ಎನ್‌ಕೌಂಟರ್‌ ತನಿಖೆಗೆ ನಿವೃತ್ತ ಜಡ್ಜ್ ನೇಮಕ?

Team Udayavani, Dec 12, 2019, 12:46 AM IST

ಹೊಸದಿಲ್ಲಿ: ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಅತ್ಯಾಚಾರಿಗಳ ಎನ್‌ಕೌಂಟರ್‌ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಚಿಂತನೆ ನಡೆಸಿದೆ. ದಿಲ್ಲಿ ಮೂಲದ ನಿವೃತ್ತ ನ್ಯಾಯಮೂರ್ತಿಯಿಂದ ಈ ಕುರಿತು ತನಿಖೆ ನಡೆಸುವ ಕುರಿತು ಪರಿಶೀಲಿಸುವುದಾಗಿ ಸಿಜೆಐ ಎಸ್‌.ಎ.ಬೋಬ್ದೆ ನೇತೃತ್ವದ ಪೀಠ ಬುಧವಾರ ತಿಳಿಸಿದೆ.

ಎಫ್ಐಆರ್‌ ದಾಖಲಿಗೆ ಮನವಿ: ಈ ನಡುವೆ, ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಪವನ್‌ ಕುಮಾರ್‌ ಗುಪ್ತಾನ ತಂದೆ ಹೀರಾಲಾಲ್‌ ಗುಪ್ತಾ ದಿಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪ್ರಕರ ಣದ ಏಕೈಕ ಸಾಕ್ಷಿಯಾದ ಆಕೆಯ ಗೆಳೆಯನ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಕೋರಿದ್ದಾರೆ. ನಿರ್ಭಯಾಳ ಗೆಳೆ ಯ ಹಣ ಪಡೆದುಕೊಂಡು ಚಾನೆಲ್‌ಗ‌ಳಿಗೆ ಸಂದ ರ್ಶನ ನೀಡಿದ್ದು, ಕೇಸಿನ ಮೇಲೆ ಪ್ರಭಾವ ಬೀರಿತು ಎಂದು ಆರೋ ಪಿಸಿ ದ್ದಾರೆ. ಏತನ್ಮಧ್ಯೆ, ಕ್ಷಮಾದಾನ ಅರ್ಜಿಗಳನ್ನು ಕಾಲಮಿತಿ ಯೊಳಗೆ ಇತ್ಯರ್ಥಗೊಳಿಸಬೇಕೆಂದು ಕೇಂದ್ರಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ