ಸಿಬಿಐಗೆ ಸ್ವಾಯತ್ತತೆ ಕೊಡಿ: ಹೈಕೋರ್ಟ್
Team Udayavani, Aug 19, 2021, 6:50 AM IST
ಮಧುರೈ: ಚುನಾವಣ ಆಯೋಗ, ಮಹಾಲೇಖಪಾಲ (ಸಿಎಜಿ)ರಿಗೆ ನೀಡಲಾಗಿರುವ ಸ್ವಾಯತ್ತೆಯಂತೆ ಸಿಬಿಐಗೆ ಕೂಡ ಆದೇ ಮಾನ್ಯತೆ ವಿಸ್ತರಿಸಬೇಕು. ಈ ಮೂಲಕ “ಪಂಜರದ ಗಿಳಿ’ ಎಂಬ ಕಳಂಕವನ್ನು ಕಳೆದುಕೊಳ್ಳುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡಬೇಕಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣವೊಂದರ ವಿಚಾರಣೆ ವೇಳೆ, ನ್ಯಾ| ಎನ್.ಕಿರುಬಾಕರನ್ ಮತ್ತು ನ್ಯಾ| ಬಿ.ಪುಗಳೇಂದಿ ನೇತೃತ್ವದ ನ್ಯಾಯಪೀಠ ಕೆಲವು ಸೂಕ್ಷ್ಮ, ಗಂಭೀರ ಅಪರಾಧಗಳಾದಾಗ ಸ್ಥಳೀಯ ಪೊಲೀಸರಿಂದ ಸರಿಯಾದ ತನಿಖೆಯಾಗದೆ ಗದ್ದಲ ಏರ್ಪಡುತ್ತದೆ. ಅಂಥ ಕೇಸುಗಳು ಸಿಬಿಐಗೆ ಸಿಕ್ಕರೇನೇ ನ್ಯಾಯ ಎಂದು ಜನತೆ ನಂಬುತ್ತಾರೆ. ದುರದೃಷ್ಟ, ಇಂಥ ವಿಚಾರಣ ಬೇಡಿಕೆ ಎದುರಾದಾಗಲೆಲ್ಲ ಸಿಬಿಐನ ಸಿಬಂದಿಗೆ ನಿರ್ಬಂಧಗಳು ಸವಾಲಾಗುತ್ತವೆ.
ಹೀಗಾಗಿ, ಅದಕ್ಕೆ ಯೋಗ್ಯ ರೀತಿಯಲ್ಲಿ ತನಿಖೆ ನಡೆಸುವುದೇ ಅಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದಂಥ ಸೌಲಭ್ಯಗಳ ಕೊರತೆಯನ್ನು ಸಿಬಿಐ ಎದುರಿಸುತ್ತಿದೆ. ಇದನ್ನು ನೀಗಲು ಸಿಬಿಐಗೆ ಪ್ರತ್ಯೇಕ ಬಜೆಟ್ ನೀಡಬೇಕು. ಇಂಗ್ಲೆಂಡ್‌ನ ಸ್ಕಾಟ್ಲೆಂಡ್ ಯಾರ್ಡ್, ಅಮೆರಿಕದ ಎಫ್‌ಬಿಐನಲ್ಲಿರುವಂತೆ ಪ್ರತ್ಯೇಕ ಲ್ಯಾಬ್ ಒದಗಿಸಬೇಕು. ಸ್ವತಂತ್ರ ಅಧಿಕಾರಿಗಳನ್ನು ತನಿಖಾ ದಳಕ್ಕೆ ಮೀಸಲಿಡಬೇಕು ಎಂದಿದೆ.
2013ರಲ್ಲಿ ಸುಪ್ರೀಂಕೋರ್ಟ್ “ಸಿಬಿಐ ಯಜಮಾನನ ಧ್ವನಿಯಲ್ಲಿ ಮಾತನಾಡುವ ಪಂಜರದ ಗಿಳಿ’ ಎಂದು ಸುಪ್ರೀಂಕೋರ್ಟ್ ಟೀಕಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಬಂದ ರತನ್ ಟಾಟಾ
ರಾಜೀವ್ಗಾಂಧಿ ಹಂತಕ ಪೆರಾರಿವೇಲನ್ ಬಿಡುಗಡೆ : ಕಾಂಗ್ರೆಸ್ ತೀವ್ರ ಆಕ್ಷೇಪ