ಟಿಕೆಟ್‌ ರಹಿತ ಪ್ರಯಾಣಕ್ಕೆ ದಂಡ: ರೈಲ್ವೇಗೆ ಭರ್ಜರಿ ಆದಾಯ

ಅಕ್ಟೋಬರ್‌ ತಿಂಗಳಲ್ಲಿ ಸಂಗ್ರಹಗೊಂಡ ದಂಡದ ಮೊತ್ತ 22.87 ಕೋಟಿ ರೂ.

Team Udayavani, Nov 12, 2019, 8:33 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಟಿಕೆಟ್‌ ರಹಿತ ಪ್ರಯಾಣ ದಂಡಕ್ಕೆ ಆಹ್ವಾನ. ಆದರೆ ಇದೇ ದಂಡ ರೈಲ್ವೇ ಪಾಲಿಗೆ ಭರ್ಜರಿ ಆದಾಯದ ಮೂಲವಾಗಿ ಪರಿಣಮಿಸಿದೆ. 2019 ಅಕ್ಟೋಬರ್‌ನಲ್ಲಿ ಮಧ್ಯ ರೈಲ್ವೇ ದಂಡವೊಂದರಿಂದಲೇ 22.87 ಕೋಟಿ ರೂ.ಗಳನ್ನು ಸಂಪಾದಿಸಿದ್ದು, ದಂಡ ವಿಧಿಸುವ ಪ್ರಮಾಣ ಶೇ.70.32ರಷ್ಟು ಹೆಚ್ಚಾಗಿದೆ. 2018 ಅಕ್ಟೋಬರ್‌ನಲ್ಲಿ ಇದು 13.42 ಕೋಟಿ ರೂ. ಆಗಿತ್ತು.

ರೈಲ್ವೇ ಪತ್ರಿಕಾ ಪ್ರಕಟನೆ ಪ್ರಕಾರ, ಅಕ್ಟೋಬರ್‌ನಲ್ಲಿ ಟಿಕೆಟ್‌ ರಹಿತ ಪ್ರಯಾಣದ 4.25 ಲಕ್ಷ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದು 2.80 ಲಕ್ಷ ಆಗಿತ್ತು. 2019 ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಟಿಕೆಟ್‌ ರಹಿತ ಪ್ರಯಾಣದ 24.04 ಲಕ್ಷ ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಇದರ ಪ್ರಮಾಣ 20.81 ಲಕ್ಷ ಇತ್ತು. ಇನ್ನು 2019 ಎಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ ಟಿಕೆಟ್‌ ರಹಿತ ಪ್ರಯಾಣಕ್ಕಾಗಿ ದಂಡದಿಂದ ಪಡೆದ ಮೊತ್ತ 126.67 ಕೋಟಿ ರೂ. ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 103.77 ಕೋಟಿ ರೂ. ಆಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ