ರೈಲು ಸೇವೆ ಅಭಿವೃದ್ಧಿಗೆ 18 ಸಾವಿರ ಕೋಟಿ ರೂ

Team Udayavani, Oct 22, 2019, 8:50 PM IST

ಹೊಸದಿಲ್ಲಿ: ರೈಲ್ವೇ ಸಚಿವಾಲಯ ಈಗಿರುವ ರೈಲು ಸೇವೆಗೆ ವೇಗ ನೀಡಲು ಸುಮಾರು 18 ಸಾವಿರ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆ ದಿಲ್ಲಿ-ಮುಂಬಯಿ ಮತ್ತು ದಿಲ್ಲಿ-ಕಲ್ಕತಾ ನಡುವಿನ ರೈಲು ಸೇವೆಯ ವೇಗವನ್ನು ಹೆಚ್ಚಿಸಲಿದೆ. ಈ ಉಭಯ ರೈಲು ಮಾರ್ಗಗಳಲ್ಲಿ ಗಂಟೆಗೆ 160 ಕಿ.ಮೀ. ವೇಗ ಕಲ್ಪಿಸಲು ಇದು ಅನುವು ಮಾಡಿಕೊಡಲಿದೆ.

ಈ ಯೋಜನೆ ಪೂರ್ಣಗೊಳ್ಳಲು 4 ವರ್ಷಗಳು ಬೇಕಾಗುವ ಸಾಧ್ಯತೆ ಇದೆ. ಈ ಯೋಜನೆಯಲ್ಲಿ ದಿಲ್ಲಿ-ಮುಂಬಯಿ ಮತ್ತು ದಿಲ್ಲಿ-ಕಲ್ಕತಾ ಮಾರ್ಗಗಳಲ್ಲಿ ಗಂಟೆಗೆ 160 ಕಿ.ಮೀ. ವೇಗದ ಜತೆಗೆ ಮುಂಬಯಿ ಅಹಮದಬಾದ್‌ ನಡುವೆ ಸಂಚರಿಸಲಿರುವ ಬುಲೆಟ್‌ ರೈಲು ಯೋಜನೆಯೂ ಇದರಲ್ಲಿ ಸೇರಿದೆ. ಬುಲೆಟ್‌ ರೈಲು ಗಂಟೆಗೆ 320 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಮುಂದಿನ 3 ವರ್ಷಗಳಲ್ಲಿ 68 ಸಾವಿರ ಬ್ರಾಡ್‌ಗೆàಜ್‌ ರೈಲು ಪಥ ವಿದ್ಯುತೀಕರಣಗೊಳ್ಳಲಿದೆ. ರೈಲುಗಳಲ್ಲಿ ಬಯೋ ಟಾಯ್ಲೆಟ್‌ ಸೇವೆ ವಿಸ್ತರಿಸಲಿದೆ.

ಈಗ ರೈಲುಗಳ ಗರಿಷ್ಠ ವೇಗ 99 ಕಿ.ಮೀ. ಇದ್ದು, ದಿಲ್ಲಿ-ವಾರಣಸಿ ನಡುವೆ ಸಂಚರಿಸುವ ವಂದೇ ಭಾರತ್‌ ರೈಲು ಮಾತ್ರ ಗಂಟೆಗೆ 104 ಕಿ.ಮೀ. ವೇಗದೊಂದಿಗೆ ಚಲಿಸುತ್ತಿದೆ. 160 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಬೇಕಾದರೆ ಈಗಿರುವ ಪಥಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಇದರಲ್ಲಿ ಲೆವೆಲ್‌ ಕ್ರಾಸಿಂಗ್‌ಗಳು, ಸಿಗ್ನಲ್‌ಗ‌ಳು ಎಲ್ಲವೂ ಬದಲಾಗಬೇಕಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ