ಜಡೇಜ ದಂಪತಿ ಇದ್ದ ಕಾರು ಅಪಘಾತ; ಪತಿ – ಪತ್ನಿ ಪಾರು
Team Udayavani, Jan 28, 2017, 7:37 PM IST
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಸವ್ಯಸಾಚಿ ರವೀಂದ್ರ ಜಡೇಜ ಮತ್ತು ಅವರ ಪತ್ನಿ ರೀವಾ ಸೋಳಂಕಿ ಇದ್ದ ಕಾರು ಜಾಮ್ ನಗರದಲ್ಲಿ ಅವಘಡಕ್ಕೆ ಗುರಿಯಾಗಿದ್ದು ಪತಿ – ಪತ್ನಿ ಇಬ್ಬರೂ ಪಾರಾಗಿದ್ದಾರೆ.
ಜಡೇಜ ಅವರ ಕಾರಿನ ಹಿಂಭಾಗವು ಮೊಪೆಡ್ ಒಂದಕ್ಕೆ ಢಿಕ್ಕಿ ಹೊಡೆದಿದ್ದು ಯಾರ ತಪ್ಪಿನಿಂದಾಗಿ ಈ ಅಪಘಾತ ಸಂಭವಿಸಿತೆಂದು ಗೊತ್ತಾಗಿಲ್ಲ.
ಮೊಪೆಡ್ ಚಲಾಯಿಸುತ್ತಿದ್ದ ತರುಣಿ ಪ್ರೀತಿ ಶರ್ಮಾ ಎಂಬಾಕೆಗೆ ಗಾಯಗಳಾಗಿದ್ದು ಜಡೇಜ ಆಕೆಯನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಒಯ್ದಿದ್ದಾರೆ. ಈಕೆ ಜಾಮ್ ನಗರದ ವಿದ್ಯಾಸಾಗರ್ ಇನ್ಸ್ಟಿಟ್ಯೂಟ್ನಲ್ಲಿ ಶಿಕ್ಷಣ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
28ರ ಹರೆಯದ ಜಡೇಜ ಅವರನ್ನು ಪ್ರವಾಸಿ ಇಂಗ್ಲಂಡ್ ಎದುರಿನ 3 ಪಂದ್ಯಗಳ ಟಿ-20 ಸರಣಿಯಿಂದ ಹೊರಗಿಡಲಾಗಿದೆ. ಭಾರತ ಕಳೆದ ಗುರುವಾರ ಕಾನ್ಪುರದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಸೋತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ