ನಾಳೆಯಿಂದ ದೇಶದಲ್ಲಿ ಚಿಲ್ಲರೆ ಡಿಜಿಟಲ್ ರೂಪಾಯಿ ಚಾಲ್ತಿಗೆ ಬರಲಿದೆ: ಆರ್‌ಬಿಐ
ಬೆಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಪ್ರಾಯೋಗಿಕವಾಗಿ ಚಾಲ್ತಿಗೆ
Team Udayavani, Nov 30, 2022, 7:00 AM IST
ಮುಂಬಯಿ: ದೇಶದಲ್ಲಿ ಚಿಲ್ಲರೆ ಡಿಜಿಟಲ್ ರೂಪಾಯಿಯನ್ನು ಡಿ. 1ರಿಂದ ಪ್ರಾಯೋಗಿಕವಾಗಿ ಜಾರಿಗೊಳಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ಪ್ರಕಟಿಸಿದೆ.
ಗುರುವಾರದಿಂದ ಬೆಂಗಳೂರು, ಮುಂಬಯಿ, ಹೊಸದಿಲ್ಲಿ ಮತ್ತು ಭುವನೇಶ್ವರಗಳಲ್ಲಿ ಆರಂಭಿಕವಾಗಿ ಸೀಮಿತ ಬಳಕೆದಾರರ ಸಮೂಹದೊಳಗೆ ಡಿಜಿಟಲ್ ರೂಪಾಯಿ ಚಾಲ್ತಿಗೆ ಬರಲಿದೆ.
ಇ-ರೂಪಾಯಿಯು ಡಿಜಿಟಲ್ ಟೋಕನ್‌ನ ರೂಪದಲ್ಲಿದ್ದು, ಅದಕ್ಕೆ ಕಾನೂನು ಮಾನ್ಯತೆ ಇರುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಮುಖಬೆಲೆಯಲ್ಲೇ ಡಿಜಿಟಲ್ ರೂಪಾಯಿಯ ವಹಿವಾಟು ನಡೆಯುತ್ತದೆ. ಇವುಗಳನ್ನು ಮಧ್ಯವರ್ತಿಗಳು ಅಂದರೆ ಬ್ಯಾಂಕ್‌ಗಳ ಮೂಲಕ ವಿತರಿಸಲಾಗುತ್ತದೆ.
ಬಳಕೆ ಹೇಗೆ?
ನಿರ್ದಿಷ್ಟ ಬ್ಯಾಂಕ್‌ಗಳು ಒದಗಿಸುವಂಥ ಡಿಜಿಟಲ್ ವ್ಯಾಲೆಟ್‌ಗಳ ಮುಖಾಂತರ ನೀವು ಇ-ರೂಪಾಯಿ ವಹಿವಾಟು ನಡೆಸಬಹುದು. ಪೇಟಿಎಂ, ಗೂಗಲ್‌ಪೇ, ಫೋನ್‌ಪೇಗಳಂತೆಯೇ ಇ-ರೂಪಾಯಿಯ ಮೊತ್ತವನ್ನೂ ನೀವು ಡಿಜಿಟಲ್ ವ್ಯಾಲೆಟ್ ರೂಪದಲ್ಲಿ ಮೊಬೈಲ್ ಫೋನ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು. ಇಲ್ಲಿ ನೀವು ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ) ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ (ಪಿ2ಎಂ) ಎಂಬ ಎರಡು ವಿಧಾನಗಳಲ್ಲಿ ವಹಿವಾಟು ನಡೆಸಬಹುದು ಎಂದು ಆರ್‌ಬಿಐ ಹೇಳಿದೆ. ವ್ಯಾಪಾರಿಗಳಿಗೆ ಪಾವತಿ ಮಾಡುವಾಗ ಅವರ ಬಳಿಯಿರುವ ಕ್ಯೂಆರ್ ಕೋಡ್ ಬಳಸಿಕೊಳ್ಳಬೇಕಾಗುತ್ತದೆ.
ಯಾವೆಲ್ಲ ಬ್ಯಾಂಕ್‌ಗಳು ಭಾಗಿ?
ಹಂತ ಹಂತವಾಗಿ ಈ ಯೋಜನೆ ಜಾರಿಗೆ ಬರಲಿದ್ದು, ಮೊದಲ ಹಂತದಲ್ಲಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಐಡಿಎಫ್ಸಿ ಫಸ್ಟ್ ಬ್ಯಾಂಕ್‌ಗೆ ಅನುಮತಿ ನೀಡಲಾಗಿದೆ. ಅನಂತರದಲ್ಲಿ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ಗಳು ಕೂಡ ಈ ಯೋಜನೆ ವ್ಯಾಪ್ತಿಗೆ ಬರಲಿವೆ.
ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಪೂರ್ಣ ಪ್ರಮಾಣದಲ್ಲಿ ದೇಶಾದ್ಯಂತ ಇ-ರುಪೀ ಜಾರಿ ಮಾಡುವುದು ಆರ್‌ಬಿಐ ಉದ್ದೇಶ. ಸಗಟು ವಲಯದ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಯೋಜನೆ ನ. 1ರಿಂದ ಅನುಷ್ಠಾನಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ಮೋದಿ ಉತ್ತರಾಧಿಕಾರಿಯಾಗುತ್ತಾರಾ ಯು.ಪಿ ಸಿಎಂ?: ಯೋಗಿ ಆದಿತ್ಯನಾಥ್ ಹೇಳುವುದೇನು?
ದೇಶದ ಮೊದಲ ಪ್ರಕರಣ: ಮಗುವಿನ ನಿರೀಕ್ಷೆಯಲ್ಲಿ ತೃತೀಯ ಲಿಂಗಿ ದಂಪತಿ
ಅಫ್ರಿದಿ ಮಗಳನ್ನು ವರಿಸಿದ ಶಾಹೀನ್ ಅಫ್ರಿದಿ: ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾದ ಸಹ ಆಟಗಾರರು
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಆರ್ ಟಿಐ ಕಾರ್ಯಕರ್ತ ಸಾಯಿದತ್ತ ನಿಧನ
ಹಾಕಿ ಕೋಚ್ ಹುದ್ದೆಗೆ ವಿದೇಶಿಯರ ರೇಸ್