Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

Team Udayavani, May 28, 2024, 1:18 AM IST

1-wew-ewe

ಅಹ್ಮದಾಬಾದ್‌: ರಾಜ್‌ಕೋಟ್‌ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರಕರಣ ದಾಖಲಿಸಿಕೊಂಡಿರುವ ಗುಜರಾತ್‌ ಹೈಕೋರ್ಟ್‌ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇಂತಹ ದುರ್ಘ‌ಟನೆ ಬಳಿಕ ನಮಗೆ ರಾಜ್ಯ ಸರಕಾರದ ಮೇಲೆ ಭರವಸೆ ಇಲ್ಲದಂತಾಗಿದೆ ಎಂದು ಹೇಳಿದೆ.

ನ್ಯಾ| ಬೀರೆನ್‌ ವೈಷ್ಣವ್‌ ಹಾಗೂ ನ್ಯಾ|ದೇವನ್‌ ದೇಸಾಯಿ ಅವರಿದ್ದ ವಿಶೇಷ ಪೀಠ, ಇದು ಮಾನವ ಮಾಡಿದ ತಪ್ಪಿನಿಂದ ಉಂಟಾದ ದುರಂತ ಎಂದು ಹೇಳಿದೆ. ಈ ಗೇಮಿಂಗ್‌ ಸೆಂಟರ್‌ ಯಾವುದೇ ಅನುಮತಿ ಪಡೆಯದೇ ಸುಮಾರು ಎರಡೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ. ಕ್ರಮ ಕೈಗೊಳ್ಳದೇ ನೀವು ನಿದ್ದೆಗೆ ಜಾರಿದ್ದಿರಾ ಅಥವಾ ನಿಮ್ಮ ಕಣ್ಣು ಕುರುಡಾಗಿದೆಯೇ ಎಂದು ಕೋರ್ಟ್‌ ಪ್ರಶ್ನಿಸಿದೆ.

ಬೆಂಕಿ ಅವಘಡಗಳನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ 4 ವರ್ಷದ ಹಿಂದೆಯೇ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಮಾಯಕರ ಸಾವು ಸಂಭವಿಸಿದ ಮೇಲೆ ನಮಗೆ ರಾಜ್ಯ ಸರಕಾರದ ಮೇಲೆ ಭರವಸೆ ಇಲ್ಲದಂತಾಗಿದೆ ಎಂದು ನ್ಯಾಯಪೀಠ ಹೇಳಿದೆ.

6 ಮಂದಿ ಅಮಾನತು

ದುರಂತಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ರಾಜ್ಯ ಸರಕಾರ ಅಮಾನತು ಮಾಡಿದೆ. ಈ ಅಧಿಕಾರಿಗೆ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ಸರಕಾರ ಆರೋಪಿಸಿದೆ. ಅಮಾನತಾಗಿರುವ ಅಧಿಕಾರಿಗಳಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಸಹ ಸೇರಿದ್ದಾರೆ. ಇದೇ ವೇಳೆ, ಘಟನೆಗೆ ಸಂಬಂಧಿಸಿದಂತೆ ಮತ್ತೂಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಒಟ್ಟು ಮೂವರನ್ನು ಬಂಧಿಸಲಾಗಿದೆ.

ಪೊಲೀಸ್‌ ಆಯುಕ್ತರ ಎತ್ತಂಗಡಿ

ಗೇಮಿಂಗ್‌ ಸೆಂಟರ್‌ನಲ್ಲಿ ಉಂಟಾಗಿರುವ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ರಾಜ್‌ಕೋಟ್‌ ಮಹಾನಗರ ಪಾಲಿಕೆ ಆಯುಕ್ತ ಆನಂದ್‌ ಪಟೇಲ್‌ರನ್ನು ಎತ್ತಂಗಡಿ ಮಾಡಲಾಗಿದೆ. ಇದರ ಜತೆಗೆ ನಗರ ಪೊಲೀಸ್‌ ಆಯುಕ್ತ ರಾಜು ಭಾರ್ಗವ, ಜತೆಗೆ ಇನ್ನಿಬ್ಬರು ಐಪಿಎಸ್‌ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.

ದುರಂತಕ್ಕೆ ವೆಲ್ಡಿಂಗ್‌ ಕಿಡಿಯೇ ಕಾರಣ?
ಗೇಮಿಂಗ್‌ ಝೋನ್‌ ಅಗ್ನಿ ಅವಘಡಕ್ಕೆ ವೆಲ್ಡಿಂಗ್‌ ಯಂತ್ರದಿಂದ ಉಂಟಾ ದ ಬೆಂಕಿಯ ಕಿಡಿ ಕಾರಣ ಎಂದು ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದುಬಂದಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ವೆಲ್ಡಿಂಗ್‌ ಕೆಲಸ ನಡೆದಿತ್ತು. ವೆಲ್ಡಿಂಗ್‌ ಯಂತ್ರದಿಂದ ಉಂಟಾದ ಕಿಡಿ ಹತ್ತಿರದಲ್ಲೇ ಇದ್ದ ಪ್ಲಾಸ್ಟಿಕ್‌ ರಾಶಿಗೆ ತಗಲಿದ್ದು, ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಸುರಕ್ಷ ಉಪಕ ರಣವಿದ್ದರೂ, ಬೆಂಕಿ ಆರಿಸ ಲಾಗಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಬೆಂಕಿ ಎಲ್ಲೆಡೆ ವ್ಯಾಪಿಸಿದೆ. ವೆಲ್ಡಿಂಗ್‌ ನ ಸಣ್ಣ ಕಿಡಿ ಅತೀ ದೊಡ್ಡ ಅವಘಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

MBPatil

Job for Reservation; ಉದ್ಯಮಗಳ ಹಿತಾಸಕ್ತಿಗೆ ಬದ್ಧ: ಎಂ. ಬಿ. ಪಾಟೀಲ್‌

vidhana-Soudha

Reservation For Job: ಮೀಸಲಾತಿ ಮಸೂದೆ ಪರಾಮರ್ಶೆಗೆ ಸಂಪುಟ ಉಪಸಮಿತಿ ರಚನೆ?

electricity

Tender ಕರೆಯದೆ ಎಐ ಕಂಪೆನಿಗೆ ಪ್ರತಿ ತಿಂಗಳಿಗೆ 3 ಕೋಟಿ ರೂ. ಪಾವತಿ!

Uttar Pradesh ಬಿಜೆಪಿಯಲ್ಲಿ ವಿಪ್ಲವ! ನಡ್ಡಾ ಭೇಟಿಯಾದ ಉಪಮುಖ್ಯಮಂತ್ರಿ ಮೌರ್ಯ

Uttar Pradesh ಬಿಜೆಪಿಯಲ್ಲಿ ವಿಪ್ಲವ! ನಡ್ಡಾ ಭೇಟಿಯಾದ ಉಪಮುಖ್ಯಮಂತ್ರಿ ಮೌರ್ಯ

Kharajola

State Government; ಅನುದಾನವಿಲ್ಲದೆ 50ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರಿಗೆ ಅಸಮಾಧಾನ

ಇಂದೂ ಬಿಜೆಪಿ ಪ್ರತಿಭಟನೆ: ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ

BJP protest; ಇಂದೂ ಬಿಜೆಪಿ ಪ್ರತಿಭಟನೆ: ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ

Zilla, Taluk ಚುನಾವಣೆ ವಿಳಂಬ: ಮೂರು ವರ್ಷ ಕಳೆದರೂ ಮನಸ್ಸು ಮಾಡದ ಸರಕಾರ

Zilla, Taluk ಚುನಾವಣೆ ವಿಳಂಬ: ಮೂರು ವರ್ಷ ಕಳೆದರೂ ಮನಸ್ಸು ಮಾಡದ ಸರಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh ಬಿಜೆಪಿಯಲ್ಲಿ ವಿಪ್ಲವ! ನಡ್ಡಾ ಭೇಟಿಯಾದ ಉಪಮುಖ್ಯಮಂತ್ರಿ ಮೌರ್ಯ

Uttar Pradesh ಬಿಜೆಪಿಯಲ್ಲಿ ವಿಪ್ಲವ! ನಡ್ಡಾ ಭೇಟಿಯಾದ ಉಪಮುಖ್ಯಮಂತ್ರಿ ಮೌರ್ಯ

Rajasthan: ಮೊಹರಂ ವೇಳೆ ಶರಬತ್‌ ಕುಡಿದು 400 ಮಂದಿ ಅಸ್ವಸ್ಥ

Rajasthan: ಮೊಹರಂ ವೇಳೆ ಶರಬತ್‌ ಕುಡಿದು 400 ಮಂದಿ ಅಸ್ವಸ್ಥ

Video: ಹೀಗಾದ್ರೆ ಹೇಗೆ… ಕರ್ತವ್ಯದಲ್ಲಿದ್ದ ಪೊಲೀಸರಿಂದ ಠಾಣೆಯಲ್ಲೇ ಎಣ್ಣೆ ಪಾರ್ಟಿ…

Video: ಹೀಗಾದ್ರೆ ಹೇಗೆ… ಕರ್ತವ್ಯದಲ್ಲಿದ್ದ ಪೊಲೀಸರಿಂದ ಠಾಣೆಯಲ್ಲೇ ಎಣ್ಣೆ ಪಾರ್ಟಿ…

Job: ರಾಜ್ಯದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ; ಕೇಂದ್ರ ಸಚಿವ ಅಠಾವಳೆ ಬೆಂಬಲ

Job: ರಾಜ್ಯದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ; ಕೇಂದ್ರ ಸಚಿವ ಅಠಾವಳೆ ಬೆಂಬಲ

1-ss-dasd

UP BJP; ಸಿಎಂ ಯೋಗಿ vs ಡಿಸಿಎಂ ಮೌರ್ಯ: ದೆಹಲಿಯಲ್ಲಿ ನಡೆದ ಮಹತ್ವದ ಮಾತುಕತೆ

MUST WATCH

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹೊಸ ಸೇರ್ಪಡೆ

MBPatil

Job for Reservation; ಉದ್ಯಮಗಳ ಹಿತಾಸಕ್ತಿಗೆ ಬದ್ಧ: ಎಂ. ಬಿ. ಪಾಟೀಲ್‌

vidhana-Soudha

Reservation For Job: ಮೀಸಲಾತಿ ಮಸೂದೆ ಪರಾಮರ್ಶೆಗೆ ಸಂಪುಟ ಉಪಸಮಿತಿ ರಚನೆ?

electricity

Tender ಕರೆಯದೆ ಎಐ ಕಂಪೆನಿಗೆ ಪ್ರತಿ ತಿಂಗಳಿಗೆ 3 ಕೋಟಿ ರೂ. ಪಾವತಿ!

Uttar Pradesh ಬಿಜೆಪಿಯಲ್ಲಿ ವಿಪ್ಲವ! ನಡ್ಡಾ ಭೇಟಿಯಾದ ಉಪಮುಖ್ಯಮಂತ್ರಿ ಮೌರ್ಯ

Uttar Pradesh ಬಿಜೆಪಿಯಲ್ಲಿ ವಿಪ್ಲವ! ನಡ್ಡಾ ಭೇಟಿಯಾದ ಉಪಮುಖ್ಯಮಂತ್ರಿ ಮೌರ್ಯ

Kharajola

State Government; ಅನುದಾನವಿಲ್ಲದೆ 50ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರಿಗೆ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.