ಹಬ್ಬದ ಕೊಡುಗೆ ಪ್ರಕಟಿಸಿದ ಎಸ್ಬಿಐ
Team Udayavani, Sep 17, 2021, 6:40 AM IST
ಹೊಸದಿಲ್ಲಿ: ದೇಶದ ಸಾರ್ವಜನಿಕ ರಂಗದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಗ್ರಾಹಕರಿಗೆ ಹಬ್ಬದ ಋತುವಿನ ಹಲವು ಕೊಡುಗೆಗಳನ್ನು ಪ್ರಕಟಿಸಿದೆ.
ಮೊತ್ತದ ಮಿತಿಯಿಲ್ಲದೆ ಗೃಹಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 6.70ಕ್ಕೆ ಇಳಿಸ ಲಾಗಿದೆ. ಈ ಹಿಂದೆ 75 ಲಕ್ಷ ರೂ.ಗಳಿಗಿಂತ ಹೆಚ್ಚಿನ ಗೃಹ ಸಾಲ ಪಡೆಯುವವರು ಶೇ. 7.15 ಬಡ್ಡಿದರ ಪಾವತಿಸಬೇಕಾಗಿತ್ತು. ವೇತನದಾರರಲ್ಲದವರಿಗೆ ನೀಡಲಾಗುವ ಸಾಲಕ್ಕೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಬಡ್ಡಿದರವನ್ನೂ ತೆಗೆದು ಹಾಕ ಲಾಗಿದೆ. ಇದರಿಂದ ವೇತನ ದಾರರಲ್ಲದವರಿಗೆ ಗೃಹಸಾಲ ಗಳ ಮೇಲಿನ ಬಡ್ಡಿಯಲ್ಲಿ 15 ಮೂಲಾಂಶಗಳಷ್ಟು ಉಳಿ ತಾಯವಾಗಲಿದೆ. ಗೃಹ ಸಾಲಗಳ ಸಂಸ್ಕರಣ ಶುಲ್ಕವನ್ನು ತೆಗೆದುಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ