ಭಾರತದ 6,105 ರೈಲು ನಿಲ್ದಾಣಗಳಲ್ಲಿ ರೈಲ್ವೈರ್ ಸೇವೆ
Team Udayavani, Oct 2, 2022, 7:20 AM IST
ನವದೆಹಲಿ: ರೈಲ್ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾದ ಹೈಸ್ಪೀಡ್ ಇಂಟರ್ನೆಟ್ ಸೇವೆ ರೈಲ್ವೈರ್ ದೇಶದ 6,105 ರೈಲು ನಿಲ್ದಾಣಗಳಲ್ಲಿ ಲಭ್ಯವಿದೆ.
ಈ ಬಗ್ಗೆ ಶನಿವಾರ ಸಂಸ್ಥೆ ಘೋಷಣೆ ಮಾಡಿದೆ. “ರೈಲ್ವೈರ್ ಗ್ರಾಹಕರು ಇದಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಪ್ರೀಪೇಯ್ಡ ವೈ-ಪೈ ಪ್ಲಾನ್ಗಳನ್ನು ಖರೀದಿಸುವ ಅಗತ್ಯವಿಲ್ಲ. ಬದಲಾಗಿ ರೈಲ್ವೈರ್ ಫೈಬರ್ ಟು ದಿ ಹೋಮ್(ಎಫ್ಟಿಟಿಎಫ್) ಸಬ್ಸ್ಕ್ರಿಪ್ಶನ್ ಅನ್ನು ರೈಲ್ಟೆಲ್ನ ವೈ-ಫೈ ನೆಟ್ವರ್ಕ್ನಲ್ಲಿ ಬಳಸಬಹುದಾಗಿದೆ,’ ಎಂದು ಕಂಪನಿ ಹೇಳಿದೆ.
ಈ ನೂತನ ಸೌಲಭ್ಯ ಹೊಂದಲು ರೈಲ್ವೈರ್ ಗ್ರಾಹಕರು ತಮ್ಮ ಸ್ಮಾರ್ಟ್ಪೋನ್ನಲ್ಲಿ ವೈ-ಫೈ ಆನ್ ಮಾಡಿಕೊಳ್ಳಬೇಕು. ಅದರಲ್ಲಿ ರೈಲ್ವೈರ್ ಎಸ್ಎಸ್ಐಡಿ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ರೈಲ್ವೈರ್ ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಡೆಯಲು ಕ್ಯಾಪ್ಟಿವ್ ಪೋರ್ಟಲ್ನಲ್ಲಿನ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಬೇಕು ಎಂದು ಕಂಪನಿ ವಿವರಿಸಿದೆ. ಸದ್ಯ ಕಂಪನಿ 4.82 ಲಕ್ಷ ಮಂದಿ ಗ್ರಾಹಕರನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು