ಚೀನದಿಂದ ಸೈಬರ್‌ ಯುದ್ಧ; ಮುಖಭಂಗದ ಬೆನ್ನಲ್ಲೇ ಇನ್ನೊಂದು ಕುತಂತ್ರ ; ಪ್ರಮುಖ ಇಲಾಖೆಗಳೇ ಗುರಿ

Team Udayavani, Jun 24, 2020, 7:07 AM IST

ಚೀನದಿಂದ ಸೈಬರ್‌ ಯುದ್ಧ; ಮುಖಭಂಗದ ಬೆನ್ನಲ್ಲೇ ಇನ್ನೊಂದು ಕುತಂತ್ರ ; ಪ್ರಮುಖ ಇಲಾಖೆಗಳೇ ಗುರಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಗಡಿಯಲ್ಲಿ ತನ್ನ ಸೈನಿಕರನ್ನು ಛೂಬಿಟ್ಟು ಉಪಟಳ ನೀಡಿ ಮುಖಭಂಗ ಅನುಭವಿಸಿರುವ ಚೀನವು ಈಗ ತೆರೆಮರೆಯಲ್ಲಿ ಭಾರತದ ವಿರುದ್ಧ ಸೈಬರ್‌ ಯುದ್ಧ ಆರಂಭಿಸಿದೆ.

ಕೇಂದ್ರ ಮತ್ತು ವಿವಿಧ ರಾಜ್ಯಗಳ ಸಚಿವಾಲಯಗಳು, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು, ಕಾರ್ಪೊರೆಟ್‌ ಸಂಸ್ಥೆಗಳ ಮಾಹಿತಿ ಕದಿಯಲು ಅದು ಮುಂದಾಗಿದೆ ಎಂದು ಸಿಂಗಾಪುರ ಮೂಲದ ಸೈಫ‌ರ್ಮಾ ರಿಸರ್ಚ್‌ ಸಂಸ್ಥೆ ತಿಳಿಸಿದೆ.

ರಕ್ಷಣಾ ಕ್ಷೇತ್ರ, ಟೆಲಿಕಾಂ, ಫಾರ್ಮಸಿ, ಮಾಧ್ಯಮಗಳು, ಸ್ಮಾರ್ಟ್‌ ಫೋನ್‌ ತಯಾರಕರು, ಕಟ್ಟಡ ನಿರ್ಮಾಣ ಮತ್ತು ಟೈರ್‌ ತಯಾರಿಕೆ ಕ್ಷೇತ್ರಗಳನ್ನು ಹ್ಯಾಕರ್‌ಗಳು ಟಾರ್ಗೆಟ್‌ ಮಾಡಿಕೊಂಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಕೇಂದ್ರ ರಕ್ಷಣೆ, ವಿದೇಶಾಂಗ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆಗಳ ಮೇಲೆ ಹ್ಯಾಕರ್‌ಗಳು ನಿಗಾ ಇರಿಸಿದ್ದಾರೆ. ಕಾರ್ಪೊರೆಟ್‌ ಮತ್ತು ಸರಕಾರಿ ಕಂಪೆನಿಗಳ ಪಟ್ಟಿಯಲ್ಲಿ ರಿಲಯನ್ಸ್‌ ಜಿಯೋ, ಏರ್‌ಟೆಲ್‌, ಬಿಎಸ್ಸೆನ್ನೆಲ್‌, ಮೈಕ್ರೋಮ್ಯಾಕ್ಸ್‌, ಸಿಪ್ಲಾ, ಸನ್‌ ಫಾರ್ಮಾ, ಎಂಆರ್‌ಎಫ್ ಮತ್ತು ಎಲ್‌ ಆ್ಯಂಡ್‌ ಟಿ ಸಂಸ್ಥೆ ಸೇರಿವೆ. ಇವುಗಳ ಇ-ದಾಖಲೆ ಕದ್ದು ಮಸಿ ಬಳಿಯುವ ಉದ್ದೇಶವನ್ನು ಅವರು ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಧ್ಯಪ್ರವೇಶಿಸುವುದಿಲ್ಲ: ರಷ್ಯಾ
ಭಾರತ, ಚೀನ ತಮ್ಮ ನಡುವಣ ಸಮಸ್ಯೆಗಳನ್ನು ಸ್ವತಃ ಇತ್ಯರ್ಥ ಮಾಡಿಕೊಳ್ಳಬಲ್ಲವು. ಹಾಗಾಗಿ ಈಗಿನ ಉದ್ವಿಗ್ನ ಸ್ಥಿತಿಯ ನಿವಾರಣೆಗಾಗಿ ರಷ್ಯಾ ಮಧ್ಯಸ್ಥಿಕೆ ವಹಿಸುತ್ತಿಲ್ಲ ಎಂದು ರಷ್ಯಾ ವಿದೇಶಾಂಗ ಸಚಿವ ಸರ್ಗೆಯಿ ಲಾವ್ರೊವ್‌ ತಿಳಿಸಿದ್ದಾರೆ.

ಹಲ್ಲೆಗೆ ಸ್ವತಃ ಆದೇಶಿಸಿತ್ತು ಚೀನ
ಭಾರತೀಯ ಯೋಧರೇ ನಮ್ಮ ಸೈನಿಕರ ಮೇಲೆ ಮೊದಲು ಹಲ್ಲೆ ನಡೆಸಿದ್ದು ಎನ್ನುತ್ತಿದ್ದ ಚೀನದ ನಿಜ ಬಣ್ಣ ಬಯಲಾಗಿದೆ. ಗಾಲ್ವಾನ್‌ನಲ್ಲಿ ಜೂ. 15ರ ರಾತ್ರಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಲು ಲಡಾಖ್‌ ಭಾಗದಲ್ಲಿ ಚೀನದ ಪಡೆಯ ನೇತೃತ್ವ ವಹಿಸಿರುವ ಜ| ಝಾವೊ ಝೊಂಗ್‌ಕಿ ಅನುಮತಿ ನೀಡಿದ್ದರು ಚೀನ ಸೈನಿಕರಿಗೆ ಸರಕಾರವೇ ಆದೇಶ ನೀಡಿತ್ತು ಎಂದು ಅಮೆರಿಕದ ಗುಪ್ತಚರ ಇಲಾಖೆ ತಿಳಿಸಿದೆ. ಈ ಹಿಂದೆಯೂ ಭಾರತೀಯ ಯೋಧರ ಜತೆಗೆ ಚೀನದ ಸೈನಿಕರ ಘರ್ಷಣೆಯ ನೇತೃತ್ವ ವಹಿಸಿದ್ದ ಝೊಂಗ್‌ಕಿ, ಗಾಲ್ವಾನ್‌ ಘರ್ಷಣೆಯನ್ನು ಭಾರತಕ್ಕೆ ಪಾಠ ಕಲಿಸುವ ಅವಕಾಶ ಎಂದು ಭಾವಿಸಿದ್ದರು ಎಂದು ಗುಪ್ತಚರ ಮೂಲಗಳು ಹೇಳಿವೆ.

ಜ| ನರವಾಣೆ ಭೇಟಿ
ಎಲ್‌ಎಸಿಯಲ್ಲಿ ಪರಿಸ್ಥಿತಿಯ ತಳಮಟ್ಟದ ಪರಿಶೀಲನೆಗಾಗಿ ಲಡಾಕ್‌ಗೆ 2 ದಿನಗಳ ಭೇಟಿ ನೀಡಿರುವ ಭೂ ಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಗಾಲ್ವಾನ್‌ನಲ್ಲಿ ಗಾಯಗೊಂಡು, ಲೇಹ್‌ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಯೋಧರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಅವರ ಜತೆಗೆ ನಾರ್ದರ್ನ್ ಆರ್ಮಿ ಕಮಾಂಡರ್‌ ಲೆ|ಜ| ವೈ.ಕೆ. ಜೋಶಿ ಇದ್ದರು.

ಮಾತುಕತೆ ಫ‌ಲಪ್ರದ
ಭಾರತ – ಚೀನ ಗಡಿ ರೇಖೆಯ ಮಾಲ್ಡೋದಲ್ಲಿ 2 ದಿನಗಳಿಂದ ನಡೆಯು ತ್ತಿದ್ದ ಉಭಯ ದೇಶಗಳ ಕಮಾಂಡರ್‌ ಮಟ್ಟದ ಮಾತುಕತೆ ಯಶಸ್ವಿಯಾಗಿದೆ. ವಿವಾದಿತ ಸ್ಥಳಗಳಲ್ಲಿ ಎರಡೂ ಕಡೆಯವರು ಹೂಡಿರುವ ವಾಸ್ತವ್ಯಗಳನ್ನು ತೆರವುಗೊಳಿಸಲು ಸೇನಾಧಿಕಾರಿಗಳು ಒಪ್ಪಿದ್ದಾರೆ. ಸತತ 11 ತಾಸುಗಳ ಕಾಲ ನಡೆದ ಮಾತುಕತೆಯಲ್ಲಿ ಈ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಎರಡೂ ಕಡೆಗಳ ಅಧಿಕಾರಿಗಳು ಹೃತ್ಪೂರ್ವಕ, ಸದಾಶಯದಿಂದ ಸ್ಪಂದಿಸಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟಿಸಿದೆ.

ಬಾಂಧವ್ಯ ಕಾಪಾಡಿಕೊಳ್ಳುವುದೇ ಸವಾಲು: ಜೈಶಂಕರ್‌
ಈ ಕಾಲಘಟ್ಟದಲ್ಲಿ ಯಾವುದೇ ರಾಷ್ಟ್ರ ತನ್ನ ಮತ್ತು ಇತರ ದೇಶಗಳ ಜತೆಗಿನ ಬಾಂಧವ್ಯವನ್ನು ಕಾಪಾಡಿಕೊಳ್ಳುವುದಷ್ಟೇ ಮುಖ್ಯವಾಗಿ ಉಳಿದಿಲ್ಲ. ತಲೆ ತಲಾಂತರಗಳಿಂದ ಇರುವ ಬಾಂಧವ್ಯವನ್ನು ಹಿಡಿದಿಟ್ಟುಕೊಳ್ಳುವುದರ ಜತೆಗೆ, ನಮ್ಮ ನಡೆ- ನುಡಿಯಿಂದ ನೆರೆಯ ರಾಷ್ಟ್ರಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದೂ ಮುಖ್ಯ. ಅದೇ ಈಗ ನಮ್ಮ ಮುಂದಿರುವ ಅತೀ ದೊಡ್ಡ ಸವಾಲು ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್‌, ಚೀನದ ವಿದೇಶ ಸಚಿವ ವಾಂಗ್‌ ಯಿ ಅವರಿಗೆ ಪರೋಕ್ಷವಾಗಿ ತಿಳಿ ಹೇಳಿದ್ದಾರೆ.

ರಷ್ಯಾ ಆಯೋಜಿಸಿರುವ ಭಾರತ – ಚೀನ – ರಷ್ಯಾ ವಿದೇಶಾಂಗ ಸಚಿವರ ತ್ರಿಪಕ್ಷೀಯ ವರ್ಚುವಲ್‌ ಸಭೆಯಲ್ಲಿ ಪಾಲ್ಗೊಂಡ ಅವರು, ಅಂತಾರಾಷ್ಟ್ರೀಯ ಕಾನೂನನ್ನು ಬೆಂಬಲಿಸುವುದು, ನೆರೆ ದೇಶಗಳ ಹಿತಾಸಕ್ತಿ ಕಾಪಾಡುವುದು, ವೈವಿಧ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಸಮುದಾಯದ ಒಳಿತಿಗಾಗಿ ಸಹಕರಿಸುವುದನ್ನು ಎಲ್ಲ ದೇಶಗಳೂ ಪಾಲಿಸಬೇಕಿದೆ ಎಂದಿದ್ದಾರೆ.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.