ಹುತಾತ್ಮ ಜವಾನ ಹರಿ ಭಾಕರ್‌ಗೆ ನೂರಾರು ದುಃಖತಪ್ತರ ಶ್ರದ್ಧಾಂಜಲಿ

Team Udayavani, Mar 25, 2019, 11:39 AM IST

ಜೈಪುರ : ಹುತಾತ್ಮ ಜವಾನ ಹರಿ ಭಾಕರ್‌ ಪಾರ್ಥಿವ ಶರೀರವನ್ನು ಇಂದು ಆತನ ಹುಟ್ಟೂರಾದ ರಾಜಸ್ಥಾನದ ನಾಗೋರ್‌ನ ಮಾಕ್ರಾನನಾ ಗ್ರಾಮಕ್ಕೆ ತರಲಾಯಿತು. ನೂರಾರು ಮಂದಿ ದುಃಖತಪ್ತರು ಹುತಾತ್ಮ ಭಾಕರ್‌ ಗೆ ಶ್ರದ್ಧಾಂಜಲಿ ಅರ್ಪಿಸಿದರು.

ಜವಾನ್‌ ಭಾಕರ್‌ ಅವರು ಕಳೆದ ಮಾರ್ಚ್‌ 23ರಂದು ಕಾಶ್ಮೀರದ ಪೂಂಚ್‌ ನಲ್ಲಿ ಪಾಕ್‌ ಪಡೆಗಳಿಂದ ಭಾನುವಾರ ಬೆಳಗ್ಗೆ 4 ಗಂಟೆಯ ವೇಳಗೆ ನಡೆದಿದ್ದ ಕದನ ವಿರಾಮ ಉಲ್ಲಂಘನೆಯ ವೇಳೆ ತೀವ್ರ ಗುಂಡೇಟು ಪಡೆದಿದ್ದರು. ಒಡನೆಯೇ ಅವರನ್ನು ಸಮೀಪದ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆ ಫ‌ಲಿಸದೆ ಕೊನೆಯುಸಿರೆಳೆದಿದ್ದರು.

ಪಾಕ್‌ ಪಡೆಗಳು ಕಳೆದ ಶನಿವಾರ ಸಂಜೆ 5.30ರ ಸುಮಾರಿಗೆ ಪೂಂಚ್‌ ಜಿಲ್ಲೆಯ ಶಾಪುರ ಮತ್ತು ಕೇರ್ನಿ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆಗೈದು ಆರಂಭಿಸಿದ್ದ ಗುಂಡಿನ ದಾಳಿ ರಾತ್ರಿ ಪೂರ್ತಿ ನಡೆದು ಮರುದಿನ ಭಾನುವಾರ ನಸುಕಿನ ವೇಳೆ ತನಕವೂ ಮುಂದುವರಿದಿತ್ತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಸೋಮವಾರ ಭಾಕರ್‌ ಅವರ ಅಂತ್ಯಕ್ರಿಯೆ ಅವರ ಹುಟ್ಟೂರ ಗ್ರಾಮದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನಡೆಸಲಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ