ಅಗರ್ತಲಾ:5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ
Team Udayavani, May 30, 2019, 3:49 PM IST
ಅಗರ್ತಲಾ: ಅಂದಾಜು 5 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ತ್ರಿಪುರಾ ಪೊಲೀಸರು ಕಳೆದ ಒಂದುವರೆ ತಿಂಗಳೊಳಗೆ ಜಪ್ತಿ ಮಾಡಿ ನಾಶ ಮಾಡಿದ್ದಾರೆ.
ಗುಪ್ತಚರ ಡಿಐಜಿ ಎಲ್ ಡಾರ್ಲಾಂಗ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 6,539 ಕೆಜಿ ಗಾಂಜಾ ವನ್ನು ಸುಟ್ಟು ಹಾಕಲಾಗಿದೆ.37,758 ಕಫದ ಸಿರಪ್ ಬಾಟಲ್ಗಳು , 64,215 ಮಾತ್ರೆಗಳು ಮತ್ತು 360 ಗ್ರಾಂನಷ್ಟು ಹೆರಾಯಿನ್ನನ್ನು ವಶಕ್ಕೆ ಪಡೆಯಲಾಗಿದೆ.
ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ಹಲವರನ್ನು ವಶಕ್ಕೆ ಪಡೆದಿದ್ದು ಕಾರ್ಯಾಚರಣೆ ಮುಂದುವರಿಸಿದ್ದಾರೆ.