ರಾಕೆಟ್‌ ತಯಾರಿಕೆೆ ಖಾಸಗಿ ಹೆಗಲಿಗೆ

50 ವರ್ಷಗಳ ಇತಿಹಾಸದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವದ ಹೆಜ್ಜೆ

Team Udayavani, Aug 18, 2019, 5:27 AM IST

isro

ಹೊಸದಿಲ್ಲಿ: ಸ್ವದೇಶಿ ತಂತ್ರಜ್ಞಾನದ “ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌’ (ಪಿಎಸ್‌ಎಲ್‌ವಿ) ಮಾದರಿಯ ಐದು ರಾಕೆಟ್‌ಗಳನ್ನು ತಯಾರಿಸಿಕೊಡಲು ಆಸಕ್ತಿಯುಳ್ಳ (ಎಕ್ಸ್‌ಪ್ರೆಶನ್‌ ಆಫ್ ಇಂಟರೆಸ್ಟ್‌ – ಇಒಐ) ಕಂಪೆನಿಗಳಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅರ್ಜಿಗಳನ್ನು ಆಹ್ವಾನಿಸಿದೆ. ಸೆ.6ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ತನ್ನ 50 ವರ್ಷಗಳ ಇತಿಹಾಸದಲ್ಲಿ ಖಾಸಗಿ ಕಂಪೆನಿಯವರಿಗೆ ಇಸ್ರೋ ವತಿಯಿಂದ ಈ ರೀತಿಯ ಆಹ್ವಾನ ನೀಡಲಾಗುತ್ತಿರುವುದು ಇದೇ ಮೊದಲ ಬಾರಿ.

ಒಟ್ಟು 150 ದೇಶೀಯ ಕಂಪೆನಿಗಳ ತಂಡದ ನೆರವಿನಿಂದ ಈ ರಾಕೆಟ್‌ಗಳನ್ನು ಪಡೆಯಲು ನಿರ್ಧರಿಸಲಾಗಿದ್ದು, ಈ ಹಿಂದೆ ಪಿಎಸ್‌ಎಲ್‌ವಿ ಹಾಗೂ ಜಿಎಸ್‌ಎಲ್‌ವಿ ರಾಕೆಟ್‌ಗಳು ಮತ್ತು “ಸಿಇ-20 ಕ್ರಯೋಜನಿಕ್‌’ ಇಂಜಿನ್‌ಗಳ ತಯಾರಿಕೆಯಲ್ಲಿ ಇಸ್ರೋ ಜತೆಗೆ ಸಹಭಾಗಿತ್ವ ಹೊಂದಿರುವ ಎಚ್‌ಎಎಲ್‌ ಹಾಗೂ “ಎಲ್‌ ಆ್ಯಂಡ್‌ ಟಿ’ ಸಂಸ್ಥೆಗಳು, ಹೊಸದಾಗಿ ಪಿಎಸ್‌ಎಲ್‌ವಿ ತಯಾರಿಸಲು ಮುಂದೆ ಬರಲಿರುವ ಖಾಸಗಿ ಸಂಸ್ಥೆಗಳ ಮುಂದಾಳತ್ವ ವಹಿಸಲಿವೆ ಎಂದು ನಿರೀಕ್ಷಿಸಲಾಗಿದೆ.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಹೆಚ್ಚಿನ ವಿವರ ತಿಳಿಸಿದ ಇಸ್ರೋ ಅಧ್ಯಕ್ಷ ಕೆ. ಶಿವನ್‌, ಈ ಆಹ್ವಾನ ವಿದೇಶಿ ಕಂಪೆನಿಗಳಿಗಿಲ್ಲ ಎಂದು ಸ್ಪಷ್ಟಪಡಿಸಿದರು. “”ಇಒಐ ಮಾದರಿಯ ಅರ್ಜಿಗಾಗಿ ಆಹ್ವಾನಿಸಲಾಗಿದೆ. ಬಹು ದಿನಗಳಿಂದಲೂ ಇಂಥದ್ದೊಂದು ಪ್ರಸ್ತಾವನೆ ಇಸ್ರೋ ಮುಂದಿತ್ತು. ಈಗ ಈ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದೇವೆ. ನಮ್ಮ ಈ ನಿರ್ಧಾರ “ಮೇಕ್‌ – ಇನ್‌- ಇಂಡಿಯಾ’ಕ್ಕೆ ಹೆಚ್ಚಿನ ಶಕ್ತಿ ತುಂಬಲಿದೆ” ಎಂದಿದ್ದಾರೆ. ವಿಕ್ರಮ್‌ ಸಾರಾ ಭಾಯಿ ಬಾಹ್ಯಾಕಾಶ ಕೇಂದ್ರದ (ವಿಎಸ್‌ಎಸ್‌ಸಿ) ಪ್ರಕಾರ, ಒಂದು ಪಿಎಸ್‌ಎಲ್‌ವಿ ರಾಕೆಟ್‌ ತಯಾರಿಕೆಗೆ 200 ಕೋಟಿ ರೂ. ವ್ಯಯವಾಗುತ್ತದೆ. ಹಾಗಾಗಿ, ಐದು ರಾಕೆಟ್‌ಗಳಿಗೆ 1,000 ಕೋಟಿ ರೂ. ಖರ್ಚಾಗಲಿದೆ. ಆದರೆ, ಶಿವನ್‌ ಅವರು, ಸುದ್ದಿಗೋಷ್ಠಿಯಲ್ಲಿ ಈ ಖರ್ಚಿನ ಬಗ್ಗೆ ಪ್ರತಿಕ್ರಿಯಿಸಲು ಇಷ್ಟ ಪಡಲಿಲ್ಲ. ಖರ್ಚು ವೆಚ್ಚಗಳ ಬಗ್ಗೆ ಇಸ್ರೋದ ವ್ಯಾವಹಾರಿಕ ಶಾಖೆಯಾದ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಎಲ್‌ಐ) ಸಂಸ್ಥೆಯೇ ನೋಡಿ ಕೊಳ್ಳಲಿದೆ ಎಂದಷ್ಟೇ ಹೇಳಿದರು.
ಈಗಾಗಲೇ ಪಿಎಸ್‌ಎಲ್‌ವಿ ತಯಾರಿಕೆಗೆ ಗೋದ್ರೆಜ್‌ ಮತ್ತಿತರ ಕಂಪೆನಿಗಳು ಆಸಕ್ತಿ ತೋರಿವೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಮನೆಯಲ್ಲೇ ನಿಗಾ;  ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

ಮನೆಯಲ್ಲೇ ನಿಗಾ; ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

ಜಗತ್ತಿನ ಹೊಸ ರಾಷ್ಟ್ರದ ಉದಯ

ಜಗತ್ತಿನ ಹೊಸ ರಾಷ್ಟ್ರದ ಉದಯ

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಕ್ರಿಪ್ಟೋ ವಿಧೇಯಕ ಪರಿಷ್ಕರಿಸಿ ಮಂಡನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಕ್ರಿಪ್ಟೋ ವಿಧೇಯಕ ಪರಿಷ್ಕರಿಸಿ ಮಂಡನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಒಮಿಕ್ರಾನ್‌ ಪ್ರಭಾವ: ಲಸಿಕೆ ಬೇಡಿಕೆ ಶೇ. 94.41ಕ್ಕೆ

ಒಮಿಕ್ರಾನ್‌ ಪ್ರಭಾವ: ಲಸಿಕೆ ಬೇಡಿಕೆ ಶೇ. 94.41ಕ್ಕೆ

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಮನೆಯಲ್ಲೇ ನಿಗಾ;  ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

ಮನೆಯಲ್ಲೇ ನಿಗಾ; ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.