ಮಸೂದ್‌ ಅಜರ್‌ಜೀ ಎಂದ ರಾಹುಲ್‌ ಗಾಂಧಿ


Team Udayavani, Mar 12, 2019, 12:30 AM IST

m-26.jpg

ಹೊಸದಿಲ್ಲಿ: ಪುಲ್ವಾಮಾ ದಾಳಿಯ ಸಂಚುಕೋರ ಜೈಶ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು “ಜೀ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಂಬೋಧಿಸಿದ್ದು ವಿವಾದಕ್ಕೀಡಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಸಭೆಯೊಂದರಲ್ಲಿ ಮಾತನಾಡಿದ ರಾಹುಲ್‌, “56 ಇಂಚಿನ ಈ ಜನರೇ ಈ ಹಿಂದೆ ಆಡಳಿತ ನಡೆಸುತ್ತಿದ್ದಾಗ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರು ಮಸೂದ್‌ ಅಜರ್‌ ಜೀ ಜೊತೆಗೆ ತೆರಳಿ, ಕಂದಹಾರ್‌ನಲ್ಲಿ ಹಸ್ತಾಂತರಿಸಿ ಬಂದಿದ್ದರು. ಇದೇ ಉಗ್ರ ಫೆ.14ರಂದು ಪುಲ್ವಾಮಾದಲ್ಲಿ 40ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣನಾಗಿದ್ದ’ ಎಂದಿದ್ದಾರೆ. 

ಇದಕ್ಕೆ ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ. ಈ ಹಿಂದೆ ದಿಗ್ವಿಜಯ್‌ ಸಿಂಗ್‌ರಂಥ ನಾಯಕರು ಒಸಾಮಾ ಜೀ ಹಾಗೂ ಹಫೀಜ್‌ ಸಯೀದ್‌ ಸಾಹಬ್‌ ಎಂದು ಕರೆದಿದ್ದರು. ಈಗ ನೀವು ಮಸೂದ್‌ ಅಜರ್‌ ಜೀ ಎಂದು ಕರೆದಿದ್ದೀರಿ. ಕಾಂಗ್ರೆಸ್‌ ಪಕ್ಷಕ್ಕೆ ಏನಾಗಿದೆ ಎಂದು ಸಚಿವ ರವಿಶಂಕರ ಪ್ರಸಾದ್‌ ಕೇಳಿದ್ದಾರೆ. ಆದರೆ ರಾಹುಲ್‌ ವ್ಯಂಗ್ಯವಾಗಿ ನೀಡಿರುವಂಥ ಈ ಹೇಳಿಕೆ ತಿರುಚಲಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲ ಹೇಳಿದ್ದಾರೆ. ಇನ್ನೊಂದೆಡೆ ಸಚಿವೆ ಸ್ಮತಿ ಇರಾನಿ ಕೂಡ ರಾಹುಲ್‌ ಹೇಳಿಕೆ ಟೀಕಿಸಿದ್ದಾರೆ. ರಾಹುಲ್‌ ಮತ್ತು ಪಾಕಿಸ್ಥಾನದ ಮಧ್ಯೆ ಯಾವ ಸಮಾನತೆ ಇದೆ? ಪಾಕಿಸ್ಥಾನ ಹಾಗೂ ರಾಹುಲ್‌, ಉಗ್ರರನ್ನು ಪ್ರೀತಿಸುತ್ತಾರೆ. ಮಸೂದ್‌ನನ್ನು ಯಾವ ರೀತಿ ರಾಹುಲ್‌ ಸಂಬೋಧಿಸಿದ್ದಾರೆ ಎಂಬುದನ್ನು ನೋಡಿ. 

ರಾಹುಲ್‌ಗೆ ಉಗ್ರರೆಂದರೆ ಪ್ರೀತಿ ಎಂದು ಟ್ವೀಟ್‌ ಮಾಡಿದ್ದಾರೆ.
ನೀವೇ ಆಯ್ಕೆ ಮಾಡಿ:  
ಇದೇ ವೇಳೆ, ಮಹಾತ್ಮ ಗಾಂಧಿಯ ಭಾರತ ಹಾಗೂ ನಾಥೂರಾಮ್‌ ಗೋಡ್ಸೆಯ ಭಾರತದ ಪೈಕಿ ಒಂದು ಭಾರತ ವನ್ನು ಆಯ್ದುಕೊಳ್ಳಿ. ಒಂದರಲ್ಲಿ ಪ್ರೀತಿಯಿದೆ ಹಾಗೂ ಇನ್ನೊಂದರಲ್ಲಿ ದ್ವೇಷವಿದೆ ಎಂದು ರಾಹುಲ್‌ ಗಾಂಧಿ ಪಕ್ಷದ ಬೂತ್‌ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೇಂದ್ರ ಸರಕಾರವು ರಫೇಲ್‌ ಡೀಲ್‌, ಡೋಕ್ಲಾಂ, ನಿರುದ್ಯೋಗ, ರಾಷ್ಟ್ರೀಯ ಭದ್ರತೆ ಸೇರಿ ಹಲವು ವಿಷಯಗಳಲ್ಲಿ ವಿಫ‌ಲವಾಗಿದೆ ಎಂದಿದ್ದಾರೆ.

ಇಂದು ಸಿಡಬ್ಲ್ಯೂಸಿ ಸಭೆ
ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನಿಂದಲೇ ಲೋಕಸಭೆ ಚುನಾವಣೆಗಾಗಿ ರಣತಂತ್ರ ಸಿದ್ಧಗೊಳಿಸಲು ಕಾಂಗ್ರೆಸ್‌ ಮುಂದಾಗಿದೆ. ಅದೇ ಉದ್ದೇಶಕ್ಕಾಗಿಯೇ ಮಂಗಳವಾರ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಯ ವಿಶೇಷ ಸಭೆ ಅಹಮದಾಬಾದ್‌ನಲ್ಲಿ ನಡೆಸಲಾಗುತ್ತದೆ. 1961ರಲ್ಲಿ ಭಾವಾನಗರದಲ್ಲಿ ಸಿಡಬ್ಲ್ಯೂಸಿ ಸಭೆ ನಡೆದು 58 ವರ್ಷ ಕಳೆದ ಬಳಿಕ ಗುಜರಾತ್‌ನಲ್ಲಿ ಮತ್ತೂಮ್ಮೆ ಸಭೆ ನಡೆಯುತ್ತಿದೆ. ಚುನಾವಣೆಗೆ ಪೂರಕವಾಗಿ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಗಾಂಧಿನಗರ ಜಿಲ್ಲೆಯ ಅದಲಾಜ್‌ ಎಂಬಲ್ಲಿ ಸಭೆಯ ಬಳಿಕ ಸಾರ್ವಜನಿಕ ಸಭೆಯನ್ನೂ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸಾರ್ವಜನಿಕ ಭಾಷಣ ಮಾಡುವ ಸಾಧ್ಯತೆ ಇದೆ. ಸಿಡಬ್ಲ್ಯೂಸಿ ಸಭೆಯಲ್ಲಿ ಈಡೇರಿಸಲಾಗದ ವಾಗ್ಧಾನಗಳ, ವೈಫ‌ಲ್ಯಗಳ ಬಗ್ಗೆ ಪ್ರಧಾನಿಯಿಂದ ಉತ್ತರ ಬಯಸುವ ಬಗ್ಗೆ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ.  ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ.ಮನೋಹನ್‌ ಸಿಂಗ್‌ ಸಹಿತ ಪ್ರಮುಖರು ಭಾಗವಹಿಸುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಡಿಡಿಎಲ್‌ಜೆ ರಂಗ ಪ್ರಯೋಗ!

ಡಿಡಿಎಲ್‌ಜೆ ರಂಗ ಪ್ರಯೋಗ!

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

ಪರಿಸರ ಹಾನಿ ನಷ್ಟ ತುಂಬಿಕೊಡಲು ಭಾರತ ಆಗ್ರಹ?

ಪರಿಸರ ಹಾನಿ ನಷ್ಟ ತುಂಬಿಕೊಡಲು ಭಾರತ ಆಗ್ರಹ?

ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆಗೆ ಕೋವಿಡ್

ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆಗೆ ಕೋವಿಡ್

ಪ್ರಧಾನಿ ಬದ್ಧತೆಗೆ ಶ್ಲಾಘನೆ : ಮೋದಿ ನಾಯಕತ್ವಕ್ಕೆ ಲಸಿಕೆ ತಯಾರಕ ಕಂಪನಿಗಳ ಮೆಚ್ಚುಗೆ

ಪ್ರಧಾನಿ ಬದ್ಧತೆಗೆ ಶ್ಲಾಘನೆ : ಮೋದಿ ನಾಯಕತ್ವಕ್ಕೆ ಲಸಿಕೆ ತಯಾರಕ ಕಂಪನಿಗಳ ಮೆಚ್ಚುಗೆ

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.