
ಬಳಕೆದಾರರಿಗೆ ರಿಲೀಫ್ : ಎಲ್‌ಪಿಜಿ ಸಿಲಿಂಡರ್ 35.50 ರೂ. ಅಗ್ಗ
Team Udayavani, Apr 2, 2018, 11:43 AM IST

ಹೊಸದಿಲ್ಲಿ : ಪೆಟ್ರೋಲ್, ಡೀಸಿಲ್, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳು ದಿನೇ ದಿನೇ ಏರುತ್ತಿರುವ ಈ ಸಂದರ್ಭದಲ್ಲಿ ತೈಲ ಕಂಪೆನಿಗಳು ಸಹಾಯಧನ ರಹಿತವಾದ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 35.50 ರೂ.ಗಳಷ್ಟು ಇಳಿಸುವ ಮೂಲಕ ಬಳಕೆದಾರರಿಗೆ ಸ್ವಲ್ಪ ಮಟ್ಟಿನ ರಿಲೀಫ್ ನೀಡಿದೆ.
ಮಾರ್ಚ್ ಆದಿಯಲ್ಲಿ ಅಂತಾರಾಷ್ಟ್ರೀಯ ಎಲ್‌ಪಿಜಿ ಬೆಲೆ ಇಳಿಕೆ ಉಂಟಾಗಿದ್ದಾಗ ತೈಲ ಕಂಪೆನಿಗಳು ಅದರ ಲಾಭವನ್ನು ಸಹಾಯಧನ ವಿಲ್ಲದ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಸಿದ್ದವು. ಇದೀಗ ಅದೇ ರೀತಿಯ ಇಳಿಕೆಯನ್ನು ಒಂದೇ ತಿಂಗಳ ಒಳಗೆ ಎರಡನೆ ಬಾರಿಗೆ ಅವು ಮಾಡಿದ್ದು ಗ್ರಾಹಕರಿಗೆ ಇನ್ನಷ್ಟು ರಿಲೀಫ್ ಸಿಕ್ಕಿದಂತಾಗಿದೆ
19 ಕಿಲೋ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಈಗಿನ್ನು 54 ರೂ. ನಷ್ಟು ಅಗ್ಗವಾಗಲಿದೆಯಾದರೆ 5 ಕಿಲೋ ತೂಕದ ಸಿಲಿಂಡರ್ 15ರೂ. ನಷ್ಟು ಅಗ್ಗವಾಗಿದೆ.
14.2 ಕಿಲೋ ತೂಕದ ಸಹಾಯಧನದ ಎಲ್‌ಪಿಜಿ ಸಿಲಿಂಡರ್‌ಗಳು ದೇಶದಲ್ಲಿನ ಗ್ರಾಹಕರಿಗೆ ಪ್ರಕೃತ ವರ್ಷಕ್ಕೆ 12 ಸಿಗುತ್ತಿವೆ. ಇದಕ್ಕೆ ಮೀರಿದ ಯಾವುದೇ ಬೇಡಿಕೆಯನ್ನು ಗ್ರಾಹಕರು ಸಹಾಯಧನರಹಿತ ಸಿಲಿಂಡರ್‌ಗಳನ್ನು ಪಡೆದುಕೊಳ್ಳುವ ಮೂಲಕ ಪೂರೈಸಿಕೊಳ್ಳಬೇಕಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಕ್ರೀಡೆಗೆ 700 ಕೋಟಿ ರೂ. ಅಧಿಕ ಉತ್ತೇಜನ

ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ.: ದೇಶೀಯವಾಗಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು

‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

Union Budget 2023: 20 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ-ಕೃಷಿ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
