ರಾಹುಲ್‌ಗ‌ೂ ವಯನಾಡ್‌ಗೂ ಇರುವ ಭಾವನಾತ್ಮಕ ಸಂಬಂಧ ಏನೆಂದು ಗೊತ್ತಾ ?

Team Udayavani, Apr 4, 2019, 6:02 PM IST

ವಯನಾಡ್‌ : ತನ್ನ ಕುಟುಂಬದ ರಾಜಕೀಯ ಭದ್ರಕೋಟೆಯಾಗಿರುವ ಅಮೇಠಿಯಿಂದ ಸ್ಪರ್ಧಿಸುವುದರ ಜತೆಗೆ ಕೇರಳದ ವಯನಾಡ್‌ ಕ್ಷೇತ್ರದಿಂದಲೂ ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೂ ವಯನಾಡ್‌ ಕ್ಷೇತ್ರಕ್ಕೂ ಯಾರಿಗೂ ಗೊತ್ತಿಲ್ಲದ ಒಂದು ವಿಶೇಷ ಭಾವನಾತ್ಮಕ ಸಂಬಂಧ ಇದೆ ಎಂದು ಪಕ್ಷದ ನಾಯಕರು ಇಂದಿಲ್ಲಿ ಹೇಳಿದರು.

ರಾಹುಲ್‌ ಗಾಂಧಿ ಅವರ ತಂದೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಚಿತಾಭಸ್ಮವನ್ನು 1991ರಲ್ಲಿ ಇಲ್ಲಿಗೆ ತಂದು ಇಲ್ಲಿನ ತಿರುನೆಲ್ಲಿ ಗ್ರಾಮದಲ್ಲಿರುವ ಸುಪ್ರಸಿದ್ಧ ಮಹಾ ವಿಷ್ಣು ದೇಗುಲದ ತೊರೆಗೆ ಸೇರುವ ಪಾಪನಾಶಿನಿಯಲ್ಲಿ  ಮುಳುಗಿಸಲಾಗಿತ್ತು.

ಈ ವಿಷಯವನ್ನು ಇಂದಿಲ್ಲಿ ಕೇರಳ ವಿಧಾನಸಭೆಯಲ್ಲಿನ ವಿರೋಧ ಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಅವರು ನೆನಪಿಸಿಕೊಂಡರು.

“ಆ ಸಂದರ್ಭದಲ್ಲಿ ಕೆ ಕರುಣಾಕರನ್‌ ಅವರು ಕೇರಳದ ಮುಖ್ಯಮಂತ್ರಿಯಾಗಿದ್ದಾರೆ. ರಾಜೀವ್‌ ಗಾಂಧಿ ಅವರ ಚಿತಾಭಸ್ಮವನ್ನು ಪಾಪನಾಶಿನಿಯಲ್ಲಿ ವಿಧ್ಯುಕ್ತವಾಗಿ ಮುಳುಗಿಸುವ ಸಂದರ್ಭದಲ್ಲಿ ಕರುಣಾಕರನ್‌, ನಾನು, ಮುಲ್ಲಪಳ್ಳಿ ರಾಮಚಂದ್ರನ್‌ ಮತು ಕೆ ಸಿ ವೇಣುಗೋಪಾಲ್‌ ಉಪಸ್ಥಿತರಿದ್ದೆವು’ ಎಂದು ಚೆನ್ನಿತ್ತಲ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

ರಾಜೀವ್‌ ಗಾಂಧಿ ಅವರು 1991ರ ಮೇ 21ರಂದು ತಮಿಳು ನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ಪ್ರಚಾರಾಭಿಯಾನದ ವೇಳೆ, ಆತ್ಮಾಹುತಿ ಬಾಂಬ್‌ ದಾಳಿಗೆ ಬಲಿಯಾಗಿದ್ದರು.

ವಯನಾಡ್‌ ನ ಪಾಪನಾಶಿನಲ್ಲಿ ಮೃತ ವ್ಯಕ್ತಿಯ ಚಿತಾಭಸ್ಮವನ್ನು ಮುಳುಗಿಸುವುದು ಬಿಹಾರದ ಗಯಾ ಪುಣ್ಯಕ್ಷೇತ್ರದಲ್ಲಿ ಕೈಗೊಳ್ಳುವ ವಿಧಿಗೆ ಸಮಾನವೆಂದು ತಿಳಿಯಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ