Rohtak Horror: ಮಹಿಳೆಯ ಗ್ಯಾಂಗ್‌ ರೇಪ್‌, ಹತ್ಯೆ, ಗುಪ್ತಾಂಗ ಛಿದ್ರ


Team Udayavani, May 13, 2017, 3:31 PM IST

Gang Rape-700.jpg

ರೋಹಟಕ್‌: ಅತ್ಯಂತ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೋರ್ವರನ್ನು ಅಪಹರಿಸಿದ ಏಳು ಮಂದಿ ಕಾಮುಕರು ಆಕೆಯನ್ನು ಅತ್ಯಮಾನುಷವಾಗಿ ಅತ್ಯಾಚಾರಗೈದು ಬಳಿಕ ಹತ್ಯೆಗೈದ ಘಟನೆ ಹರಿಯಾಣದ ರೋಹಟಕ್‌ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆಯು ಕಳೆದ ಮೇ 9ರಂದು ನಡೆದಿದ್ದು, ಅಂದು ಮಹಿಳೆಯು ಎಂದಿನಂತೆ ತನ್ನ ಕೆಲಸಕ್ಕೆ ಹೋಗುವ ಮಾರ್ಗದಲ್ಲಿದ್ದಳು. ರೋಹಟಕ್‌ ನಗರದ ಐಎಂಟಿ ಪ್ರದೇಶದಲ್ಲಿನ ಖಾಲಿ ನಿವೇಶನವೊಂದರಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾದಾಗಲೇ ಆಕೆಯ ಮೇಲೆ ನಡೆದಿದ್ದ ಬರ್ಬರ ಕೃತ್ಯ ಬೆಳಕಿಗೆ ಬಂತು.

ಮರಣೋತ್ತರ ವರದಿಯ ಪ್ರಕಾರ ಮಹಿಳೆಯನ್ನು ಮೊದಲು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಯಿತು. ಬಳಿಕ ಅತ್ಯಂತ ಹರಿತವಾದ ಆಯುಧದಿಂದ ಆಕೆಯ ಗುಪ್ತಾಂಗಗನ್ನು ಛಿದ್ರ ಛಿದ್ರ ಗೊಳಿಸಲಾಯಿತು. ಆಕೆಯ ಗುರುತು ಹತ್ತದಂತೆ ಮಾಡಲು ಆಕೆಯ ಮುಖವನ್ನೇ ವಿರೂಪಗೊಳಿಸುವ ಯತ್ನವನ್ನು ಕೂಡ ಕಾಮುಕ ಹಂತಕರು ಮಾಡಿದರು.

ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಫೊರೆನ್ಸಿಕ್‌ ತಂಡ ಹೀಗೆ ಹೇಳಿದೆ : ಮಹಿಳೆಗೆ ದೈಹಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಗ್ಯಾಂಗ್‌ ರೇಪ್‌ ಬಳಿಕ ಆಕೆಯ ಗುಪ್ತಾಂಗಗಳನ್ನು ಛಿದ್ರ ಛಿದ್ರ ಮಾಡಲಾಗಿದೆ. ಆಕೆಯ ತಲೆಬರುಡೆಯನ್ನು ಒಡೆದು ಹಾಕಲಾಗಿದೆ. ಆಕೆಯ ಮುಖದ ಗುರುತು ಪತ್ತೆಯಾಗದಂತೆ ಮಾಡಲು ಆಕೆಯ ತಲೆ – ಮುಖದ ಭಾಗವನ್ನು ಜಜ್ಜಿ ಹಾಕಲಾಗಿದೆ.

ಇನ್ನೊಂದು ಮಾಧ್ಯಮ ವರದಿ ಪ್ರಕಾರ ಮಹಿಳೆಯ ಅಂಗಾಂಶಗಳಲ್ಲಿ ಉದ್ದೀಪನ ದ್ರವ್ಯದ ಅಂಶಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿವೆ. 

ಪೊಲೀಸರು ಈ ಪ್ರಕರಣದ ಬಗ್ಗೆ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಈ ಕೆಳಗಿನ ಅಂಶಗಳು ಬಹಿರಂಗವಾಗಿವೆ : ಸಂತ್ರಸ್ತ ಮಹಿಳೆಗೆ ಒಂದು ಮದುವೆ ಪ್ರಸ್ತಾವ ಬಂದಿತ್ತು. ಅದನ್ನಾಕೆ ತಿರಸ್ಕರಿಸಿದ್ದಳು.

ಅದಾಗಿ ಒಂದು ವಾರದ ಬಳಿಕ  ಆರೋಪಿಯು ತನ್ನ ಸ್ನೇಹಿತರೊಂದಿಗೆ ಮಹಿಳೆಯ ಮನೆಗೆ ಹೋಗಿದ್ದ. ಅಲ್ಲಿ ಮಹಿಳೆ ಮತ್ತು ಆರೋಪಿಯ ನಡುವೆ ಭಾರೀ ಮಾತಿನ ಚಕಮಕಿ ನಡೆದಿತ್ತು. ಇದರ ಪರಾಕಾಷ್ಠೆಯಲ್ಲಿ ಮಹಿಳೆಯು ಆರೋಪಿಗೆ ಕಪಾಳಮೋಕ್ಷ ಮಾಡಿದ್ದಳು.

ತನಗಾದ ಈ ಅವಮಾನಕ್ಕೆ ಪ್ರತೀಕಾರವಾಗಿ ಆರೋಪಿಯು ತನ್ನ ಸ್ನೇಹಿತರೊಡಗೂಡಿ ಮಹಿಳೆಯನ್ನು ಅಪಹರಿಸಿ, ಆಕೆಯ ಮೇಲೆ ಗ್ಯಾಂಗ್‌ ರೇಪ್‌ ಎಸಗಿ, ಆಕೆಯ ಗುಪ್ತಾಂಗಗಳನ್ನು ಛಿದ್ರಗೊಳಿಸಿ, ತಲೆಬರುಡೆ ಒಡೆದು ಹಾಕಿ ಆಕೆಯನ್ನು ಅಮಾನುಷವಾಗಿ ಹತ್ಯೆಗೈದಿದ್ದ. 

ಮೃತ ಮಹಿಳೆಯ ತಾಯಿಯ ಹೇಳಿಕೆಯ ಪ್ರಕಾರ ಆರೋಪಿಯು ಕಳೆದ ಒಂದು ವರ್ಷದಿಂದ ತನ್ನ ಮಗಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ.”ಆ ನೀಚರು ನನ್ನ ಮಗಳ ಮೇಲೆ ಎಸಗಿರುವ ಬರ್ಬರ ಕೃತ್ಯಗಳನ್ನು ನನ್ನಿಂದ ಊಹಿಸಲೂ ಸಾಧ್ಯವಿಲ್ಲ. ಎಲ್ಲ ಆರೋಪಿಗಳಿಗೆ ಮರಣ ದಂಡನೆಯ ಶಿಕ್ಷೆ ಆಗಬೇಕೆಂದೇ ನಾನು ಬಯಸುತ್ತೇನೆ’. 

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.