ರಾಜಸ್ಥಾನದಲ್ಲಿ ಎಂಟರ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ
Team Udayavani, Dec 13, 2018, 11:24 AM IST
ಜೈಪುರ : ರಾಜಸ್ಥಾನದ ಝಲವಾರ್ ಜಿಲ್ಲೆಯ ಗ್ರಾಮವೊಂದರ ಗದ್ದೆಯಲ್ಲಿ ಎಂಟು ವರ್ಷ ಪ್ರಾಯದ ಬಾಲಕಿಯೋರ್ವಳ ಮೃತ ದೇಹ ಪತ್ತೆಯಾಗಿದೆ. ಈಕೆಯನ್ನು ಅಪಹರಿಸಿ, ಅತ್ಯಾಚಾರಗೈದು, ಕುತ್ತಿಗೆ ಬಿಗಿದು ಕೊಂದಿರುವುದನ್ನು ಪೊಲೀಸರು ಶಂಕಿಸಿದ್ದಾರೆ.
ತನ್ನ ಅಜ್ಜನ ಮನೆಯಲ್ಲಿ (ತಾಯಿಯ ತಂದೆ) ವಾಸಿಸಿಕೊಂಡಿದ್ದು ಮೂರನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿ ಕಳೆದ ಮಂಗಳವಾರದಿಂದ ನಾಪತ್ತೆಯಾಗಿದ್ದಳು. ಆಕೆಯ ಶವ ನಿನ್ನೆ ಬುಧವಾರ ಹೊಲವೊಂದರಲ್ಲಿ ಕಂಡು ಬಂತು. ಹುಡುಗಿಯ ಎದೆಯ ಮೇಲೆ ಗೀರಿದ ಗಾಯ ಕಂಡು ಬಂದಿದೆ. ದೇಹದಲ್ಲಿ ಬೇರೆ ಯಾವುದೇ ರೀತಿಯ ಗಾಯಗಳ ಗುರುತು ಕಂಡು ಬಂದಿಲ್ಲ ಎಂದು ಎಸ್ಎಚ್ಓ ರಾಧಾ ಕಿಶನ್ ಹೇಳಿದ್ದಾರೆ.
ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿ ಪೊಲೀಸರು ಸ್ಥಳೀಯ ತರುಣನೋರ್ವನನು ಶಂಕಿಸಿದ್ದಾರೆ. ಬಾಲಕಿಯ ಶವ ಪತ್ತೆಯಾದೊಡನೆಯೇ ಆತ ವಿದ್ಯುತ್ ತಂತಿ ಸ್ಪರ್ಶಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ಪಾರುಗೊಳಿಸಲಾಗಿದ್ದು ಆತನೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸರು ಪೋಕ್ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ