ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಬಂದ ರತನ್ ಟಾಟಾ
Team Udayavani, May 19, 2022, 12:26 AM IST
ಮುಂಬಯಿ : ಸರಳತೆ ಹಾಗೂ ವಿನಮ್ರತೆಯ ನಡೆ-ನುಡಿಯಿಂದಾಗಿ ನೆಟ್ಟಿಗರ ಮನ ಗೆದ್ದಿರುವ ಟಾಟಾ ಸಮೂಹ ಸಂಸ್ಥೆಗಳ ಧುರೀಣ ರತನ್ ಟಾಟಾ, ಮತ್ತೊಮ್ಮೆ ನೆಟ್ಟಿಗರ ಹೃದಯ ಮುಟ್ಟಿದ್ದಾರೆ.
ಬುಧವಾರದಂದು ಮುಂಬಯಿಯಲ್ಲಿರುವ ಟಾಟಾ ಕಂಪೆನಿ ಮಾಲಕತ್ವದ ತಾಜ್ ಹೊಟೇಲ್ಗೆ ತಮ್ಮ ಸಂಸ್ಥೆಯಿಂದ ಈ ಹಿಂದೆ ಹೊರತರಲಾಗಿದ್ದ ಬಜೆಟ್ ಕಾರಾದ ಟಾಟಾ ನ್ಯಾನೋದಲ್ಲಿ ಆಗಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಿಳಿ ಬಣ್ಣದ ನ್ಯಾನೋ ಕಾರಿನಲ್ಲಿ, ಯಾವುದೇ ಭದ್ರತಾ ಸಿಬಂದಿ ಇಲ್ಲದೆ ಆಗಮಿಸಿದರು.
ಹೊಟೇಲ್ ಪ್ರವೇಶಿಸುತ್ತಿದ್ದಂತೆ ಅವರನ್ನು ಹೊಟೇಲ್ನ ಸಿಬಂದಿ ಸುತ್ತುವರಿದು ಅವರಿಗೆ ಭದ್ರತೆ ಒದಗಿಸಿದರು. ವೈರಲ್ ಭಯಾನಿ ಎಂಬ ಛಾಯಾಗ್ರಾಹಕರು ಇದಿಷ್ಟನ್ನೂ ಚಿತ್ರೀಕರಿಸಿ, ತಮ್ಮ ಇನ್ಸ್ಟಾ ಗ್ರಾಂನಲ್ಲಿ ಹಂಚಿ ಕೊಂಡಿದ್ದು, ಆ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬುಧವಾರ ರಾತ್ರಿಯ ಹೊತ್ತಿಗೆ 1.29 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ. ಟಾಟಾರವರ ಸರಳ ವ್ಯಕ್ತಿತ್ವನ್ನು ನೆಟ್ಟಿಗರು ಹಾಡಿ ಕೊಂಡಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು