Udayavni Special

ಗುಜರಾತ್‌ ರೈತರ ಮೇಲಿನ ಪ್ರಕರಣ ವಾಪಸ್‌

1 ಕೋಟಿ ಪರಿಹಾರ ಕೇಳಿದ್ದ ಸಂಸ್ಥೆ

Team Udayavani, May 14, 2019, 4:00 AM IST

28

ಸಬರ್‌ಕಾಂತಾ, ಆರವಳ್ಳಿ ಜಿಲ್ಲೆಗಳ 9 ರೈತರ ಮೇಲೆ ಪ್ರಕರಣ ದಾಖಲಿಸಿ ತಲಾ 1 ಕೋಟಿ ರೂ. ಹಾಗೂ ಜಿಲ್ಲೆಗಳ ರೈತರಿಂದ ತಲಾ 20 ಲಕ್ಷ ರೂ. ಅನ್ನು ಪರಿಹಾರ ರೂಪದಲ್ಲಿ ನೀಡುವಂತೆ ಕೋರ್ಟ್‌ ನಲ್ಲಿ ಹೇಳಿತ್ತು. ಅಹ್ಮದಾಬಾದ್‌ ಕೋರ್ಟ್‌ ಈ ತಳಿಯನ್ನು ಬೆಳೆಯದಂತೆ ತಡೆಯೂ ನೀಡಿತ್ತು.

ಬಹಿಷ್ಕಾರಕ್ಕೆ ಮಣಿದು ಕ್ರಮ ಕೈಗೊಂಡಿತೇ ಪೆಪ್ಸಿಕೊ!
ಈ ಸಂಸ್ಥೆ 30 ವರ್ಷಗಳಿಂದ ಭಾರತದಲ್ಲಿ ವ್ಯಾಪಾರ ನಡೆಸುತ್ತ್ತಾ ಬಂದಿದೆ. ಆಲೂಗಡ್ಡೆ ಬೆಳೆಯ ವಿಷಯದಲ್ಲಿ ಭಾರತದ ರೈತರನ್ನು ಎದುರು ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 9 ರೈತರ ಮೇಲೆ ತಲಾ 1 ಕೋಟಿ ರೂ.ಗಳ ಪರಿಹಾರ ಕೋರಿದ್ದ ಸಂಸ್ಥೆ ಈಗ ರೈತರ ಆಗ್ರಹಕ್ಕೆ ಮಣಿದಿದ್ದು, ಪ್ರಕರಣವನ್ನು ವಾಪಸ್‌ ಪಡೆದಿದೆ. ಮೂಲತಃ ಅಮೆರಿಕದ ಸಂಸ್ಥೆಯಾಗಿದ್ದರೂ ‘ಪೆಪ್ಸಿಕೊ ಇಂಡಿಯಾ’ವನ್ನು ದೇಶದಲ್ಲಿ ಸ್ಥಾಪಿಸಿತ್ತು.

ಮಣಿಪಾಲ: ಗುಜರಾತ್‌ನಲ್ಲಿ ಆಲೂಗಡ್ಡೆ ತಳಿಯೊಂದನ್ನು ಬೆಳೆಯುತ್ತಿದ್ದ ರೈತರ ಮೇಲೆ ಪ್ರಕರಣ ದಾಖಲಿಸಿದ್ದ ಪೆಪ್ಸಿಕೊ ಈಗ ಅದನ್ನು ವಾಪಸ್‌ ಪಡೆದಿದೆ. ಸಂಸ್ಥೆ ಎಫ್ಸಿ 5 ಜಾತಿಯ ಆಲೂಗಡ್ಡೆಯ ಮೇಲೆ ವಿಶೇಷ ಹಕ್ಕು ಹೊಂದಿದೆ ಎಂದು ಹೇಳಿ ಅದು ಕೋರ್ಟ್‌ ಮೆಟ್ಟಿಲೇರಿತ್ತು. ಈಗ ನಿಶ್ಶರ್ತವಾಗಿ ಪ್ರಕರಣವನ್ನು ಹಿಂತೆಗೆದುಕೊಂಡಿದೆ. ಈ ಮೂಲಕ ಅಮೆರಿಕ ಮೂಲದ ಎಂಎನ್‌ಸಿ ಕಂಪೆನಿಯ ವಿರುದ್ಧ ರೈತರಿಗೆ ಜಯವಾಗಿದೆ.

ಷರತ್ತು ಇಲ್ಲದೆ ಪ್ರಕರಣ ಅಂತ್ಯ
ಪೆಪ್ಸಿಕೊ ಇಲ್ಲಿನ ರೈತರ ಮೇಲೆ ಪ್ರಕರಣ ದಾಖಲಿಸಿದ್ದಕ್ಕಾಗಿ ಸಂಸ್ಥೆಯ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಣಯವಾಗಿತ್ತು. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೆಪ್ಸಿಕೊ ಉತ್ಪನ್ನವನ್ನು ಯಾರೂ ಖರೀದಿಸದಂತೆ ಪ್ರಚಾರಗಳು ಏರ್ಪಟ್ಟವು. ಟ್ವಿಟರ್‌ನಲ್ಲಿ #boycottPepsi ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಭಾರೀ ಆಕ್ರೋಶ ಮೂಡಿಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಸ್ಥೆ ಪ್ರಕರಣವನ್ನು ಕೊನೆಗಾಣಿಸಲು ಯತ್ನಿಸಿತು.

ಗುಜರಾತ್‌ನ ಸಬರ್‌ಕಾಂತಾ ಮತ್ತು ಅರವಳ್ಳಿ ಜಿಲ್ಲೆಗಳ ರೈತರು ಎಫ್ಸಿ 5 ಜಾತಿಯ ಆಲೂಗಡ್ಡೆ ಯನ್ನು ಬೆಳೆಯುತ್ತಿದ್ದರು. ರೈತರ ಹೇಳಿಕೆಯಂತೆ ಅದು ಅವರೇ ಆವಿಷ್ಕರಿಸಿದ ತಳಿ. ಆದರೆ ಪೆಪ್ಸಿಕೊ ಹೇಳುವಂತೆ ಈ ನಿರ್ಧಿಷ್ಟ ತಳಿಯ ಮೇಲೆ ಅದು ವಿಶೇಷ ಹಕ್ಕುಸ್ವಾಮ್ಯ ಹೊಂದಿದೆ. ಅನು ಮತಿ ಇಲ್ಲದೆ ಅಕ್ರಮವಾಗಿ ಇದನ್ನು ಬೆಳೆಯಲಾಗು ತ್ತಿದ್ದು ಹಕ್ಕು ಸ್ವಾಮ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.

ಪೆಪ್ಸಿಕೊ ತನ್ನ ‘ಲೇಸ್‌’ ಬ್ರ್ಯಾಂಡ್‌ನ‌ ಚಿಪ್ಸ್‌ಗೆ ಎಫ್ಎಲ್ 2027 ಎಂಬ ವಿಶೇಷ ತಳಿಯ ಆಲೂಗಡ್ಡೆಯನ್ನು ಬಳಸುತ್ತಿದೆ. ಇದು ಎಫ್ಎಲ್ 1867 ಮತ್ತು ವಿಸ್‌ಚಿಪ್‌ (Wischip) ತಳಿಗಳ ಹೈಬ್ರಿಡ್‌ ತಳಿ. ಈ ವಿಶೇಷ ಆಲೂ ತಳಿಯನ್ನು ಸಸ್ಯ ಮಾದರಿ ಮತ್ತು ರೈತರ ಹಕ್ಕು ರಕ್ಷಣೆ ಕಾಯ್ದೆ (PPV FR Act) ಅಡಿ 2001ರಲ್ಲಿ ನೋಂದಾಯಿಸಿದೆ. 2009ರ ಬಳಿಕ ಎಫ್ಸಿ 5 ಆಲೂಗಡ್ಡೆಯ ಹಕ್ಕು ಪಡೆದಿದ್ದೇನೆ ಎಂಬುದು ಸಂಸ್ಥೆಯ ವಾದವಾಗಿತ್ತು. ಭಾರತದ ಶೇ. 50ರಷ್ಟು ಆಲೂಗಡ್ಡೆಯನ್ನು ಪೆಪ್ಸಿಕೊ ಪಡೆಯುತ್ತಿದೆ.

•••ಉದಯವಾಣಿ ಸ್ಪೆಷಲ್ ಡೆಸ್ಕ್

ಇಂಟರ್ನೆಟ್ ಚಿತ್ರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಇದೀಗ ಸಣ್ಣ ಜ್ವರವಿದ್ರೂ ಕ್ವಾರಂಟೈನ್‌

ಇದೀಗ ಸಣ್ಣ ಜ್ವರವಿದ್ರೂ ಕ್ವಾರಂಟೈನ್‌

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ