ಎಲ್‌ಜೆಪಿ ಸಂಸದ ರಾಮ್‌ಚಂದ್ರ ಪಾಸ್ವಾನ್‌ಗೆ ತೀವ್ರ ಹೃದಯಾಘಾತ

Team Udayavani, Jul 12, 2019, 4:33 PM IST

ಹೊಸದಿಲ್ಲಿ:ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಸಹೋದರ, ಎಲ್‌ಜೆಪಿ ಸಂಸದ ರಾಮ್‌ಚಂದ್ರ ಪಾಸ್ವಾನ್‌ ಅವರಿಗೆ ಗುರುವಾರ ರಾತ್ರಿ ತೀವ್ರ ತರವಾದ ಹೃದಯಾಘಾತವಾಗಿದೆ.

ರಾಮ್‌ ಚಂದ್ರ ಅವರನ್ನು ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಐಸಿಯುನಲ್ಲಿ ರಾಮ್‌ಚಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಅವರನ್ನು ಹೃದ್ರೋಗ ತಜ್ಞರು ವಿಶೇಷ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಆರೋಗ್ಯ ವಿಚಾರಣೆ ನಡೆಸಿದ್ದಾರೆ.

57 ರ ಹರೆಯದ ರಾಮ್‌ಚಂದ್ರ ಪಾಸ್ವಾನ್‌ ಅವರು ಬಿಹಾರದ ಸಮಷ್ಠಿಪುರ ಲೋಕಸಭಾ ಕ್ಷೇತ್ರದಿಂದ 3 ನೇ ಬಾರಿ ಸಂಸದನಾಗಿ ಆಯ್ಕೆಯಾಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ