ಪಟ್ಟು ಸಡಿಲಿಸಿದ ಪ್ರತಿಭಟನಾನಿರತ ವೈದ್ಯರು

Team Udayavani, Jun 17, 2019, 6:00 AM IST

ಕೋಲ್ಕತಾ: ಸಹೋದ್ಯೋಗಿಗಳ ಮೇಲಿನ ಹಲ್ಲೆ ಖಂಡಿಸಿ ಸತತ 6 ದಿನಗಳಿಂದ ಮುಷ್ಕರನಿರತರಾಗಿ ರುವ ಪಶ್ಚಿಮ ಬಂಗಾಳದ ವೈದ್ಯರು ರವಿವಾರ ತಮ್ಮ ನಿಲುವನ್ನು ಸ್ವಲ್ಪಮಟ್ಟಿಗೆ ಸಡಿಲಿಸಿದ್ದಾರೆ.

ವಿವಾದದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆಗೆ ನಾವು ಸಿದ್ಧ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಮಾತುಕತೆಗೂ ಮುನ್ನ ಕೆಲವು ಷರತ್ತುಗಳನ್ನೂ ಹಾಕಿದ್ದಾರೆ. ಮಾತು ಕತೆಯ ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಸಿಎಂ ಮಮತಾ ಅವರೇ ನಿರ್ಧರಿಸಲಿ. ಆದರೆ, ಮಾತುಕತೆ ಮಾತ್ರ ಮುಕ್ತವಾಗಿರ ಬೇಕು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ಬರಲು ಅವಕಾಶವಿರಬೇಕು. ಗುಪ್ತ ಮಾತುಕತೆಗೆ ನಾವು ಒಪ್ಪುವುದಿಲ್ಲ ಎಂದು ಪ್ರತಿಭಟನಾನಿರತ ವೈದ್ಯರು ಹೇಳಿದ್ದಾರೆ.

ಈ ಹಿಂದೆ, ಮಮತಾ ಅವರೇ ತಾವು ಪ್ರತಿಭಟನೆ ಕುಳಿತಿರುವ ಎನ್‌ಆರ್‌ಎಸ್‌ ಆಸ್ಪತ್ರೆಗೆ ಬರಬೇಕು ಮತ್ತು ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿ ದಿದ್ದ ವೈದ್ಯರು ರವಿವಾರ ತಮ್ಮ ನಿಲುವು ಸಡಿಲಿಸಿದ್ದು, ಸಮಸ್ಯೆ ಆದಷ್ಟು ಬೇಗ ಪರಿಹಾರ ಕಾಣಲಿ ಎಂಬುದು ನಮ್ಮ ಉದ್ದೇಶವೂ ಹೌದು ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ