್ವ ರೂಪಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಒಳಜಗಳಗಳನ್ನು ಹತ್ತಿಕ್ಕಿ ಮುನ್ನಡೆಯಬೇಕಿದೆ. 

ನರೇಂದ್ರ ಮೋದಿಗೆ ಪರ್ಯಾಯ: ಪಕ್ಷದೊಳಗಿನ ಇತರೆ ನಾಯಕರ ಅವಲಂಬನೆ ಬಿಟ್ಟು ಸ್ವಂತ ವರ್ಚಸ್ಸಿನಿಂದಲೇ ಬಲಾಡ್ಯ ನಾಯಕನಾಗಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಮೂಲಕವೇ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯ ಶಕ್ತಿ ಎಂತಾಗಬೇಕು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್‌ ಪ್ರಭಾವ ಹೆಚ್ಚುತ್ತಿದ್ದರೂ, ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಇನ್ನಷ್ಟು ಮಾಗಬೇಕು. 

ನುಡಿಗೆ ತಕ್ಕಂತೆ ನಡೆ: ಹಲವಾರು ಸಂದರ್ಭಗಳಲ್ಲಿ ಇವರು ರೈತರು, ಶ್ರಮಿಕರು, ಮೀನುಗಾರರು… ಹೀಗೆ ಹಲವಾರು ವಿಭಾಗಗಳ ಜನರ ನೋವಿಗೆ ಸ್ಪಂದಿಸಿದ್ದಾರೆ. ಆದರೆ ತಮಗೆ ರಾಜಕೀಯವಾಗಿ ಇಂಥದ್ದೇ ಒಂದು ದೃಷ್ಟಿಕೋನ ಅಥವಾ ಸಿದ್ಧಾಂತವಿದೆ ಎಂಬುದನ್ನು ತೋರಿಸುವಲ್ಲಿ ಇಂದಿಗೂ ವಿಫ‌ಲರಾಗಿದ್ದಾರೆ. 

ಇತರ ಪಕ್ಷಗಳ ನಾಯಕರ ಜತೆಗಿನ ಸಂಬಂಧ: 2019ರಲ್ಲಿ ಬಿಜೆಪಿಗೆ ಪ್ರತಿಯಾಗಿ ಇತರ ಪಕ್ಷಗಳೊಂದಿಗೆ ಸೇರಿ ಹೇಗೆ ಸರಕಾರ ರಚಿಸಬಹುದು ಎಂಬ ದೂರದೃಷ್ಟಿ ಇರಬೇಕು. ಆದರೆ ಈಗಾಗಲೇ ಮಹಾಘಟಬಂಧನ್‌ನಲ್ಲಿದ್ದ ನಿತೀಶ್‌ಕುಮಾರ್‌ ಬಿಟ್ಟಾಗಿದೆ. ಮಮತಾ ಬ್ಯಾನರ್ಜಿಗೆ ತನ್ನದೇ ಆದ ಪ್ರಧಾನಿ ಹುದ್ದೆಯ ಆಕಾಂಕ್ಷೆಗಳಿವೆ. ಎಲ್ಲರನ್ನೂ ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು ಎಂಬುದೂ ರಾಹುಲ್‌ ಮುಂದಿರುವ ಸವಾಲು. 

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.