ರಾಜಸ್ಥಾನದಲ್ಲಿ ಐಎಎಫ್ ಮಿಗ್‌ 21 ಪತನ : ಪೈಲಟ್‌ ಹೊರಜಿಗಿದು ಪಾರು

Team Udayavani, Mar 8, 2019, 10:29 AM IST

ಬಿಕಾನೇರ್‌ : ರಾಜಸ್ಥಾನದ ಬಿಕಾನೇರ್‌ ನಗರಕ್ಕೆ ಸಮೀಪದಲ್ಲಿ  ಇಂದು ಬೆಳಗ್ಗೆ  ಭಾರತೀಯ ವಾಯು ಪಡೆಯ ಮಿಗ್‌ 21 ಫೈಟರ್‌ ಜೆಟ್‌ ಪತನಗೊಂಡಿರುವುದಾಗಿ ವರದಿಯಾಗಿದೆ

ವಿಮಾನದ ಪೈಲಟ್‌ ಸುರಕ್ಷಿತವಾಗಿ ಪ್ಯಾರಾಶೂಟ್‌ ಮೂಲಕ ಸಕಾಲದಲ್ಲಿ ಹೊರ ಜಿಗಿದು ಜೀವಸಹಿತ ಪಾರಾಗಿರುವುದಾಗಿ ವರದಿಯಾಗಿದೆ.

ವಾಯು ಪಡೆಯ ಈ ವಿಮಾನ ಎನ್‌ಎಎಲ್‌ ವಾಯು ಪಡೆ ನೆಲೆಯಿಂದ ತನ್ನ ಎಂದಿನ ಅಭ್ಯಾಸ ಹಾರಾಟವನ್ನು ಕೈಗೊಂಡಿತ್ತು. ಬಿಕಾನೇರ್‌ ನಗರದಿಂದ 14 ಕಿ.ಮೀ. ದೂರದ ಶೋಭಾಸರ ಗ್ರಾಮದಲ್ಲಿ ಅದು ಪತನಗೊಂಡಿತು.

ವಾಯು ಪಡೆಯ ರಕ್ಷಣಾ ತಂಡ ಕೂಡಲೇ ಅವಘಡ ತಾಣಕ್ಕೆ ಧಾವಿಸಿರುವುದಾಗಿ ತಿಳಿದು ಬಂದಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ