
ಯೋಧರ ಶೌರ್ಯವನ್ನು ಹೊಗಳಲು ಪದಗಳು ಸಾಕಾಗುವುದಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಶೌರ್ಯ ಸ್ಥಲ ಎಂಬ ಯುದ್ಧ ಸ್ಮಾರಕ ಉದ್ಘಾಟನೆ
Team Udayavani, Jan 14, 2023, 4:40 PM IST

ಚೀರ್ ಬಾಗ್( ಉತ್ತರಾಖಂಡ) : ಹುತಾತ್ಮ ಯೋಧರಿಗೆ ಸಮರ್ಪಿತವಾಗಿರುವ ಶೌರ್ಯ ಸ್ಥಲ ಎಂಬ ಯುದ್ಧ ಸ್ಮಾರಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಉದ್ಘಾಟಿಸಿದರು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರೊಂದಿಗೆ ರಕ್ಷಣಾ ಸಚಿವರು ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ರಾಷ್ಟ್ರ ಸೇವೆಯಲ್ಲಿ ಹುತಾತ್ಮರಾದ ರಾಜ್ಯದ ವೀರ ಯೋಧರಿಗೆ ಗೌರವ ಸಲ್ಲಿಸಿದರು.
ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಹಿರಿಯ ಯೋಧರ ದಿನಾಚರಣೆಯ ಸಂದರ್ಭದಲ್ಲಿ ಸಶಸ್ತ್ರ ಪಡೆಗಳು, ಯೋಧರು ಮತ್ತು ಯುದ್ಧದಲ್ಲಿ ಸೈನಿಕರಾಗಿದ್ದ ಪತಿಯನ್ನು ಕಳೆದುಕೊಂಡಿರುವ ಮಹಿಳೆಯರನ್ನು ಉದ್ದೇಶಿಸಿ, ದೇಶದ ಗಡಿಗಳು ವೀರ ಯೋಧರಿಂದಾಗಿ ಸುರಕ್ಷಿತವಾಗಿವೆ ಅವರಿಂದಾಗಿ ಹೆಮ್ಮೆಯಿಂದ ನಿಲ್ಲುತ್ತದೆ.ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಯೋಧರ ಕೊಡುಗೆ ಬಹಳ ದೊಡ್ಡದಾಗಿದೆ. ನಿಮ್ಮಿಂದಾಗಿ ನಾವು ಇಂದು ಹೆಮ್ಮೆಯಿಂದ ನಿಲ್ಲಬಲ್ಲೆವು. ನಿಮ್ಮ ಶೌರ್ಯವನ್ನು ಹೊಗಳಲು ಪದಗಳು ಸಾಕಾಗುವುದಿಲ್ಲ ಎಂದರು.
”ಯೋಧರು ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ ಏಕೆಂದರೆ ಅದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ.ದೇಶಕ್ಕಾಗಿ ನೀವು ಮಾಡುವ ಮಹಾನ್ ತ್ಯಾಗಕ್ಕೆ ಪ್ರತಿಯಾಗಿ ನಾವು ಮಾಡಬಹುದಾದ ಒಂದು ಸಣ್ಣ ಭಾಗವಾಗಿದೆ. ಇಡೀ ದೇಶವು ಯುದ್ಧ ಯೋಧರಿಗೆ ಕೃತಜ್ಞತೆಯ ಋಣವನ್ನು ಹೊಂದಿದೆ”ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ

Russia-Ukraine War ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಬೆಂಬಲಿಸಿದ ರಾಹುಲ್ ಗಾಂಧಿ

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್: ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

ಕಣ್ಣೂರು ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: CCTVಯಲ್ಲಿ ಅಪರಿಚಿತ ವ್ಯಕ್ತಿ ಪತ್ತೆ

BJP MLA: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಬಿಜೆಪಿ ಶಾಸಕ