ಮಂಜು ಕವಿದ ದಿಲ್ಲಿ: ರಸ್ತೆ ಕಾಣದೆ ಕಣಿವೆಗೆ ಬಿದ್ದ ಕಾರು; ಆರು ಜನರ ದುರ್ಮರಣ
Team Udayavani, Dec 30, 2019, 8:53 AM IST
ಹೊಸದಿಲ್ಲಿ: ತೀವ್ರ ಚಳಿಯಿಂದ ನಡುಗುತ್ತಿರುವ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮಂಜು ಆವರಿಸಿದೆ. ದಟ್ಟ ಮಂಜು ಕವಿದ ಕಾರಣ ರಸ್ತೆ ಕಾಣದೆ ಕಾರೊಂದು ಕಣಿವೆಗೆ ಉರುಳಿ ಆರು ಜನರು ಸಾವನ್ನಪ್ಪಿದ್ದಾರೆ.
ದೆಹಲಿ ಹೊರವಲಯದ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ರವಿವಾರ ತಡರಾತ್ರಿ 11.30ಕ್ಕೆ ಈ ದುರ್ಘಟನೆ ನಡೆದಿದೆ.
ಕಾರಿನಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹೇಶ್ ( 35), ಕಿಶನ್ ಲಾಲ್ (50), ನೀರೆಶ್ (17), ರಾಮ್ ಖಿಲಾಡಿ (75), ಮಲ್ಲು (12) ಮತ್ತು ನೇತ್ರಪಾಲ್ (40) ಮೃತ ದುರ್ದೈವಿಗಳು.
ಪೊಲೀಸರು ಸ್ಥಳಕ್ಕಾಮಿಸಿದ್ದು, ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತೈಲ ಬೆಲೆ 110 ಡಾಲರ್ ನಲ್ಲಿದ್ದರೆ ಹಣದುಬ್ಬರಕ್ಕಿಂತಲೂ ಹೆಚ್ಚು ಸಮಸ್ಯೆಯಾಗಲಿದೆ: ಸಚಿವ ಪುರಿ
ರೇವ್ ಪಾರ್ಟಿಗೆ ಪೊಲೀಸರ ದಾಳಿ; ಡ್ರಗ್ಸ್ ನಶೆ ಹೆಚ್ಚಾಗಿ ಕುಸಿದು ಬಿದ್ದ ಯುವಕ ಸಾವು
ನನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು : ಅಜಂ ಖಾನ್
ದೆಹಲಿಯಲ್ಲಿ ಭಾರೀ ಗಾಳಿ, ಮಳೆ; ರಸ್ತೆಗೆ ಉರುಳಿ ಬಿದ್ದ ಮರಗಳು- ಜನಜೀವನ ಅಸ್ತವ್ಯಸ್ತ
ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು