ಸಿಂಗ್ ಭೇಟಿ; ಚೀನಾದ ಗಡಿ ಬುಮ್ ಲಾ ಪಾಸ್ ನಲ್ಲಿ ಮೊಳಗಿದ ಭಾರತ್ ಮಾತಾ ಕೀ ಜೈ ಘೋಷಣೆ

Team Udayavani, Nov 15, 2019, 4:53 PM IST

ಬುಮ್ ಲಾ ಪಾಸ್ (ಅರುಣಾಚಲ ಪ್ರದೇಶ): ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಅರುಣಾಚಲ ಪ್ರದೇಶದ ಇಂಡೋ-ಚೀನಾ ಗಡಿ ಪ್ರದೇಶ ಸಮೀಪದ ಬುಮ್ ಲಾ ಪಾಸ್ ಪ್ರದೇಶಕ್ಕೆ ಭೇಟಿ ನೀಡಿ ಎಲ್ ಎಸಿ(ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್) ಯಲ್ಲಿನ ಭದ್ರತೆಯನ್ನು ಪರಿಶೀಲಿಸಿದರು.

ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿನ ಬುಮ್ಲಾ ಪ್ರದೇಶಕ್ಕೆ ಸಿಂಗ್ ಭೇಟಿ ನೀಡಿ, ಧೈರ್ಯಶಾಲಿ ಭಾರತೀಯ ಸೇನಾಪಡೆಯ ಧೈರ್ಯಶಾಲಿ ಯೋಧರು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಅತ್ಯಂತ ಕಠಿಣ ವಾತಾವರಣದಲ್ಲಿ ಭಾರತೀಯ ಸೇನೆ ರಕ್ಷಣಾ ಕಾರ್ಯ ನಿರ್ವಹಿಸುತ್ತಿದೆ ಎಂದು ರಾಜ್ ನಾಥ್ ಸಿಂಗ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಎಲ್ ಸಿಎಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಯೋಧರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗೆ ರಾಜನಾಥ್ ಸಿಂಗ್ ಕೂಡಾ ಸಾಥ್ ನೀಡಿ ಘೋಷಣೆ ಕೂಗಿದ್ದರು. ಈ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಸಿಂಗ್ ಹಂಚಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ