‘ಯಾರಿವನು ಮನ್ಮಥನು..!’ ; ನೆಟ್ಟಿಗರು ಹಾಲಿವುಡ್ ಸ್ಟಾರ್ ಎಂದು ಕರೆದಿದ್ಯಾರನ್ನು?

ಇನ್ ಸ್ಟಾಗ್ರಾಂನಲ್ಲ #throwbackthursday ಗೆ ಕಿಚ್ಚು ಹಚ್ಚಿದ ಉದ್ಯಮಿ ರತನ್ ಟಾಟಾ

Team Udayavani, Jan 23, 2020, 5:24 PM IST

ನವದೆಹಲಿ: ಉದ್ಯಮಿ ರತನ್ ಟಾಟಾ ಅವರನ್ನು ಫೊಟೋ ಅಥವಾ ವಿಡಿಯೋಗಳಲ್ಲಿ ಹೆಚ್ಚಿನವರು ನೋಡಿಯೇ ಇರುತ್ತೀರಿ. ಭಾರತದ ಪ್ರತಿಷ್ಠಿತ ವಾಹನ ತಯಾರಿ ಕಂಪೆನಿಗಳಲ್ಲಿ ಒಂದಾಗಿರುವ ಟಾಟಾ ಕಂಪೆನಿಯ ಮಾಜೀ ಅಧ್ಯಕ್ಷ ಮತ್ತು ಹೆಸರಾಂತ ಉದ್ಯಮಿಯಾಗಿಯೂ ರತನ್ ಟಾಟಾ ಅವರು ಹೆಸರುವಾಸಿಯಾಗಿದ್ದಾರೆ.

82 ವರ್ಷದ ರತನ್ ಟಾಟಾ ಅವರು ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂಗೆ ಪ್ಲಾಟ್ ಫಾರಂಗೆ ಎಂಟ್ರಿಕೊಟ್ಟಿದ್ದರು. ಸೋಷಿಯಲ್ ಮೀಡಿಯಾಗೆ ಲೇಟಾಗಿ ಎಂಟ್ರಿ ಕೊಟ್ಟರೂ ಇಲ್ಲಿನ ಪಟ್ಟುಗಳನ್ನು ರತನ್ ಟಾಟಾ ಅವರು ಬಹುಬೇಗನೆ ಕರಗತ ಮಾಡಿಕೊಳ್ಳುತ್ತಿದ್ದಾರೆ.

ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಾಣಿಗಳ ಫೊಟೋ ಮತ್ತು ನೈಜ ಸ್ಪೂರ್ತಿದಾಯಕ ಘಟನೆಗಳ ಕುರಿತಾಗಿ ಮಾಹಿತಿ ಸಹಿತ ಫೊಟೋಗಳನ್ನು ಹಾಕುವ ಮೂಲಕ ರತನ್ ಟಾಟಾ ಅವರು ಆ್ಯಕ್ಟಿವ್ ಆಗಿದ್ದಾರೆ.

ಇಂದು #throwbackthursday ಎಂಬ ಹ್ಯಾಷ್ ಟ್ಯಾಗ್ ನಲ್ಲಿ ತಾವು ಯುವಕನಾಗಿದ್ದಾಗಿನ ಫೊಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ರತನ್ ಟಾಟಾ ಅವರು ಭಾರತಕ್ಕೆ ವಾಪಾಸಾಗುವ ಮೊದಲು ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಇದ್ದಾಗ ತೆಗೆಸಿಕೊಂಡಿದ್ದ ಈ ಫೊಟೋವನ್ನು ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ.

ರತನ್ ಟಾಟಾ ಅವರ ಈ ಚಾರ್ಮಿಂಗ್ ಫೊಟೋ ನೋಡಿ ನೆಟ್ಟಿಗರು ಶಾಕ್ ಗೊಳಗಾಗಿದ್ದಾರೆ. ಮತ್ತು ಫೊಟೋದಲ್ಲಿ ಇರುವ ಆ ಯುವಕ ‘ರತನ್ ಟಾಟಾ’ ಎಂದು ನಂಬುವುದೇ ಕಷ್ಟವಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.


‘ನಾನು ನಿನ್ನೆಯೇ ಈ ಫೊಟೋವನ್ನು ಹಾಕಬೇಕು ಅಂದುಕೊಂಡಿದ್ದೆ, ಆದರೆ, ‘ಗುರುವಾರ ತ್ರೋ ಬ್ಯಾಕ್’ ಕುರಿತಾಗಿ ಯಾರೋ ಹೇಳಿದರು ಮತ್ತು ಇದು ಪ್ರತೀ ಗುರುವಾರ ಇನ್ ಸ್ಟಾಗ್ರಾಂನಲ್ಲಿ ಇದು ನಡೆಯುತ್ತಿರುತ್ತದೆ ಎಂದು ತಿಳಿದು ಗುರುವಾರದಂದು ಈ ಫೊಟೋವನ್ನು ಪೋಸ್ಟ್ ಮಾಡುತ್ತಿದ್ದೇನೆ. ನಾನು ಖುಷಿಯಾಗಿ ಭಾರತಕ್ಕೆ ಮರಳುವ ಮೊದಲು ಲಾಸ್ ಏಂಜಲೀಸ್ ನಲ್ಲಿ ನಾನು ಕಳೆದ ದಿನಗಳ ತ್ರೋ ಬ್ಯಾಕ್ ಇಲ್ಲಿದೆ.*#throwbackthursday’ ಎಂದು ಬರೆದುಕೊಂಡಿದ್ದಾರೆ.

ಈ ಫೊಟೋವನ್ನು ನೋಡಿದ ನೆಟ್ಟಿಗರು ರತನ್ ಟಾಟಾ ಅವರ ಈ ಲುಕ್ ಅನ್ನು ವಿಶೇಷವಾಗಿ ಪ್ರಶಂಸಿದ್ದಾರೆ. ಕೆಲವರು ರತನ್ ಅವರನ್ನು ಹಾಲಿವುಡ್ ಸ್ಟಾರ್ ಗೆ ಹೋಲಿಸಿದ್ದಾರೆ.

ಉದ್ದೇಶ, ದೂರದೃಷ್ಟಿ ಮತ್ತು ಉತ್ತಮ ಹಾಸ್ಯಪ್ರವೃತ್ತಿ ನಿಮ್ಮಲ್ಲಿದೆ – ಯೂ ರಾಕ್ ಸರ್’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಈ ‘ತ್ರೋ ಬ್ಯಾಕ್ ಥರ್ಸ್ ಡೇ’ ಕಾನ್ಸೆಪ್ಟ್ ಗೆ ಇಂದು ಉದ್ಯಮಿ ರತನ್ ಟಾಟಾ ಅವರು ತಮ್ಮ ಈ ಫೊಟೋದ ಮೂಲಕ ಕಿಚ್ಚು ಹಚ್ಚಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ