ಬಂದಿದೆ ರಾಯಲ್ ಎನ್ಫೀಲ್ಡ್ ಕಡಿಮೆ ದರದ ಬೈಕ್
350 ಎಕ್ಸ್, ಇಎಸ್ 350 ಎಕ್ಸ್ ಮಾರುಕಟ್ಟೆಗೆ; 1.12 ಲಕ್ಷ ರೂ.ಗಳಿಂದ ಆರಂಭ
Team Udayavani, Aug 9, 2019, 8:35 PM IST
ಚೆನ್ನೈ: ಎಲ್ಲರ ಕನಸಿನ ಬೈಕ್ ರಾಯಲ್ ಎನ್ಫೀಲ್ಡ್ ಈಗ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಲು ಹೊಸ ಅಸ್ತ್ರವನ್ನು ಝಳಪಿಸಿದ್ದು, ಕಡಿಮೆ ದರದ ಬೈಕ್ ಗಳನ್ನು ಬಿಡುಗಡೆ ಮಾಡಿದೆ.
ಬುಲೆಟ್ 350 ಎಕ್ಸ್ ಮತ್ತು ಇಎಸ್ 350 ಎಕ್ಸ್ ಹೆಸರಿನ ಎರಡು ಮಾದರಿಗಳನ್ನು ಅದು ಮಾರುಕಟ್ಟೆಗೆ ಬಿಟ್ಟಿದೆ. ಸದ್ಯ ರಾಯಲ್ ಎನ್ಫೀಲ್ಡ್ ಬೈಕುಗಳ ಮಾರಾಟ ಕುಸಿಯುತ್ತಿದ್ದು, (ಈ ಆರ್ಥಿಕ ವರ್ಷದಲ್ಲಿ ಶೇ.19ರಷ್ಟು ಮಾರಾಟ ಕುಸಿತ) ಇದನ್ನು ತಪ್ಪಿಸಲು ಅದು ಹೊಸ ಬೈಕ್ಗಳನ್ನು ಬಿಡುಗಡೆ ಮಾಡಿದೆ.
ಸಾಮಾನ್ಯ ಎನ್ಫೀಲ್ಡ್ ಬೈಕ್ ಗಿಂತ ಈ ಎರಡೂ ಮಾದರಿಗಳು ಸುಮಾರು 10 ಸಾವಿರ ರೂ. ಕಡಿಮೆ ದರ ಹೊಂದಿದೆ. ಬುಲೆಟ್ 350 ಎಕ್ಸ್ ಬೆಲೆ ದಿಲ್ಲಿಯಲ್ಲಿ 1.12 ಲಕ್ಷ ರೂ. ಆಗಿದ್ದರೆ, ಇಎಸ್ 350 ಎಕ್ಸ್ ಬೆಲೆ 1.21 ಲಕ್ಷ ರೂ. ಆಗಿದೆ.
ಹೇಗಿದೆ ಬೈಕ್
ಹೊಸ ಬೈಕ್ ಗಳು ಬುಲೆಟ್ ಸ್ಟಾಂಡರ್ಡ್ ಮಾದರಿಯ ಬೈಕ್ ಗಳನ್ನು ಹೋಲುತ್ತವೆ.
ಹೊಸ ಕಲರ್ಗಳಲ್ಲಿ ಈ ಬೈಕ್ ಗಳು ಲಭ್ಯವಿವೆ. ಕಪ್ಪು, ನೀಲಿ, ಕೆಂಪು ಆಯ್ಕೆಯಲ್ಲಿವೆ. ಕೆಲವೊಂದು ವೆಚ್ಚದಾಯಕ ಅಂಶಗಳನ್ನು ಕೈಬಿಡಲಾಗಿದೆ. ಸಿಂಗಲ್ ಚಾನೆಲ್ ಎಬಿಎಸ್, ಸೆಲ್ಫ್, ಕಿಕ್ ಸ್ಟಾರ್ಟರ್ ಇದೆ. 350 ಎಕ್ಸ್ ಬೈಕ್ ನಲ್ಲಿ ಎಂಜಿನ್ ಬೋರ್ಗೆ ಕಪ್ಪು ಬಣ್ಣ ಕೊಡಲಾಗಿದ್ದು ಟ್ಯಾಂಕ್ ಗೆ ರಾಯಲ್ ಎನ್ಫೀಲ್ಡ್ ಸಾಮಾನ್ಯ ಸ್ಟಿಕ್ಕರ್ ಹಾಕಲಾಗಿದೆ. ಇಎಸ್ 350 ಎಕ್ಸ್‌ನಲ್ಲಿ ಇಡೀ ಎಂಜಿನ್ ಕಪ್ಪು ಬಣ್ಣದ್ದಾಗಿದೆ. ಎರಡೂ ಬೈಕ್ ಗಳು ಹಿಂದಿನ ಬುಲೆಟ್‌ಗಳಷ್ಟೇ ಶಕ್ತಿಶಾಲಿ. 346 ಸಿಸಿ ಎಂಜಿನ್ 20 ಎಚ್ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಬಂದ ರತನ್ ಟಾಟಾ
ರಾಜೀವ್ಗಾಂಧಿ ಹಂತಕ ಪೆರಾರಿವೇಲನ್ ಬಿಡುಗಡೆ : ಕಾಂಗ್ರೆಸ್ ತೀವ್ರ ಆಕ್ಷೇಪ