Udayavni Special

ಊರ್ಜಿತ್‌ ರಾಜೀನಾಮೆಯಿಂದ ಆಕ್ರೋಶ

Team Udayavani, Dec 11, 2018, 6:00 AM IST

d-132.jpg

ಮುಂಬಯಿ: ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆ ನೀಡುತ್ತಿದ್ದಂತೆ ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿದ್ದು, ಸ್ವಾಯತ್ತ ಸಂಸ್ಥೆಗಳನ್ನು ಹತ್ತಿಕ್ಕಲು ಮೋದಿ ಸರಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಇದುವೇ ಸಾಕ್ಷಿ ಎಂದು ಆರೋಪಿಸಿವೆ.
ವಿಪಕ್ಷಗಳ ಆರೋಪಗಳಿಗೆ ಸರಕಾರವಾಗಲೀ, ಬಿಜೆಪಿ ನಾಯಕರಾಗಲೀ ಯಾವುದೇ ಪ್ರತ್ರಿಕ್ರಿಯೆ ನೀಡಿಲ್ಲ. ಆದರೆ, ಊರ್ಜಿತ್‌ ಪಟೇಲ್‌ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರು ಟ್ವೀಟ್‌ ಮಾಡಿದ್ದಾರೆ.

ಊರ್ಜಿತ್‌ ರಾಜೀನಾಮೆ ಬಳಿಕ ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ ಮೋದಿ, ಹಳಿತಪ್ಪಿದ್ದ ಬ್ಯಾಂಕಿಂಗ್‌ ವ್ಯವಸ್ಥೆ ಯನ್ನು ಊರ್ಜಿತ್‌ ಪಟೇಲ್‌ ಅವರು ಸರಿದಾರಿಗೆ ತಂದಿದ್ದಾರೆ. ಅಲ್ಲದೆ, ವ್ಯವಸ್ಥೆಯಲ್ಲಿ ಶಿಸ್ತು ಮೂಡುವಂತೆ ಮಾಡಿದ್ದಾರೆ. ಆರ್ಥಿಕ ವಿಚಾರಗಳನ್ನು ಅರೆದು ಕುಡಿದಿರುವಂಥ ಶ್ರೇಷ್ಠ ವ್ಯಕ್ತಿ. ಅವರ ನಾಯಕತ್ವ ದಲ್ಲಿ ಆರ್‌ಬಿಐ ಆರ್ಥಿಕ ಸ್ಥಿರತೆಯನ್ನು ಸಾಧಿಸಿತು ಎಂದು ಹೊಗಳಿದ್ದಾರೆ. ಅಲ್ಲದೆ, ಅವರನ್ನು ನಾವು ತುಂಬಾ ಮಿಸ್‌ ಮಾಡಿ ಕೊಳ್ಳುತ್ತೇವೆ ಎಂದೂ ಹೇಳಿದ್ದಾರೆ.

ಕಾಂಗ್ರೆಸ್‌ ಟೀಕೆ: ಊರ್ಜಿತ್‌ ಪಟೇಲ್‌ ರಾಜೀನಾಮೆಯಿಂದ ಬೇಸರವಾಗಿದೆ ವಿನಾ ಅಚ್ಚರಿಯಾಗಿಲ್ಲ. ಆತ್ಮಾಭಿಮಾನ ವಿರು  ವಂಥ ಯಾವುದೇ ವಿದ್ವಾಂಸ ಅಥವಾ ವ್ಯಕ್ತಿಗೆ ಎನ್‌ಡಿಎ ಸರಕಾರದಡಿ ಕೆಲಸ ಮಾಡಲು ಆಗುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಹೇಳಿದ್ದಾರೆ. ಇನ್ನೊಂ ದೆಡೆ, ಕಾಂಗ್ರೆಸ್‌ ವಕ್ತಾರ ರಣ ದೀಪ್‌ ಸುಜೇìವಾಲಾ ಮಾತನಾಡಿ, ಎನ್‌  ಡಿಎ ಸರಕಾರವು ಮತ್ತೂಂದು ಸ್ವಾಯತ್ತ ಸಂಸ್ಥೆಗೆ ಕಳಂಕ ತಂದಿದೆ. ಪಟೇಲ್‌ ರಾಜೀನಾಮೆಯು ಆರ್‌ಬಿಐನ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೇಂದ್ರ ಸರಕಾರದ ಪ್ರಯತ್ನದ ಫ‌ಲ ಎಂದು ಟೀಕಿಸಿದ್ದಾರೆ.

ಏತನ್ಮಧ್ಯೆ. ಆರ್‌ಬಿಐ ಗವರ್ನರ್‌ ಹಾಗೂ ಉಪಗವರ್ನರ್‌ ಆಗಿ ಊರ್ಜಿತ್‌ ಪಟೇಲ್‌ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸರಕಾರ ಶ್ಲಾ ಸುತ್ತದೆ. ಅವರೊಂದಿಗಿನ ಒಡನಾಟದಿಂದಾಗಿ ನಾನು ಬಹಳಷ್ಟು ಉತ್ತಮ ವಿಚಾರಗಳನ್ನು ಕಲಿತಿದ್ದೇನೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಟ್ವೀಟ್‌ ಮಾಡಿದ್ದಾರೆ.

ವಿರಳ್‌ ಆಚಾರ್ಯ ರಾಜೀನಾಮೆ ನೀಡಿಲ್ಲ
ಆರ್‌ಬಿಐ ಗವರ್ನರ್‌ ಸ್ಥಾನಕ್ಕೆ ಊರ್ಜಿತ್‌ ಪಟೇಲ್‌ ರಾಜೀನಾಮೆ ನೀಡಿದ ಕ್ಷಣದಲ್ಲಿಯೇ ಡೆಪ್ಯುಟಿ ಗವರ್ನರ್‌ ವಿರಳ್‌ ಆಚಾರ್ಯ ಅವರೂ ಹುದ್ದೆ ತ್ಯಜಿಸಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್‌ಬಿಐ ವಕ್ತಾರರು, “ಇದೊಂದು ಆಧಾರ ರಹಿತ ಸುದ್ದಿ’ ಎಂದು ಹೇಳಿದ್ದಾರೆ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದಾರೆ.

ಊರ್ಜಿತ್‌ ಪಟೇಲ್‌ ಅವರ ರಾಜೀನಾಮೆಯಿಂದ ಅಚ್ಚರಿ ಹಾಗೂ ಆಘಾತವಾಗಿದೆ. ಇದೊಂದು ದೊಡ್ಡ ಹಿನ್ನಡೆ. ಅವರನ್ನು ನಾವು ತುಂಬಾ ಮಿಸ್‌ ಮಾಡಿಕೊಳ್ಳುತ್ತೇವೆ.
ಎಸ್‌. ಗುರುಮೂರ್ತಿ, 
ಆರ್‌ಬಿಐ ಸ್ವತಂತ್ರ ನಿರ್ದೇಶಕ

ದೇಶದ ಪ್ರಗತಿ ಅಥವಾ ಸುಸ್ಥಿರ ಅಭಿವೃದ್ಧಿಗೆ ಸಂಸ್ಥೆಗಳ ಬಲಿಷ್ಠತೆಯು ಅತ್ಯಂತ ಮುಖ್ಯ. ಹಾಗಾಗಿ ಊರ್ಜಿತ್‌ ಪಟೇಲ್‌ರ ರಾಜೀನಾಮೆಯು ಪ್ರತಿಯೊಬ್ಬ ಭಾರತೀಯನೂ ಕಳವಳ ಪಡುವಂಥ ವಿಷಯ.
ರಘುರಾಂ ರಾಜನ್‌,  
ಆರ್‌ಬಿಐ ಮಾಜಿ ಗವರ್ನರ್‌

ಟಾಪ್ ನ್ಯೂಸ್

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ವಿಕ್ರಾಂತ್‌ ನಿರ್ಮಾಣದ ವೆಚ್ಚ ವ್ಯರ್ಥವಾಗದು: ಕರಮ್‌ಬೀರ್‌ ಸಿಂಗ್‌ ಭರವಸೆ

ವಿಕ್ರಾಂತ್‌ ನಿರ್ಮಾಣದ ವೆಚ್ಚ ವ್ಯರ್ಥವಾಗದು: ಕರಮ್‌ಬೀರ್‌ ಸಿಂಗ್‌ ಭರವಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿರ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

ನಿಡಿಗಲ್‌ ಸೇತುವೆ: ಮತ್ತೆ ಹೊಂಡ

ನಿಡಿಗಲ್‌ ಸೇತುವೆ: ಮತ್ತೆ ಹೊಂಡ

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.