ಸಂಭಾರ್ ಸರೋವರ ಪಕ್ಷಿ ದುರಂತ : ಸಾವಿರಾರು ಹಕ್ಕಿಗಳ ಸಾವಿನ ರಹಸ್ಯ ಬಯಲು

ಬೊಟುಲಿಸಂ ಮಾರಕ ರೋಗಕ್ಕೆ ಹಾರಿಹೋಯಿತು ವಲಸೆ ಹಕ್ಕಿಗಳ ಪ್ರಾಣ

Team Udayavani, Nov 22, 2019, 7:21 PM IST

ಜೈಪುರ: ದೇಶದ ಅತಿದೊಡ್ಡ ಉಪ್ಪು ನೀರಿನ ಸರೋವರ ಸಂಭಾರ್ ತೀರದಲ್ಲಿ  ಸುಮಾರು ಹತ್ತು ಪ್ರಭೇದಗಳ ಸಾವಿರಾರು ವಲಸೆ ಪಕ್ಷಿಗಳ ಸಾವಿಗೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿಯೊಂದು ಲಭ್ಯವಾಗಿದೆ.

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಕ್ಕಿಗಳು ಸಾವಿಗೀಡಾಗಲು ಬೊಟುಲಿಸಂ ಎಂಬ ಮಾರಕ ರೋಗ ಕಾರಣ ಎಂಬ ಆಘಾತಕಾರಿ ಅಂಶ ಇದೀಗ ಹೊರಬಿದ್ದಿದೆ. ಪಕ್ಷಿಗಳ ನರದ ಮೇಲೆ ಈ ರೋಗ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಹಕ್ಕಿಗಳಲ್ಲಿ ಪಾರ್ಶ್ವವಾಯುವಿನಂತಹ ಸಮಸ್ಯೆ ಉಂಟಾಗಿ ಅವು ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ಈ ಕುರಿತು ರಾಜ್ಯ ಪಶುಸಂಗೋಪನಾ ಸಚಿವ ಲಾಲ್‌ಚಂದ್‌ ಕಟಾರಿಯಾ ಮಾಹಿತಿ ಹಂಚಿಕೊಂಡಿದ್ದು, ‘ಸಂಭಾರ್‌ ಸರೋವರದಲ್ಲಿ ದೇಶೀಯ ಮತ್ತು ವಲಸೆ ಹಕ್ಕಿಗಳ ಸಾವಿಗೆ ಏವಿಯನ್‌ ಬೊಟುಲಿಸಮ್‌ ಕಾರಣವಾಗಿದ್ದು, ಇದನ್ನು ಬರೇಲಿಯಾದ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ಧೃಡಪಡಿಸಿದೆ’ ಎಂದು ಹೇಳಿದ್ದಾರೆ.

ಮೊದಲಿಗೆ ಹಕ್ಕಿಗಳು ಕಲುಷಿತ ನೀರು ಅಥವಾ ಏವಿಯನ್‌ ಪ್ಲ್ಯೂ ಸಮಸ್ಯೆಗೊಳಗಾಗಿ ಸಾಯುತ್ತಿವೆ ಎಂದು ಊಹಿಸಿಲಾಗಿತ್ತದರೂ, ಕರಳು ಪರೀಕ್ಷೆ ವರದಿಯ ನಂತರ ಅವುಗಳ ಸಾವಿಗೆ ಬೊಟುಲಿಸಂ ಎಂಬ ಮಾರಕ ರೋಗ ಕಾರಣ ಎಂದು ತಿಳಿದುಬಂದಿದೆ.

ಪ್ರತೀ ವರ್ಷ ಚಳಿಗಾಲದ ಋತುವಿನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಹಾರಿ ಬರುವ ಹಕ್ಕಿಗಳು ಈ ವಿಶ್ವ ಪ್ರಸಿದ್ಧ ಸರೋವರದಲ್ಲಿ ಬೀಡುಬಿಡುತ್ತವೆ. ಆದರೆ ಈ ಬಾರಿ ಮಾತ್ರ ಸಾವಿರಾರು ಮೈಲುಗಳಷ್ಟು ದೂರದಿಂದ ಹಾರಿಬಂದಿದ್ದ ಈ ಹಕ್ಕಿಗಳ ಪಾಲಿಗೆ ತಮ್ಮ ನೆಚ್ಚಿನ ಸರೋವರ ಸ್ಮಶಾನವಾಗಿ ಮಾರ್ಪಟ್ಟಿದ್ದು ಮಾತ್ರ ದುರಂತವೇ ಸರಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...

  • ನಗರದ ಕೇಂದ್ರ ಭಾಗವಾದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಬಸ್‌ ನಿಲುಗಡೆಗೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ....