ರಾಹುಲ್ ಮಾತಾಡಿದ್ರೆ, ಪಾಕ್ ಚಪ್ಪಾಳೆ ತಟ್ಟುತ್ತೆ!
ಕಾಂಗ್ರೆಸ್ ನಾಯಕನ ವಿರುದ್ಧ ಅಮಿತ್ ಶಾ ಟೀಕೆ
Team Udayavani, Sep 1, 2019, 6:56 PM IST
ಸಿಲ್ವಾಸಾ (ದಾದ್ರಾ ನಗರ್ ಮತ್ತು ಹವೇಲಿ) : ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ಪಾಕಿಸ್ಥಾನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖೀಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಮಿತ್ ಶಾ ಟೀಕೆ ಮಾಡಿದ್ದಾರೆ.
ಅವರು ಇಲ್ಲಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಕಾಂಗ್ರೆಸ್ 370 ರದ್ಧತಿಯನ್ನು ವಿರೋಧಿಸಿರುವುದು ಪಾಕಿಸ್ಥಾನಕ್ಕೂ ಖುಷಿಯಾಗಿದೆ. ರಾಹುಲ್ ಅವರು ಮಾತನಾಡಿದರೆ ಮಾಡಿದರೆ ಪಾಕಿಸ್ಥಾನ ಚಪ್ಪಾಳೆ ತಟ್ಟುತ್ತದೆ. ಪಾಕ್ ರಾಹುಲ್ ಅವರ ಭಾರತ ವಿರೋಧಿ ಹೇಳಿಕೆಯನ್ನು ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ಸೇರಿಸಿದ್ದಕ್ಕೆ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದರು.
370 ರದ್ಧತಿಯಿಂದ ಇನ್ನು ಕಾಶ್ಮೀರದಲ್ಲಿ ಅಭಿವೃದ್ಧಿ ಕೆಲಸಗಳು ಆಗಲಿವೆ. ಭಾರತದೊಂದಿಗೆ ಕಾಶ್ಮೀರದ ಏಕೀಕರಣವು ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ಕೊನೆಯ ಮೊಳೆಯಾಗಲಿದೆ ಎಂದು ಹೇಳಿದರು.