Supreme Court: ರಾಮದೇವ್‌, ಪತಂಜಲಿ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ತರಾಟೆ

ಕಾಟಾಚಾರದ ಬೇಷರತ್‌ ಕ್ಷಮಾಚನೆ ಸಲ್ಲಿಸಿದ್ದ ಪತಂಜಲಿ ವಿರುದ್ಧ ಸುಪ್ರೀಂ ಗರಂ

Team Udayavani, Apr 2, 2024, 8:55 PM IST

Ramdev, Patanjali, Center is severely beaten by the Supreme Court

ನವದೆಹಲಿ: ಪತಂಜಲಿಯ ತಪ್ಪು ಮಾಹಿತಿ ಜಾಹೀರಾತು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಂಗಳವಾರ ಬಾಬಾ ರಾಮದೇವ್‌, ಪತಂಜಲಿಯ ಸಿಇಒ ಆಚಾರ್ಯ ಬಾಲಕೃಷ್ಣ ಮತ್ತು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಾಂಗ ನಿಂದನೆಯ ಸಂಬಂಧ ಪಂತಜಲಿ ಸಲ್ಲಿಸಿದ್ದ ಅಫಿಡವಿಟ್‌ ಸಂಪೂರ್ಣ ನಿರ್ಲಕ್ಷ್ಯದಿಂದ ಕೂಡಿದೆ. ಪತಂಜಲಿ ನಿಯಮವನ್ನು ಉಲ್ಲಂ ಸುತ್ತಿದ್ದರೂ ಕೇಂದ್ರ ಸರ್ಕಾರವೇಕೆ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ನ್ಯಾ..ಹಿಮಾ ಕೊಹ್ಲಿ ಮತ್ತು ನ್ಯಾ. ಅಹ್ಸಾನುದ್ದೀನ್‌ ಅಮಾನುಲ್ಲಾ  ನೇತೃತ್ವದ ನ್ಯಾಯಪೀಠ ಆಕ್ಷೇಪಿಸಿತು.

ಜಾಹೀರಾತಿಗೆ ಸಂಬಂಧಿಸಿದಂತೆ ಪತಂಜಲಿ ಸಲ್ಲಿಸಿದ್ದ ಬೇಷರತ್‌  ಕ್ಷಮೆಯಾಚನೆಯೂ ಕಾಟಾಚಾರಕ್ಕೆ ಸಲ್ಲಿಸಿದಂತಿದೆ. ಇದು ಅಸಮರ್ಥನೀಯ ಹಾಗೂ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿದ್ದು, ಪತಂಜಲಿ ಕೋರ್ಟ್‌ಗೆ ಸುಳ್ಳು ಹೇಳಿದೆ ಎಂದು ಹೇಳಿತು.

ತಪ್ಪು ದಾರಿಗೆಳೆಯುವ ಜಾಹೀರಾತು ಪ್ರದರ್ಶಿಸುತ್ತಿರುವ ಪತಂಜಲಿ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಕೋರ್ಟ್‌ ಮೆಟ್ಟಿಲೇರಿದೆ.

ಜಾಹೀರಾತು ಪ್ರಸಾರ ನಿಲ್ಲಿಸುವಂತೆ ಕೋರ್ಟ್‌ನ ಆದೇಶವು ತನ್ನ ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲ ಎಂಬ ಪತಂಜಲಿಯ ಹೇಳಿಕೆಗೆ ಕೋರ್ಟ್‌ ವ್ಯಘ್ರವಾಯಿತು. “”ಪತಂಜಲಿಯ ಈ ಸಮರ್ಥನೆಯನ್ನು ಒಪ್ಪಲಾಗದು. ಕೋರ್ಟ್‌ ನೀಡುವ ಆದೇಶವನ್ನು ಗೌರವಿಸಬೇಕು” ಎಂದು ನ್ಯಾ.ಹಿಮಾ ಕೊಹ್ಲಿ ಅವರು, ಪತಂಜಲಿಯ ಪರ ವಕೀಲ ಕೈ ಮುಗಿದು ನಿಂತ ಬಳಿಕ ಹೇಳಿದರು.

ಬಾಬಾ ರಾಮದೇವ್‌ ಅವರಿಗೆ ಕೊನೆಯ ಅವಕಾಶ ನೀಡುತ್ತಿದ್ದೇವೆ. ಅವರು ಸೂಕ್ತವಾದ ರೀತಿಯಲ್ಲಿ ಅಫಿಡವಿಟ್‌ ಸಲ್ಲಿಸಬೇಕು ಎಂದು ಹೇಳಿದ ಕೋರ್ಟ್‌ ಮುಂದಿನ ವಿಚಾರಣೆಯನ್ನು ಏ.10ಕ್ಕೆ ಮುಂದೂಡಿತು.

ಟಾಪ್ ನ್ಯೂಸ್

Rain-M

Heavy Rain: ಪುತ್ತೂರು ಸೇರಿದಂತೆ 4 ತಾಲೂಕಿನ ಶಾಲಾ ಕಾಲೇಜಿಗೆ ಜು.19ಕ್ಕೆ ರಜೆ

1-hardik

Tried our best; 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ ಪಾಂಡ್ಯ-ನತಾಶಾ

Karadi-savu

Gundlupet: ಸಿಡಿಮದ್ದು ಸಿಡಿದು ಕರಡಿ ಮೃತ್ಯು

Siruguppa ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದ ಮೊಬೈಲ್‌ ಟವರ್‌

Siruguppa ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದ ಮೊಬೈಲ್‌ ಟವರ್‌

1-sss

Hill collapse; ಶಿರಾಡಿ ಘಾಟ್ ನಲ್ಲಿ ಎಲ್ಲ ವಾಹನಗಳ ಸಂಚಾರ ನಿಷೇಧ

Somanna

Railway; ನನೆಗುದಿಗೆ ಬಿದ್ದಿದ್ದ ಯೋಜನೆ ಪೂರ್ಣಕ್ಕೆ ಕ್ರಮ: ಕೇಂದ್ರ ಸಚಿವ ಸೋಮಣ್ಣ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Andhra Pradesh; ಟಿಡಿಪಿ ಕಾರ್ಯಕರ್ತನಿಂದ ವೈಎಸ್‌ಆರ್‌ಸಿಪಿ ಕಾರ್ಯಕರ್ತನ ಬರ್ಬರ ಹತ್ಯೆ

1-sadsa-d

Independence Day; ಈ ಬಾರಿ ಕೆಂಪು ಕೋಟೆಯಲ್ಲಿ ಭದ್ರತೆ ವೈಶಿಷ್ಟ್ಯವೇನು?

1-pal

Bengal; ಮೆರವಣಿಗೆಯಲ್ಲಿ ಪ್ಯಾಲೇಸ್ತೀನ್ ಧ್ವಜ:ವಿಡಿಯೋ ಹಂಚಿಕೊಂಡ ಬಿಜೆಪಿಯ ಸುವೆಂದು ಅಧಿಕಾರಿ

akhilesh

Monsoon Offer; ನೂರು ಶಾಸಕರನ್ನು ತನ್ನಿ ಸರಕಾರ ರಚಿಸಿ: ಅಖಿಲೇಶ್ ಆಫರ್

Army Prevents Infiltration Attempt In Kupwara

Line of Control; ಒಳನುಸುಳುವಿಕೆ ತಡೆದ ಸೇನೆ; ಇಬ್ಬರು ಉಗ್ರರ ಹತ್ಯೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-aane-aa

Animal communication language; ಆನೆಗಳಿಗೂ ಹೆಸರಿವೆ ಗೊತ್ತಾ…!

Rain-M

Heavy Rain: ಪುತ್ತೂರು ಸೇರಿದಂತೆ 4 ತಾಲೂಕಿನ ಶಾಲಾ ಕಾಲೇಜಿಗೆ ಜು.19ಕ್ಕೆ ರಜೆ

1-hardik

Tried our best; 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ ಪಾಂಡ್ಯ-ನತಾಶಾ

Karadi-savu

Gundlupet: ಸಿಡಿಮದ್ದು ಸಿಡಿದು ಕರಡಿ ಮೃತ್ಯು

police crime

Andhra Pradesh; ಟಿಡಿಪಿ ಕಾರ್ಯಕರ್ತನಿಂದ ವೈಎಸ್‌ಆರ್‌ಸಿಪಿ ಕಾರ್ಯಕರ್ತನ ಬರ್ಬರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.