ಎನ್‌ಆರ್‌ಸಿ ಸಮೀಕ್ಷೆದಾರರೆಂದು ಸಂಶೋಧಕರ ಬೆದರಿಸಿದ ಗ್ರಾಮಸ್ಥರು

Team Udayavani, Jan 26, 2020, 10:08 PM IST

ದರ್ಭಾಂಗ: ಲಕ್ನೋ ಮೂಲದ ಸಂಶೋಧಕರ ತಂಡವನ್ನು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಗಾಗಿ ಮಾಹಿತಿ ಕಲೆಹಾಕುವವರು ಎಂದು ತಪ್ಪಾಗಿ ಭಾವಿಸಿದ ಬಿಹಾರದ ಗ್ರಾಮಸ್ಥರು, ಅವರನ್ನು ಒತ್ತೆಯಲ್ಲಿಟ್ಟು, ಆನಂತರ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿರುವುದಾಗಿ ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಅಮೆರಿಕ ಮೂಲದ ಪಿಎಚ್‌ಡಿ ವಿದ್ವಾಂಸರೊಬ್ಬರ ನೇತೃತ್ವದ ಲಕ್ನೋ ಮೂಲದ ಸಂಶೋಧನಾ ತಂಡದ 12 ಜನರ ಸಂಶೋಧಕರು ಪ್ರತಿ ಮನೆಗಳಿಗೆ ತೆರಳಿ ಮಾಹಿತಿ ಕಲೆಹಾಕುತ್ತಿತ್ತು. ಪೌರತ್ವ ಕಾಯ್ದೆ- ಎನ್‌ಆರ್‌ಸಿ ಬಗ್ಗೆ ಮೊದಲೇ ಆತಂಕಕ್ಕೀಡಾಗಿರುವ ಜನರು, ಇವರನ್ನು ನೋಡುತ್ತಿದ್ದಂತೆ ಎನ್‌ಆರ್‌ಸಿ ಮಾಹಿತಿ ಕಲೆಹಾಕುವವರು ಎಂದು ಭಾವಿಸಿದರು. ಈ ಮಾಹಿತಿ ಗ್ರಾಮದಲ್ಲೆಲ್ಲಾ ಹರಡಿತು. ಇದರಿಂದ ಕುಪಿತರಾದ ಗ್ರಾಮಸ್ಥರು, ಸಂಶೋಧಕರನ್ನು ಕೆಲಕಾಲ ಒತ್ತೆಯಿರಿಸಿಕೊಂಡು ಪೊಲೀಸ್‌ ಠಾಣೆಗೆ ಎಳೆದುಕೊಂಡು ಹೋಗಿದ್ದಾರೆ. ಪೊಲೀಸರು ಸಂಶೋಧಕರ ದಾಖಲೆಗಳನ್ನು ಪರಿಶೀಲಿಸಿ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ